ಕಣ್ಣೆದುರಲ್ಲಿ
ನೀ ಕಾಣದಿದ್ದರೂ,
ಮನದಲಿ ನಿನ್ನ
ಬಿಂಬವಿದೆ ಸದಾ..🥰
ದಿನವಿಡೀ ಜೊತೆಗೆ
ಒಡನಾಟವಿರದಿದ್ದರೂ,
ಎದೆಗೂಡಲ್ಲಿ ನಿನ್ನ ಛಾಯೆ
ಜೊತೆಗಿದ್ದು ತರುವುದು ಮುದ..🥰
ಸನಿಹದಲಿ ನೀ
ಇಲ್ಲದಿರೆ ಏನು..??
ನನ್ನಣ್ಣನಾಗಿ ನನ್ನೊಳಗೊಂದಾಗಿ
ಇರುವೆ ನೀನು..🥰
Happy Birthday ಕಣೋ..
ನನ್ಮುದ್ದು ಅಣ್ಣ🥳🥳🥰😘
— % &-
ಜೀವನ್ದಲ್ಲಿ ಏನೇ ಆದ್ರೂ ನಗ್ತಾ ನಗ್ತಾ ಇರ್ಬೇಕು ಅಂತಾರೆ..
ನಮ್ ಆಯಸ್ಸು ಹೆಚ್ಚುತ್ತಂತೆ ನಕ್ಕರೆ..!
ಆದ್ರೆ ಆ ನಗುವಿನಲ್ಲೂ ಇದೆ ವಿಧಗಳು ಹಲವು..
ಇನ್ನೊಬ್ರ ನೋಡಿ ಅಪಹಾಸ್ಯ ಮಾಡಿ ನಕ್ರೆ,
ಆ ನಗುವಿನಿಂದ ಅವರಿಗಾಗೋದು ನೋವು..!
ಎಲ್ಲರ್ಜೊತೆ ಬೆರೆತು ಖುಷೀನಾ ಹಂಚಿ ಸಂತೋಷ ಪಡೋರಾಗಿ..
ನೀವೂ ನಕ್ಕು,ಇನ್ನೊಬ್ರ ನಗುವಿಗೆ ಕಾರಣವಾಗಿ..!!
— % &-
ಕೆಲವು ಬಂಧಗಳಿಗೆ ನಿರ್ದಿಷ್ಟ ಹೆಸರಿಲ್ಲ,
ಚೌಕಟ್ಟಿಗೂ ಮೀರಿದ ಎತ್ತರ ಅದರದು..
ಮನಸಿಗೆ ಹತ್ತಿರವಾದ ಹೆಸರು ಅದಕಿರುವುದು..❣️
ಇನ್ನೂ ಕೆಲವು ಸಂಬಂಧಗಳಿಗೆ ಅರ್ಥವೇ ಇಲ್ಲ,
ಕೇವಲ ಹೆಸರಿನಲಷ್ಟೇ ಹತ್ತಿರ ಎನಿಸುವುದು..
ರಕ್ತಸಂಬಂಧಗಳೆಂಬ ಹಣೆಪಟ್ಟಿ ಬಾಯಿಮಾತಿಗಷ್ಟೇ ಇರುವುದು..💔
— % &-
ಮಾತಿಗೆ ಮಾತು ಬೆಳೆಯುತ್ತಾ ಹೋಗಿ,
ಎತ್ತೆತ್ತಲೋ ಅರ್ಥವಿಲ್ಲದೆಡೆ ಸಾಗಿ..
ಕೊನೆಗೆ ಮಾತುಬಿಡುವ ವರಸೆಗೆ ಕೊರಗಿ,
ಮಾತನಾಡುವ ಮಾತಿಗೇ ಬೇಸರವಾಗಿ..
ಮಾತಲ್ಲಿ ದೊರೆಯದ ಪ್ರಶ್ನೆಗೆ ಉತ್ತರ,
ಅಂತರಾತ್ಮದ ಮೌನದಲಾಗಬಹುದೇ ನಿಚ್ಚಳ ಗೋಚರ..!— % &-
ಬೇಡದ ನೆನಪುಗಳ..
ನೋವು ಕೊಟ್ಟ ಮನಗಳ..
ನೆರಳ ಛಾಯೆಗಳು ಸಹ ಮಸುಕಾಗಲಿ..!
ಅಲ್ಲಿಂದ ಕಲಿತ ಪಾಠಗಳು..
ಪಡೆದ ಅನುಭವಗಳು..
