ನನ್ನವಳ
ಕದ್ದು ಮುಚ್ಚಿ
ನೋಡುತ್ತಿರುವಾಗ
ನಿಂತ
ಜಾಗದಲ್ಲಿ
ಬರುವ
ಹಾಗಿದೆ
ಮಳೆ
ತಿರುಗಿ
ನೋಡದ ನೀನು
ಕಣ್ಮುಚ್ಚಿ
ಮೌನವಾಗಿ
ಕೂತಿರುವಾಗ
ಕೂತ ಜಾಗದಲ್ಲಿ
ಸುರಿಯುತ್ತಿದೆ
ಹೂ ಮಳೆ-
"ಹೂಮಳೆ"
ಮಸುಕು ಮುಂಜಾನೆಯಲ್ಲಿ
ಮಬ್ಬಾದ ಕಿರಣ
ಮಂದಾಗಿ ಲಾಲಿಸುವ ಇಬ್ಬನಿ
ಜೋ ಎಂದು ಉದುರುವ ನಿನ್ನ ಹನಿಗಳ ರಿಂಗಣ
ಕನಸುಗಳ ರೆಪ್ಪೆ ತೆಗೆದು ನಿನ್ನ ನೋಡುವಾಗ
ಒಮ್ಮೆ ನಿನ್ನ ಪ್ರೇಯಸಿಯಾಗಬೇಕೆನಿಸಿದೆ ವರ್ಷ!
ಮನ ತಲ್ಲಣಿಸುವ ಹನಿಗಳ ರಿಂಗಣಕ್ಕೆ
ಸೋತ ಮನವಿದು
ಹನಿಗಳ ರಾಶಿಯಲ್ಲಿ
ಒಲವಿನ ಗೋಪುರ ಕಟ್ಟೋಣ ಬಾ ವರ್ಷ
ಕನಸಿನ ಮೂಟೆ ಬಿಚ್ಚಿ
ಸಂತಸದ ಹೂಮಳೆಯಲ್ಲಿ ತೇಲಾಡೋಣ!!-
ಎರಡೂ ಕೈ ಸೇರಿದರೆ
ಚಪ್ಪಾಳೆ
ಎರಡೂ ಮನಸ್ಸುಗಳು ಬೆರೆತರೆ
ಬದುಕು ಹೊಂಬಾಳೆ
ಇಬ್ಬರಲಿ ಪರಸ್ಪರ ಹೊಂದಾಣಿಕೆ ಇದ್ದರೆ
ನಿತ್ಯವೂ ಪ್ರೀತಿಯ ಹೂಮಳೆ-
ಹತ್ತಾರು
ಹೂಗಳವು ದಿನಂಪ್ರತಿ
ಹೊಸಕಿ
ಹಾಕಲ್ಪಡುತ್ತವೆ,
ಹೊಸಕುವವರು
ಹೊರಗಿನವರಾಗಿರುವುದಿಲ್ಲ...-
ಒಲವ ಮಳೆ
************************
ನಿನ್ನ ಪ್ರೀತಿ ಕೆಲವೊಮ್ಮೆ,
ಅನಾಹುತ ತರುವ ಅತಿವೃಷ್ಟಿಯೇ ಸರಿ..!!
ನಮ್ಮೀರ್ವರ ಹೃದಯಗಳ ಮುನಿಸಿನ ಘರ್ಷಣೆಗೆ,
ನಿನ್ನ ಆಕ್ರೋಶದ ಮಾತುಗಳ ಸಿಡಿಲಿಗೆ,
ನನ್ನ ಕಣ್ಣ ಕರಿಮೋಡಗಳು ಸುರಿಸೋ ಕಣ್ಣೀರದು..
ಭಾರೀ ಮಳೆಯಂತೆ..!!
