"ಸಿದ್ದರೂಢ "
ಸಿದ್ದರೂಢ ಎಂದರೆ
ಶಿಲೆಗೂ ಜೀವ ಬರೀಸಿದ ಜಗನ್ನಾಥ
ಮರವನ್ನು ಮಾತಾಡಿಸಿದ ಪುಣ್ಯಾತ್ಮ
ನನಗೂ ಜೊತೆಯಾದ ಭಗವಂತ
ಈ ನನ್ನ ಸಿದ್ದರೂಢ ಸಂಗಮೇಶ
ಅನ್ನವನ್ನು ಪಾಯಸ ಮಾಡಿದ
ಪಾಯಸವನ್ನು ಅಮೃತ ಮಾಡಿದ
ಅಮೃತ ನಮಗೆ ಕುಡಿಸಿದ
ತಾನು ವಿಷ ಸೇವಿಸಿದ ನನ್ನ ದಯಮಯ ಸಿದ್ದರೂಢ
ಎಷ್ಟು ಹೊಗಳಿದರು ಸಾಕಾಗದು
ಎಷ್ಟು ಬರೆದರು ಪುಸ್ತಕ ತುಂಬದು
ನಿನ್ನ ಕೆತ್ತಿದಷ್ಟು ನೀ ಅಮರ
ಎನ್ನ ಹೃದಯದ ಒಡೆಯ ಸಿದ್ದರೂಢ
ಇರಲಿ ನಿನ್ನ ದಯೆ ಎಲ್ಲರಿಗೂ ಆರೂಢ. 🙏🏻-
"ಸ್ವರ್ಗಕ್ಕೂ ನೀ ಮಿಗಿಲು ಬಾಬಾ "
ಮನೆಯ ದೀಪ ಬೆಳಗಲು
ನಕ್ಷತ್ರ ದೀಪ ಹೊಳೆಯಲು
ಇದನ್ನು ಅನೋನ್ಯವಾಗಿ ನೋಡಲು
ನೀನೇ ಸ್ಫೂರ್ತಿಯಾದೆ ಬಾಬಾ
ಕತ್ತಲೆಯಲ್ಲಿ ನೀ ನಿಂತೆ
ನರಕ ನೋವುಗಳಲ್ಲಿ ಮಿಂದೆ
ನಿಸ್ವಾರ್ಥ ನಿರ್ಮಲದಲ್ಲಿ ದುಡಿದೆ
ನಮ್ಮನ್ನು ಪ್ರಕಾಶಿಸುವಂತೆ ಮಾಡಿದೆ ಬಾಬಾ
ಮೇಲು -ಕೀಳುಗಳಿಗೆ ಕೀ ಹಾಕಿದೆ
ಮನಸ್ಸಿನ ಮುಖವಾಡಕ್ಕೆ ನೈಜರೂಪ ನೀಡಿದೆ
ಮಂದಿರದಲ್ಲಿ ಕುಳಿತು
ಜಗತ್ತನ್ನೇ ಕಟ್ಟುವಂತೆ ನೀ ಮಾಡಿದೆ ಬಾಬಾ
ಸಂವಿಧಾನ ತಂದೆ
ಸೌಹಾರ್ದತೆ, ಸ್ನೇಹ, ಸಮ್ಮಿಲನ, ಸಾಹಬಾಳ್ವೆ ಹೆಚ್ಚಿಸಿದೆ
ಸಮಾನತೆಯ ಒಡೆಯ ನೀನಾದೆ
ಸ್ವರ್ಗಕ್ಕೂ ನೀ ಮಿಗಿಲು ನೀ ಮಿಗಿಲು ನೀ ಮಿಗಿಲು ಬಾಬಾ!!
