ಬದುಕೊಳಗೆ ನಮ್ಮವರೇ ನಮಗೆ ಗಟ್ಟಿಯಾಗಿ ನಿಂತು ಹೋರಾಡುವ ಪಾಠ ಕಲಿಸಿ ಹೋಗುವರು..
ನಮ್ಮವರು ಎಂದುಕೊಂಡವರು ಕಲಿಸುವ ಪಾಠ ಬೇರಾರು ಕಲಿಸಲಾರರು..
-
ಅಗಾಧ ನೋವೊಳಗೂ
ನಗುವುದ ಕಲಿಸಿದ್ದು ನೀನು ಮಾಧವ.
ನನ್ನ ಶಕ್ತಿ ಯುಕ್ತಿ ನೀನೆ ಆಗಿರುವೆ...-
ಹೆಣ್ಣೆಂದರೆ ಸೆರೆಗಿನಲ್ಲಿ ಕಟ್ಟಿದ ಕೆಂಡದಂತೆ ಕಂಡವರು ಹಲವರು
ಕೆಂಡವೆ ದೀಪವಾಗಿ ಮನೆಯ ಬೆಳಗುವುದೆಂಬ ಅರಿವಿಲ್ಲದ ಮೂಢರು..-
💐💐 ಅಭಿನಂದನೆಗಳು 💐💐
ಪ್ರಾಸದ ಸಾಲುಗಳು,
ವೇಗದ ಬರಹಗಳು ,
ಸಾಯಿಪಲ್ಲವಿಯ ಚಿತ್ರಗಳು,
ನೋವಿನಾಚೆಯ ನಲಿವುಗಳು ,
ಸುಂದರ ಜೋಡಣೆಗಳು ,
ಚಿತ್ರಕ್ಕೊಂದಿಷ್ಟು ಅಕ್ಷರ ಮಾಲೆಗಳು
ಇದೆಲ್ಲ ನಿಮ್ಮ ಸಾಹಿತ್ಯ ಪ್ರೀತಿಗೆ ಹಿಡಿದ ಕನ್ನಡಿ
ಎಂದರೂ ತಪ್ಪಾಗಲಾರದು.. ಸದಾ ಹೀಗೆ ಬರೆಯುತ್ತಿರಿ..
ಅಭಿನಂದನೆಗಳು ವೀರೇಶ್ ಹಿರೇಮಠ ಅವರಿಗೆ..
🌹🌹🌹💐💐💐🌹🌹🌹-
ಗಂಡೆಂದರೆ ಬರೀ ದುಡಿಯುವ ಯಂತ್ರವಲ್ಲ,
ಮೈ ಬಯಸುವ ಮನವಲ್ಲ.
ನೋವಲ್ಲೂ ನಗುವ ಹೃದಯದವನು,
ಕಷ್ಟದಲೂ ಕುಗ್ಗದ ಧೈರ್ಯದವನು..-
ಅವನು ಎಂದೊ ಮರೆತ
ರಾಗದಂತೆ, ಈಗೀಗ
ಅದೇ ಪಲ್ಲವಿ ಚರಣಗಳ
ನೆನಪಿಸಿ, ರಾಗ ಹೊಮ್ಮಿಸಿ
ಹಾಡು ಗುನುಗುವಂತಾಗಿದೆ.-
ನಿಮ್ಮಂತಹ ಕೆಟ್ಟ ಬ್ಯಾಚ್ ಮತ್ತೊಂದಿಲ್ಲ.
ನೋಡ್ತಿನಿ ಅದು ಯಾವಾಗ ಎಲ್ಲರೂ ಬಾಯಿ ಮುಚ್ಚುತ್ತಿರಾ ಅಂತ.
ನನಗೆ ತಲೆ ಹಿಂದೆ ಕೂಡ ಕಣ್ಣಿವೆ ಏನ ಮಾಡ್ತಿದಿರ ಕಾಣಿಸ್ತಿದೆ.
ನಿಮ್ಮ ಕಾಲಗೆ ಸಾಕಾಯ್ತು ನನಗೆ.
ಹೋದ ಬ್ಯಾಚ್ ಮಕ್ಕಳು ತುಂಬಾ ಬೆಸ್ಟ್.
( ನಾನು ಇದೆಲ್ಲ ಉಪಯೋಗ ಮಾಡ್ತಿನಿ ನನ್ನ ತರಗತಿಯಲ್ಲಿ )-
ಮಾತೇ ಮುಗಿದ ಮೇಲೆ
ಮಾತನಾಡಲು ಏನೂ
ಉಳಿಯದೆ, ಬರೀ
ದೀರ್ಘ ಮೌನ ಮಾತ್ರ
ಉಳಿದದ್ದು....-
ಮಾಧವ ,
ನಿನಗೆ ರಾಧೆಯ
ಮನದ ಭಾವ
ತಿಳಿಯದ,
ಯುಗ ಯುಗಗಳು
ಕಳೆದರೂ ಅವಳ
ಸ್ವಚ್ಛ ಒಲವು
ನಿನಗಾಗೆ ಮೀಸಲು...-
ಅಭಿನಂದನೆಗಳು 💐💐 ೧೦೪೫ 💐💐
ಸುಂದರ ಬರಹಗಳು
ಗಾಂಭೀರ್ಯ ಸಾಲುಗಳು
ದಾರಿತೋರುವ ಪದಗಳು
ಇದೆಲ್ಲವುಗಳ ಒಡೆಯ ,
ಪದಗಳ ಹೆಕ್ಕಿ
ಮುಖವಾಡದ ಬದುಕ
ಕಳಚಲು ಕವಿಯ ಭಾವದ ಗೆಳೆಯ,
ಅದ್ಭುತ ಜಗವಿಮೋಚಕ
ಸಾಲುಗಳ ಯಜಮಾನ..
ಈ ಸಾಹಿತ್ಯ ಪಯಣದಲಿ
ಸುಂದರ ಮುಳುಗದ ದಿನಕರನಾಗಿರುವ
ನಿಮಗೆ ಅಭಿನಂದನೆಗಳು.... 💐💐💐🌺🌺-