ಈ ಧಾರಾಕಾರ ಮಳೆಗೆ ಒಲವ ಭಾವಗಳು,
ನೆನಪಿನ ಸಮೇತ ಕೊಚ್ಚಿಹೋಗದೆ ಉಳಿದರೆ ಸಾಕೆನ್ನುವಂತಾಗಿದೆ..!!
ಮಳೆ ನಿಂತ ಮೇಲೂ ಎಲೆಗಳಿಂದ ತೊಟ್ಟಿಕ್ಕುವ ಹನಿಗಳಂತೆ,
ಎಡೆಬಿಡದೆ ಭೋರ್ಗರೆದ ವರ್ಷಧಾರೆಯ ನಂತರ,
ತಂಪಾಗಿ ಹಿತವಾಗಿ ಬೀಸೋ ತಂಗಾಳಿಯಂತೆ..
ಮತ್ತೆ ಬರಲಿ ಪ್ರೀತಿ..
ಆದರೆ ಈ ಬಾರಿ..ಅಬ್ಬರವಿಲ್ಲದ ಹೂಮಳೆಯಂತೆ..!!-
ಬೀಸಿ ಬೀಸಿ ಬಂದ ತಂಗಾಳಿ
ಅದರಲ್ ಆಗಲೇ ಅರಳಿದ ಹೂವು ತಂದಿತ್ತ
ಮುಂಗಾರು-ಹಿಂಗಾರು ಮಳೆಯಾದಂತೆ
ಹೂಮಳೆಯಾಗಿತ್ತ
ಎಲ್ಲೆಡೆ ಹೂವೇ ಹರಡಿತ್ತ...
ಹಾದಿಯಲೆಲ್ಲಾ ಕೊಚ್ಚೆ ಗುಂಡಿಗಳ್ ಉಳಿದಂತಲ್ಲ
ಮುಳುಗಿ ಹೋಗುವ ಎತ್ತರ ಹೂವೇ ಇತ್ತಲ್ಲ....
ಸೋರುವ ಸೂರಿನ ಒಳಹೊರಗೆಲ್ಲಾ ತೊಟ್ಟಿಕ್ಕಲು ಮಳೆ ಹನಿಯು ಇದ್ದಿಲ್ಲ
ಅಲ್ಲೆಲ್ಲಾ ಹೂವೇ ಇತ್ತಲ್ಲ....
ನೆನೆದರೂ ಬಾರದು ಶೀತ ರೋಗವು
ಇನ್ನೂ ಮತ್ತಿನ್ನು ಎನ್ನುವ ಹಂಬಲ ಕಲಿತದ್ದು ಇಲ್ಲೆನಾ...?
ಹೂಮಳೆ ಕಂಪು ಹಿಂಗೇನೇ....
ಬಿಳಿಯ ಮಂದಾರ ಕೆನ್ನನೇ ತಾವರೆ
ಹೊನ್ನ ಸಂಪಿಗೆ ನೀಲ ನೈದಿಲೆ
ನಾಚುವ ಮಲ್ಲಿಗೆ ಎಲ್ಲವೂ ಅಲ್ಲಿತ್ತ
ಜೊತೆಯಲಿ ಇನ್ನೂ ಹೆಚ್ಚಿತ್ತ
ಹೂಗಳ ಬಗೆಯ ಲೆಕ್ಕವು ಸಿಕ್ಕುತ್ತಾ...?
ಹೂವನು ಆರಿಸುವ ಹುಚ್ಚಿತ್ತ ನನಗೆ
ಕೈಯಲಿ ಹಿಡಿದು ಮುದ್ದಿಸುವ ಬಯಕೆಯು ಹೆಚ್ಚಿತ್ತ....-
ಬೆಳದಿಂಗಳ ನಗು ಚೆಲ್ಲಿ
ಮುತ್ತುಗಳ ಮಳೆಯಲ್ಲಿ
ಸಮವಸ್ತ್ರಗಳ ಮಲ್ಲಿ
ನೀ ಏಕೆ ಕುಳಿತಿರುವೆ ಇಲ್ಲಿ
-