ನಿನ್ನ ಸೇರುವ ಹಂಬಲದಲಿ
ಆಕಾಂಕ್ಷೆಯ ತೂಕ
ಇನ್ನೂ ಹೆಚ್ಚಾಗಿದೆ ಈ ತವಕ
ಒಲವಿನ ಸಾಗರಕೆ
ಹುಚ್ಚೆದ್ದ ಕನಸಿನ
ತೊಳಲಾಟದ ಬಂಧನದಲ್ಲಿ
ಮಿಡುಕಾಡುತಿರುವ ಭಾವ
ಒಲುಮೆಯ ಪರಿಚಯಕೆ
ಹಾತೊರೆದಿದೆ ತಾಳಿಕೆಯ ಬಾಳಿಕೆ
ಒದ್ದಾಡುವ ಯೋಚನೆಗಳಿಗೆ
ಮಿಂದೇಳುವಾಸೆ ಅನುರಾಗದಲಿ
ನಿಷ್ಕಪಟ ಪ್ರೀತಿಗೆ
ನಾವಿಕನಾಗು ಸ್ವಾತಂತ್ರ್ಯಕೆ...
✍Thilaka Kulal
-
ಅದ್ಯಾವುದೊ ನಾನರಿಯದ ಊರಲ್ಲಿ
ಜನ ನಮ್ಮಂತೆ ಬದುಕಲಾಗುತಿಲ್ಲ
ಅದ್ಯಾವುದೊ ನಾ ಹೋಗಿರದ ಊರಲ್ಲಿ
ನನ್ನಂತೆ ಮಹಿಳೆಯರು ಸ್ವತಂತ್ರವಾಗಿಲ್ಲ
ದ್ವೇಷ ನಿರತ ಖಳನಾಯಕರ ಬಂಧಿಯಲ್ಲಿ
ರಾಕ್ಷಸತನಕ್ಕೆ ಎಲ್ಲೆ ಇಲ್ಲ....ನೆಮ್ಮದಿಯನೆಂದು ಕಂಡೆ ಇಲ್ಲ
-
ಕನಸುಗಳಿಗಿಂತಲೂ ವಾಸ್ತವವೇ
ಸುಂದರವೆನಿಸುತಿದ್ದರೆ...
ಅದು ಯಶಸ್ಸಿನ ದಾರಿಯತ್ತ
ನಮ್ಮನ್ನು ಕೊಂಡೊಯ್ಯುತ್ತದೆ..!-
ರಾಷ್ಟ್ರದ ಘನತೆ ಗೌರವಗಳಿಗೆ
ಧಕ್ಕೆಯಾಗದಂತೆ..
ಮತ್ತೊಬ್ಬ ವ್ಯಕ್ತಿಯ
ಸ್ವತಂತ್ರ ಮತ್ತು ಆದರ್ಶಗಳಿಗೆ
ಕುತ್ತುಬಾರದಂತೆ..
ರಾಜ್ಯದ ಪರಿದಿಯಲ್ಲಿ
ತನ್ನ ಅವಶ್ಯಕತೆಗಳನ್ನು
ಈಡೇರಿಸಿಕೊಳ್ಳುವುದೆ ಸ್ವತಂತ್ರ...😊-
ಬಣ್ಣ
ಮುಗಿಲೆತ್ತರಕ್ಕೆ ಹಾರಿಸಿದ್ದೇವೆ
ಕೆಸರಿ, ಬಿಳಿ,
ಹಸಿರು.
ಕೆಲವು ಪುಂಡರು,
ನಾವೆಲ್ಲಾ ಒಂದಲ್ಲ ಎಂದು
ಹರಸಿದ್ದಾರೆ
ನೆತ್ತರು.
-
ಸ್ವತಂತ್ರ ಎಂದರೆ ತನ್ನಿಚ್ಚೆಯಂತೆ ನಡೆಯುವ, ಮುಕ್ತ ಎಂಬ ಅರ್ಥವಿದೆ.ಪರರ ಅಧೀನದಲ್ಲಿ ಇರದವನೆ ಸ್ವತಂತ್ರ.ಈ ಸ್ಥಿತಿಯ ಅನುಭವವೇ ಸ್ವಾತಂತ್ರ್ಯ.
ಸ್ವಾತಂತ್ರ್ಯವೆಂದರೆ ಬರೀ ರಾಜಕೀಯ ಬಿಡುಗಡೆಯಲ್ಲ.ಬದುಕುವವನಿಗೆ ಉಸಿರಿದ್ದಂತೆ,
ಮನುಷ್ಯ ಹುಟ್ಟಿನಿಂದಲೇ ಸ್ವತಂತ್ರ.ಯೋಚನೆಗಳಿಗೆ,
ಮಾತಿಗೆ, ವ್ಯಕ್ತಿತ್ವ, ಕ್ರಿಯಾಶೀಲತೆಗೆ ಅಡೆತಡೆ ಬಾರದೆ
ಹೊಣೆಗಾರಿಕೆಯುಳ್ಳವನೆ ಮುಕ್ತ ಸ್ವಾತಂತ್ರ್ಯದ ಪಾಲುದಾರನಾಗುತ್ತಾನೆ.-