ಮೌನವಾಗಿರುವವರು ಸದಾ ನೆಮ್ಮದಿಯಾಗಿರುವರು
ದಿನಾ ಮನ ಬಿಚ್ಚಿ ಮಾತಾಡುತ್ತಿರುವವರು ಹೃದಯದೊಳು
ನೋವೆಂಬ ಭಾರವನ್ನು ಹೊತ್ತು ನರಳಾಡುತ್ತಿರುವರು
ಯಾರಿಗೂ ಬಚ್ಚಿಟ್ಟ ಕಷ್ಟವನ್ನು ಹೇಳಲಾರದೆ ಮನದೊಳು
ತೋರ್ಪಡಿಕೆಯ ನಗುವ ಮೊಗದೊಳು ಬೀರುತಿರುವರು-
**********❣️************
ವಿದ್ಯಾಭ್ಯಾಸ: ಎಂ.ಎ ರಾಜ್ಯಶಾಸ್ತ್ರ ವಿಭಾಗ. ವ್ಯಾಸ... read more
ಶಿಶುಗೀತೆ
ಶೀರ್ಷಿಕೆ: ನವರಾತ್ರಿ ಶೋಭಿತೆ
ಸರಸ್ವತಿ ಮಾತೆ
ಕರುಣಿಸು ತಾಯೆ
ಕರಗಳ ಮುಗಿವೆ
ರಕ್ಷಿಸು ಮಾಯೆ//
ವಾಗ್ದೇವಿ ದೇವತೆ
ಜ್ಞಾನದ ವಾರಿಧಿ
ಬ್ರಹ್ಮನ ರಾಣಿ
ಸಂಗೀತ ಸುನಿಧಿ//
ನವರಾತ್ರಿ ಶೋಭಿತೆ
ಶಕ್ತಿ ಪ್ರದಾಯಿಣಿ
ಮಕ್ಕಳ ಜ್ಞಾನದಾತೆ
ಬುದ್ಧಿ ನೀಡು ವಾಣಿ//
ಶಾರದ ಪೂಜೆಯಲ್ಲಿ
ನಿನ್ನನ್ನು ಪೂಜಿಸುತ
ಭಕ್ತಿಯ ಸೇವೆಯಲ್ಲಿ
ನೀನಾಗುವೆ ಸಂತೃಪ್ತ//-
ನಂಬಿಕೆ
ಅತಿಯಾಗಿ ಯಾವುದನ್ನು ಹಂಬಲಿಸದಿರಿ
ದೇವರನ್ನು ನಂಬಿ ಭರವಸೆಯಿಂದ ನಡೆಯಿರಿ
ಅವನು ಕೈ ನೀಡಿ ಕೊಟ್ಟಾಗ ಮಾತ್ರ ಸ್ವೀಕರಿಸಿರಿ
ಬಂದಿದ್ದನ್ನಷ್ಟೇ ನೆಮ್ಮದಿಯಿಂದ ಅನುಭವಿಸಿರಿ-
ಮನದಮಾತು
ಕಲ್ಲಾಗಿರುವ ದೇವರು ಸಹ ನಮ್ಮ ನಿಷ್ಕಲ್ಮಶ ಭಕ್ತಿಗೆ ಮೆಚ್ಚಿ ಕರಗುತ್ತಾನೆ ಆದರೆ ಹೃದಯವನ್ನು ಕಲ್ಲು ಮಾಡಿಕೊಂಡಿರುವ ಮನುಜ ಮತ್ತೊಬ್ಬರ ಮಮಕಾರದ ಮಾತಿಗಾಗಲಿ ನೋವಿಗಾಗಲಿ ಯಾವತ್ತೂ ಕರಗಲ್ಲ ