ಗೆಳೆಯ
ನನ್ನ ಗೆಳೆತನ ಮಾಡುವಾಗ ನೀನಂದೆ
ನಿನಗಾಗಿ ನಾನು
ಚಂದಿರನ ಹಿಡಿದು ತರಲೆ
ನಭೋಮಂಡಲದ ನಕ್ಷತ್ರಗಳ ಎಣಿಸಲೆ
ಎಂದು
ಈಗ ತಿಳಿಯಿತು ಗೆಳೆಯ
ಜೇಬಲಿದ್ದ ಚಿಲ್ಲರೆ ಎಣಿಸಲು
ಬರದ ದಡ್ಡ
ಎಂದು
ಗೋಪಾಲಕೃಷ್ಣ ಆರಗ-
ಸ್ಪಂದಿಸುವ ಗುಣಗಳಿಗೆ
ರಪ್ಪೆಗಳಂತಿಹಳು
ಹೊಲದ ಕಾಳನೆತ್ತಿ
ಹೊಂದಿಸೊಂದಿಸಿ ತರುವವಳು
ಬರಹಗಳಲಿ ಇವಳು
ಮಿಂದ್ದೆದ್ಧು ಬಂದವಳು
ಕಾಲದಲ್ಲಿನ ಕಾಯಕದೊಳ್
ಉಸಿರಾಗಿ ನಿಂತಿಹಳು
ಈ ಸ್ವಭಾವಕ್ಕೆ ಶೋಭೆಯಾಗಿ
ನಿಲುವವಳು
ಬರಹದ ಕೊನೆಗವಳು
ರುಜುವಾಗಿ ನಿಂತವಳು
ನಾ ಬರೆಯುವಾಗ
ನೀನಾಗದಿರು ಚಂಚಲ
ಓ
ಮನಸೆ
ಜಿ ಕೆ ಆರಗ
-
ಪ್ರೀತಿಯ ಬಲೆಯಲ್ಲಿ ಬೀಳಿಸುವಾಗ
ಹೇಳಿದ
ನಮ್ಮಿಬ್ಬರ ಪ್ರೀತಿಗೆ ಸಾಕ್ಷಿ
ಆ ಶಶಿ
ಈಗ ಹೇಳದೆ ಕೇಳದೆ ಪಲಾಯನಗೈದ
ಶಶಿಯ ಕೇಳಲಾಗದೆ ಒದ್ದಾಡುತಿರುವೆ
ಬರಿ ತಲೆ ಬಿಸಿ
ಗೋಪಾಲಕೃಷ್ಣ-
ಮದುವೆಗು ಮುನ್ನ
ಹೆದರಿ ನಾ ನೋಡುತಿದ್ದೆ
ನಿನ್ನ ಕದ್ದು ಕದ್ದು
ಈಗ ಹಾಗಲ್ಲ
ಪರ ನಾರಿಯರೊಂದಿಗೆ ಮಾತನ್ನಾಡುವಾಗ ಹೆದರಿ
ನಾ ನೋಡುತ್ತೇನೆ
ನಿನ್ನ ಕದ್ದು ಕದ್ದು
ಗೋಪಾಲಕೃಷ್ಣ ಆರಗ-
ಟೈಲರಿಂಗ್ ಸೇವಾಸಿಂಧುವಿನಲ್ಲಿ ಸ್ವಲ್ಪ ಕೆಲಸದ
ಒತ್ತಡ ಜಾಸ್ತಿ ಹಾಗಾಗಿ ಬರಿಲಿಕ್ಕೆಆಗ್ತಾಇಲ್ಲ
ನಿಮ್ಮೆಲ್ಲರಿಗು reply ಮಾಡ್ಲಿಕ್ಕೆ ಆಗ್ತಾಇಲ್ಲ
ಕ್ಷಮಿಸಿ 20 last Date. ಹಾಗಾಗಿ ಸಹೋದರ ಸಹೋದರಿಯರಿಗೆ ತುಂಬು ಹೃದಯದ ಧನ್ಯವಾದಗಳು ಕ್ಷಮೆ ಇರಲಿ
ಜೋಗಿಜೀ ನಿಮ್ಮಲ್ಲು ಕ್ಷಮೆ ಕೇಳುತ್ತೇನೆ
ಫೋಕ್ ಮಾಡಿದ ಎಲ್ಲರಿಗೂ ತುಂಬುಹೃದಯದ ಧನ್ಯವಾದಗಳು 🙏🙏🙏-
ಮರಣಿಸಿದರು ಪರ್ವಾಗಿಲ್ಲ ಪೋಸ್ ಕೊಟ್ಟು
ದಾನ ಮಾಡುವವರಿಗೆ ಕೈ ಚಾಚದಿರು
ಇಂತವರಿಗಾಗಿ ನಿನ್ನ ಕೈ ನಖಕ್ಕೆ ಮಸಿ ಹಚ್ಚಿ ಕೊಳ್ಳದಿರು-