-ಅಕ್ಕಮಹಾದೇವಿ ಎಸ್ ಚಿಗರಿ.-
"ವರ್ಷ "
ವರ್ಷ ನಿನಗಾಗಿ
ಹೃದಯಕ್ಕೆ ಜುಲ್ಮಾನೆ ಕಟ್ಟಿ ಕುಂತಿರುವೆ
ಬಾ ಒಮ್ಮೆ, ಹೃದಯದ ಅಂಗಳಕ್ಕೆ
ಗರಿಮುರಿದ ಕನಸುಗಳಿಗೆ
ತಂಪಿನ ಸುಗಾಳಿ ಬೀಸಿ
ಬರಡು ಹೃದಯಕ್ಕೆ ವಸಂತವಾಗಲು!!-
ದಾಟಬೇಕಿದೆ ಒಲವೇ
ಹೃದಯಕ್ಕೆ ಅಂಟಿದ ಸೇತುವೆ ಅಲ್ಲ
ನಿದ್ದೆಗೇಡಿಸಿದ ಕನಸಿನ ಕೆಸರನ್ನ!-
ನಗುವಾಗೆಯಿಲ್ಲ
ದೃಗಜಲ ಸುರಿಸುವಾಗೆಯಿಲ್ಲ
ನಿನ್ನತ್ತ ಸುಳಿದಾಗ
ನೆತ್ತಿಮ್ಯಾಲೆ ನೆರಳಿಲ್ಲ
ಹೆಪ್ಪುಗಟ್ಟಿದ ಮೆದುಳಿನಲ್ಲಿ
ಮೆತ್ತಲಿ ಹೇಗೆ ಹಸಿನೆಪ
ಮುಪ್ಪುಗಟ್ಟಿದ ಹೃದಯದಲ್ಲಿ
ಬಿತ್ತಲಿ ಹೇಗೆ ಬಿಸಿನೆತ್ತರ
ಸಾಕಾಗಿ ಕುಂತ ಸಾಕಿ ನಾನು
ಸಾಗುಸುವುದು ಹೇಗೆ ಸಗ್ಗ
ಸಂಜೆಯ ನೆಪ
ಸವಿಯುವ ಈ ಟೀ ಗೆ!-
ನೀ ನನ್ನೊಳಗಿನ ಕಾವ್ಯವಾದರೆ
ನಾ ನಿನ್ನ ಅರ್ಥೈಸಿ ಬರೆಯುವ ಲೇಖನಿಯಾಗುವೆ.-
"ಪರೀಕ್ಷೆ"
ಕೊಲ್ಲುವುದಾದರೆ
ನಿದ್ರೆಗೆಟ್ಟ ಹೃದಯಕ್ಕೆ ಒಂದು ರಂದ್ರಾಕಿಬಿಡು
ಪದೇ ಪದೇ ಶ್ವಾಸಗಟ್ಟಿಸಬೇಡ
ಬಡಪಾಯಿ ಕನಸು ನೀರಿರದ ಮೀನಿನಂತಾದಿತು!-
"ಸಿಂಪಡಿಯದ ಬೇನೆ"
ಸಂಜೆ ಇಳೆಗೆ ಬಂದಾಯಿತು
ನನ್ನ ಕೈ ಹಣೆಗೆ ಇಟ್ಟಾಯಿತು
ಹೆಜ್ಜೆಗಳು ಮುಂದಾದವು
ನಿನ್ನ ನೆರಳು ಮಾತ್ರ ಗೋಚರಿಸಿತು ಅಪ್ಪ
ಪ್ರೀತಿನ ಜೇಬಿನಲ್ಲಿ
ಇಟ್ಟುಕೊಂಡು ಬಂದಿಹಿದೆನ್ನುವ ಕುತೂಹಲ
ನೆರಳು ಬಿಗಿದಪ್ಪಿ ಕೊಂಡರೆ
ಕೆರೆಕಣ್ಣಲ್ಲಿ, ಹೃದಯ ನೆಲೆದಲ್ಲಿ ಅಪ್ಪ
ಈ ಬಿಳಿ ಹಾಳೆಗೂ, ಸುರಿಯುವ ಶಾಹಿಗೂ
ನನ್ನ ನಿನ್ನ ನೋವಿನ ನಂಟಿದೆ
ಒಮ್ಮೆ ಅವಕಾಶ ಸಿಕ್ಕರೆ
ಒದ್ದೆಯಾದ ಹಾಳೆಗೆ ನಿನ್ನ ಮಾತಿನ ಲೇಹ ಹಚ್ಚು ಅಪ್ಪ.
-
ಅವಳು ಅಂದ್ರೆ ಇಗೇನೆ
ಅವಳ ನಗು ಎಂದರೆ
ಹೂವಿನ ಸಂತೆ ಇದ್ದಂತೆ
ಅವಳ ಮಾತು ಎಂದರೆ
ಹೃದಯ ಕಟ್ಟಿಯಾಕಿ
ಪರಿಮಳ ಬೀರುವ ಪಾರಿಜಾತದಂತೆ.-
ಹೇ ಹುಚ್ಚು ಮನವೇ ಕೇಳಿ ಬಿಡು ಒಮ್ಮೆ
ನೆರಳು ನೀರಾಗಿದೆ
ಝರಿಯಾಗಿ ಹರಿವರೆಲ್ಲಾ
ಅರಿತು ಬಾಳುವರಿಲ್ಲಾ
ನಡೆ -ನಡೆ ನಿನ್ನಡೆಗೆ
ನಿನ್ನ ಆತ್ಮದಡೆಗೆ.-