ಮನಸಿನೊಳಗೆ
ಒಲವು ಆರಂಭ
ಕನಸಿನೊಳಗೆ ಭಾವನೆಗಳು ಜೀವಂತ
ಮೌನದೊಳಗಿನ ಮಾತುಗಳಿಗಿಲ್ಲ ಅಡ್ಡಿ ಆತಂಕ.
-
🌹ಭಾವ ಶರಧಿ🏹
(✍️ಜಯಶೀಲಾ S🌹)
1.2k Followers · 410 Following
ಮನಸನ್ನು ಕಾಡಿ, ಪದಗಳ ಹೂ ಅರಳಿ,ಕವನ ಕವಿತೆಗಳ ಮಾಲೆಯಾಗಿ, ನಿಮ್ಮೆಲ್ಲರ ಮನದೊಳಗೆ ನನ್ನ್ನೆಲ್ಲಾ ಸಾಲುಗಳ ಸ... read more
Joined 15 November 2018
13 HOURS AGO
27 SEP AT 19:44
ಶುದ್ಧ ನೀರಿನಂತಹ ಮನ
ಮಲಿನಗೊಳಿಸಲು ಸಾಧ್ಯವಾಗಲಿಲ್ಲ
ನೆಲೆಸಿ ಜೀವಿಸಲು ಯೋಗ್ಯತೆ ಇಲ್ಲ.-
24 SEP AT 11:22
ಪ್ರತಿ ಬರಹದಲ್ಲು
ನೀ ಜೊತೆಯಾಗಿ ಬರುವೆ
ಆದರೂ,ಅಪರಿಚಿತನಾಗಿ
ಅವಲೋಕನದೊಳಗುಳಿವೆ.
ಪರಿಚಯವಿಲ್ಲದ ಪಯಣಿಗ
ಅವಿನಾಭಾವ ಸಂಬಂಧಿಕ.
ನೀ ಜೊತೆಗಿದ್ದರೆ ಏಕಾಂತ
ನಗುವಿನ ಜೊತೆ ಜೀವನ ಜೀವಂತ .
-
24 SEP AT 8:27
ಮಾತು ಬಹಳ ಸರಳವಾಗಿ ಚೊಕ್ಕವಾಗಿತ್ತು
ಬಿಕ್ಕಟ್ಟಿಲ್ಲದ ಸಂಬಂಧದ ಬಿಡುಗಡೆಗೆ.
ಹೊಂದಾಣಿಕೆಯ ನೆಪ ಅನುಪಮವಾಗಿತ್ತು
ನೋವಿನ ಭಾರ ಜೀವನದ ದುಭಾರಿ ಕೊಡುಗೆಗೆ.-
20 SEP AT 22:37
ಅವನೆಂದರೆ ಕನಸಿನ
ಕಡುಹುಣ್ಣಿಮೆ ಬೆಳದಿಂಗಳು.
ಆಗಮಿಸಿವೆ ಹೃದಯದೂರಿಗೆ
ಭಾವನೆಗಳು ಮುಗಿಲು.
ಮನವೀಗ ಲಜ್ಜೆಯ ಗೂಡು
ಅವನೊಲವು ಮಧು ಕಡಲು .
ಮುಂಗುರುಳ ಮೃದುಲತೆಗೆ
ಹೆಚ್ಚಾಯ್ತು ಪ್ರಣಯದೊನಲು.
ಒಲುಮೆಯ ಸಿರಿಯೊಳಗೆ
ಮೈದುಂಬಿತು ನಗೆಹೊನಲು.-
20 SEP AT 9:28
ಕೆಲವು ಜಾಣರು ಒಂದೇ ಕಡೆ
ಅವರ ಜಾಣತನವನ್ನು ಪ್ರದರ್ಶಿಸುವುದಿಲ್ಲ
ಹಾಗೆ ಒಂದೇ ಕಡೆ ನೆಲೆಸುವುದು ಇಲ್ಲ.
ಜನರ ಕಣ್ಣಿಗೆ ಉಧಾರಿತನದ ಜೀವನ ಶೈಲಿ
ಮನಸ್ಸಿನ ಬುದ್ದಿ ಮಾತ್ರ ಗುಳ್ಳೇನರಿ.-