ಶಾಶ್ವತವಾಗಿ ಮರೆಯಾಗದೆ ಉಳಿಯಲಿ..!
ನಿನ್ನೆಗಳ ನೋವುಗಳ ನೆನಪಲ್ಲಿ..
ಇಂದು ಕಾಣುವ ಖುಷಿ..
ಆನಂದದ ನಗು ಹಾಳಾಗದಿರಲಿ..!!— % &-
ಈ ಜಗದಲ್ಲಿ ಒಳ್ಳೆಯವರು ಎಂದು,
ಅನ್ಯರ ಬಾಯಲ್ಲಿ ಹೇಳಿಸಿಕೊಳ್ಳುವುದು ತುಂಬಾ ಕಷ್ಟ..!
ಆದರೆ ಕೆಟ್ಟವರಾಗಲು ಹೆಚ್ಚು ಸಮಯ ಬೇಡ,
ಕೆಡುಕೂ ಸಹ ಮಾಡಬೇಕೆಂದೇನಿಲ್ಲ..!
ತಪ್ಪುಗಳ ಎತ್ತಿ ತೋರಿ ತಿಳಿ ಹೇಳಿದರೆ ಸಾಕು..
ತಿದ್ದಲು ಹೋದ ನೀವೇ ಆ ಕ್ಷಣದಿಂದ,
ಅವರ ಕಣ್ಣಿಗೆ ಯಾವಾಗಲೂ ಕೆಟ್ಟವರಾಗೇ ಕಾಣುವಿರಿ..!!
— % &-
🎂ಹುಟ್ಟು ಹಬ್ಬದ ಶುಭಾಶಯಗಳು ಪ್ರಜ್ವಲ್ ಬ್ರೋ🎂
✨✨✨✨✨✨✨✨✨✨✨✨✨✨
ಏಕಾಂತವೆನಗೆ ಹಿತವೆನುತ,
ಮಾತು ಮಾತಿಗೂ ಅಕ್ಕನೆಂದು ಕರೆಯುತ್ತಲೇ..
ಮನಕೆ ಹತ್ತಿರವಾದವನೀತ..!
ಅವಳಿಗೊಂದಿಷ್ಟು ಸಾಲುಗಳ ಬರೆಯುತ,
ಒಲವ ಚೆಲ್ವ ಭಾವಗಳಿಂದ ಪದಗಳ ಮಾಲೆ ಕಟ್ಟಿ..
ತನ್ನ ಕನಸಿನ ರಾಣಿಗೆ ಅರ್ಪಿಸುತ್ತಿರುವವನೀತ..!
ಬದುಕಿನ ಬವಣೆಗಳನ್ನು ಬರಹವಾಗಿಸುತ,
ತನ್ನ ನೋವುಗಳನ್ನೆಲ್ಲಾ ಹಾಳೆಗಿಳಿಸಿ..
ನಗುವಲ್ಲೇ ಎಲ್ಲವ ಮರೆಯುವವನೀತ..!
ಅಮ್ಮನ ಅತೀ ಮುದ್ದಿನ ಮಗನಿವನು ಖಂಡಿತ,
ಅನಿಸಿದ ಖಾದ್ಯಗಳನು ಕ್ಷಣಮಾತ್ರದಲಿ ತಯಾರಿಸಿ..
ಓದುಗರಿಗೆ ಪಟದಲ್ಲೇ ಉಣಬಡಿಸುವ ಬಾಣಸಿಗನೀತ..!
ಇವನ ಜನ್ಮದಿನದಂದು,ಒಳ್ಳೆಯದಾಗಲೆಂದು ಆಶಿಸುತಾ,
ಬಯಸಿದ ಬಯಕೆಗಳೆಲ್ಲಾ ಈಡೇರಲೆಂಬುದು ನನ್ನ ಮನದಾಳದಿಂಗಿತ..!!— % &-
******************************************************************************
ತಗ್ಗಿ ಬಗ್ಗಿ ನಡೆಯಬೇಕು ಬಾಳಲಿ ನಿಜ.
ಆದರೆ ಎಲ್ಲಿ ಯಾರ ಬಳಿ ಎಂಬುದು,
ತಿಳಿಯದಿದ್ದರೆ ದಕ್ಕುವುದು ಸಜ..!
ನಿನಗೆ ಬೆಲೆ ಇಲ್ಲದ ಕಡೆ ತಲೆ ಬಾಗಲೇ ಬೇಡ.
ಸಾಧಿಸಿ ತೋರಿ ಬಳಿಕ ಉತ್ತರ ಕೊಡಬೇಕು ಅಲ್ಲಿ,
ಅದನು ಎಂದಿಗೂ ಮರೆಯಲೇ ಬೇಡ..!
ಗೌರವದಿ ತಲೆಬಾಗು ನಿನ್ನ ಗೆಲುವ ಸಂಭ್ರಮಿಸೋ ಹಿರಿಯರ ಮುಂದೆ.
ಅಕ್ಕರೆಯ ತೋರಿ ಅಹಂಕಾರವ ಬಿಡು,
ಕಷ್ಟಕ್ಕೆ ಕೈ ಜೋಡಿಸೋ ಸ್ನೇಹಿತರ ಮುಂದೆ;ಹಿತೈಷಿಗಳ ಮುಂದೆ..!
ಅಶಕ್ತರ ಎದುರು ಯಶದ ಪ್ರದರ್ಶನ ಸಲ್ಲದು.
ದರ್ಪತನವ ತೋರದೆ ಪ್ರೀತಿಯಲೇ ವ್ಯವಹರಿಸು,
ಕಿರಿಯರ ಮುಂದೆ..!
ಚಿಕ್ಕ ಗೆಲುವಿನಲಿ ಗತ್ತಿನಲಿ ಬೀಗಿದರೆ ಅದು ಸಾಧನೆಗೆ ಅವಮಾನ.
ಆದರ್ಶರಾಗಿ ಬಾಳಬೇಕು ಮುಂದಿನ ಪೀಳಿಗೆಗೆ,
ಆಗಲೇ ಹುಡುಕಿ ಬರುವುದು ಸನ್ಮಾನ..!!
— % &-
ದೀರ್ಘವಾಕ್ಯದ ಕೊನೆಗೊಂದು ಚಿಕ್ಕ ಚುಕ್ಕಿಯಿಂದ,
ಪೂರ್ಣವಿರಾಮವಿಟ್ಟರೆ ಆ ಮಾತು ಅಲ್ಲಿಗೆ ಕೊನೆಗೊಂಡಂತೆ.
ಆದರೆ, ಪಕ್ಕದಲ್ಲೇ ಇನ್ನೂ ಕೆಲವು ಚುಕ್ಕಿಗಳಿಟ್ಟರೆ...
ನಿಂತಿಲ್ಲ ಇನ್ನೂ ಮುಂದುವರೆಯುತ್ತದೆ ಎನ್ನುವಂತೆ.
ಬಾಳದಾರಿಗೆ ಪೂರ್ಣವಿರಾಮ ದೊರೆಯುವುದು,
ಒಂದೇ ಬಾರಿ ; ಅದು ಮರಣದಲ್ಲಿ.
ಅಲ್ಲಿಯವರೆಗೂ ನಿಲ್ಲದೇ ಮುಂದುವರೆಯುತ್ತಲೇ ಇರಿ...— % &-
ಹೂವು ಎಂದಿಗೂ ಎರಡು ಬಾರಿ ಅರಳುವುದಿಲ್ಲ..
ಇರುವ ಒಂದು ದಿನದಲ್ಲೇ ಬಿರಿದು ಮನಸಾರೆ ನಕ್ಕು,
ಎಲ್ಲೋ ಒಂದು ಕಡೆ ಸೇರಿ ಸಾರ್ಥಕತೆ ಮೆರೆಯುವುದು..!
ಸಂತೋಷದಿಂದಲೇ ಬಾಡಿ ಜೀವವ ಕೊನೆಗಾಣಿಸುವುದು..!
ನಮ್ಮ ಈ ಜನ್ಮವೆಂಬುದು ಹಾಗೆಯೇ,
ಇನ್ನೊಮ್ಮೆ ಹುಟ್ಟಿ ಬರುವೆವೋ ಇಲ್ಲವೋ ಬಲ್ಲವರಿಲ್ಲ..!
ಎಷ್ಟು ದಿನ ಬದುಕುತ್ತೇವೋ ಅದನೂ ತಿಳಿದವರಿಲ್ಲ..!
ಇರುವಷ್ಟು ದಿನ ಪರರಿಗೆ ಕೇಡು ಬಯಸದೆ,
ಒಳ್ಳೆಯದೇ ಆಗಲೆಂದು ಹಾರೈಸೋಣ..!
ಹುಟ್ಟಿದ ಈ ಜನ್ಮಕ್ಕೆ ಅಲ್ಪಮಟ್ಟಿಗಾದರೂ..
ಸಾರ್ಥಕತೆ ಒದಗಿಸಿ ಖುಷಿಪಡೋಣ..!!
— % &-