ಮಿಂಚಿನ ಇಬ್ಬನಿಯ ಹೊಳಪು!
ವಿಹಂಗ ಧ್ವನಿಯ ಹುರುಪು!
ಧೂಮಕೇತುವಿನಂತೆ ಚುರುಕು!
ಅಕ್ಷರಗಳಿಗೆ ನಾಟ್ಯವಾಡಿಸುವ ನಾಜೂಕು!
ಪದಗಳಿಗೆ ಜೀವ ತುಂಬುವ ಯುಕ್ತಿಯು!
ನಿನಗಿದೋ ಜನುಮ ದಿನದ ಶುಭಾಶಯಗಳು!
ನಿನ್ನ ಧ್ಯೇಯದ ಹಾದಿಯಲಿ ಹೂವುಗಳೇ ತುಂಬಿರಲಿ!-
✳️✳️✳️✳️✳️✳️✳️✳️✳️✳️
ಪ್ರವೀಣರಾದ
ಪ್ರಪಂಚಜ್ಞಾನಿಯಾದ
ಪ್ರವೀರರ
ಪ್ರತಿ
ಪ್ರಬಲ
ಪ್ರಭೆಯುಳ್ಳ
ಪ್ರಮಾದವಿಲ್ಲದ
ಪ್ರಯತ್ನಗಳು
ಪ್ರಗತಿಯಿಂದ
ಪ್ರಕಾಶಮಾನವಾಗಿ
ಪ್ರಭಾವಬೀರಲಿ
✳️✳️✳️✳️✳️✳️✳️✳️✳️✳️
ಹೀಗೆ ಸಾಗಲಿ ನಿಮ್ಮ ಸಾಹಿತ್ಯ ಪಯಣ-
ತಾಯಿಯ ಆರೋಗ್ಯ
ಸರಿ ಇಲ್ಲದಿರುವಾಗ
ಅಥವಾ ತಾಯಿಯು ಬೇರೆ
ಊರಿಗೆ ತೆರಳಿದಾಗ ಮಾತ್ರ
ತಾಯಿಯ ದಿನ ನಿತ್ಯದ
ಬಿಡುವಿಲ್ಲದ ಕೆಲಸಕಾರ್ಯಗಳ
ಅರಿವಾಗುವುದು-
ನನ್ನಿಷ್ಟ ದೈವನ
ಮನದಲಿ ಸ್ಥಾಪಿಸಿ,
ಭಕ್ತಿಯ ಗೋಪುರವನು
ಕಟ್ಟಿರುವೆನು..
ಗಂಟೆಯ ನಾದಗಳು
ಮೊಳಗಲಿ
ಭಯ ತಲ್ಲಣಗಳು
ದೂರ ಸರಿಯಲಿ
ಮನವು ಭಕ್ತಿ ಸಾಗರದಲಿ
ಮಿಂದೇಳಲಿ
ಹನುಮನ ಧ್ಯಾನದಲಿ
ಮುಳುಗಲಿ
ಶಕ್ತಿ, ಸದ್ಬುದ್ಧಿ, ಜ್ಞಾನವು
ಬೆಳಗಲಿ
ಪವಿತ್ರ ಭಕ್ತಿಯ
ಧಾರಣೆಯಾಗಲಿ
ಶಾಂತಿ ನೆಮ್ಮದಿಯು
ಸಮೃದ್ಧವಾಗಲಿ
ಮನದ ಕಲ್ಮಶಗಳು
ಸುಟ್ಟು ಭಸ್ಮವಾಗಲಿ
ಜೈ ಶ್ರೀರಾಮ್
ಜೈ ಹನುಮಾನ್
ಜೈ ಭಜರಂಗಬಲಿ-
💐💐ಅಭಿನಂದನೆಗಳು💐💐
ಅನ್ವೇಷಕ ಎಂಬ ನಾಮದಿ
ಅನ್ವೇಷಣೆಯನ್ನು ಮುಂದುವರಿಸುತ್ತಾ
ತ್ರಿವಿಕ್ರಮನಾಗಿ
ಕ್ಯಾಪ್ಷನ್ಗಳನು ಕೊಡುವ
ನಿಮ್ಮ ಬರಹಗಳು ಎಲ್ಲರನ್ನು ರಂಜಿಸಲಿ
ಹೀಗೆ 100 ರಿಂದ ಸಾವಿರಾರು quotes ಬರಲಿ ನಿಮ್ಮಿಂದ ವೈಕ್ಯುನಲ್ಲಿ..-
ಅವಳೋ ಸದಾ ಅವನಂದವ ಗೀಚುವ ಬಣ್ಣಗಾರತಿ
ಅವನೋ ಸದಾ ಅವಳ ನೆನಪಲೆ ಗುನುಗುವ ಹಾಡುಗಾರ
ಅವರಿಬ್ಬರ ಈ ಪರಿ ರಸಪೂರಿತವಾದ ಸ್ವಾದವೇ ಸರಿ..-
ಅವಳ ಕಾಲ್ಗೆಜ್ಜೆಯ ಝಣ ಝಣ ನಾದ
ಅವನೆದೆಯಂಗಣದಲ್ಲಿ ಪುಂಖಾನುಪುಂಖವಾಗಿ ರಿಂಗಣಿಸಿತು..!
ಅವನಕ್ಷಿಯ ಮಯೂಖ ನೋಟ
ಅವಳಂತಃರ್ದೃಷ್ಟಿಯ ಮುಸುಕನು ಮರೆಮಾಚಿಸಿತು..!-
ಅಪ್ಪನೆಂದರೆ ಹಾಗೇನೇ..
ಮನಸ್ಸು ನೋವಿಲ್ಲದ ತಿಳಿಯಾಗಸ ಅನ್ನಿಸಿದರೂ
ಒಳಗೆ ಮೋಡ ಕಟ್ಟಿ ಮಳೆ ಸುರಿಯುವಷ್ಟು ವ್ಯಥೆಗಳು!!
ಅಪ್ಪನೆಂದರೆ ಹಾಗೇನೇ..
ಮಕ್ಕಳ ಕಾಲ್ಗಳನ್ನು ಹೂ ಮೇಲೆ ನಡೆಸಿ
ತಾ ಮಾತ್ರ ಅದೇ ಸವೆದ ಚಪ್ಪಲಿಗೆ ಕಾಲೊಡ್ಡಿದವನು!!
ಅಪ್ಪನೆಂದರೆ ಹಾಗೇನೇ..
ತನಗಿಲ್ಲದಿದ್ದರೂ ತನ್ನವರಿಗೆಲ್ಲಾ ಸಿಗಬೇಕು ಎಂದು
ಬಯಸಿದವನು!!
ಅಪ್ಪನೆಂದರೆ ಹಾಗೇನೇ..
ಹಬ್ಬದ ದಿನ ಮನೆಯವರಿಗೆಲ್ಲ ಹೊಸ ಬಟ್ಟೆ ಕೊಡಿಸಿ
ತಾ ಮಾತ್ರ ಅದೇ ಹಳೆಯ ತೂತು ಬಿದ್ದ ಬನಿಯನ್ನೆ ಸಾಕೆಂದವನು!!-
ಉರಿಬಿದ್ದು ಹುರಿಹಗ್ಗದಂತಾಗುವೆವೆಂದು ತಿಳಿದರೂ,
ಬೆಳಕನು ಚುಂಬಿಸಲು
ಸೊಡರಿನ ಸುತ್ತ ಹಾರುವುದೇಕೆ ಈ ಹಾತೆಗಳು!?-