ಭಾವಗಳ
ಹಂಗಿನೋಲಗಕೆ
ಅಕ್ಷರಗಳ ಮರಣ;
ಅಪೂರ್ಣವಾದದ್ದು
ಕವಿತೆ..
ಮತ್ತದರ ವ್ಯಥೆ....ಕಥೆ...!!-
🍂 Mrunmayi🍂
(✍️ಹಂಸಪ್ರಿಯ)
1.7k Followers · 589 Following
ಕೆಲವೊಂದು ಕಲ್ಪನೆ ಕೆಲವೊಂದು ಅನುಭವ
ಮತ್ತುಳಿದದ್ದೆಲ್ಲವೂ ವಾಸ್ತವ..😊
❣️✍️ಮನದ ನೋವಿಗೆ ಮುಲಾಮು ಈ ನನ್ನ ಬರಹ... read more
ಮತ್ತುಳಿದದ್ದೆಲ್ಲವೂ ವಾಸ್ತವ..😊
❣️✍️ಮನದ ನೋವಿಗೆ ಮುಲಾಮು ಈ ನನ್ನ ಬರಹ... read more
Joined 24 June 2018
14 APR AT 22:27
13 APR AT 22:09
ಅಕ್ಕರೆಯ ಅಕ್ಷರವ
ಬಿಂಬಿಸುವನವನು
ಅವನೊಲುಮೆಯಿಂದ...
ಸಕ್ಕರೆಯ ಸವಿಯಂತಿಹ
ಮೆಲುಭಾವದಿಂದ...!!-
8 APR AT 14:33
ಮನವ ಮುರಿವ
ಮಾತೇಕೆ ಮುಗುದೇ,
ಮೊಗದಲೊಮ್ಮೆ
ಮಗುವಿನಾ ನಗುವಿತ್ತು
ಬಿಡು ಸಾಕು,
ಮನದುಂಬ ಮೊಗೆ
ಮೊಗೆದು ಒಲವಿತ್ತು ಕಾಯುವೆ..!!-
8 APR AT 9:43
ಬದುಕೆಂಬುದು
ಬಲೂನಿನಂತೆ,
ಪ್ರೀತಿಯೆಂಬ
ಪ್ರಾಣವಾಯು
ತುಂಬಿದ್ದರಷ್ಟೇ
ನಲಿವ ಬಾಳು
ಆಗಸದೆತ್ತರಕೆ
ಹಾರಲು ಸಾಧ್ಯ..-
8 APR AT 9:37
ಅವನೋ,
ಬಹುಕಲಾಕಾರ..
ತನ್ನಡೆಗೆಲ್ಲರ ಸೆಳೆದು
ತನಗೇನರಿವಿಲ್ಲವೆಂಬಂತೆ
ಬಿಂಬಿಸುವ ಮೋಡಿಗಾರ..!!-
7 APR AT 21:12
ತಣ್ಣನೆಯ ತಂಗಾಳಿಯಲಿ
ತಿಳಿ ತಂಪಿನ ಮುಸ್ಸಂಜೆಯಲಿ
ಲೋಲಾಡುವ ಮನದರಮನೆಯಲಿ
ಅವನ ನೆನಪ ಅಲೆಗಳೇ ಪ್ರೀತಿಯ ಜೋಕಾಲಿ..-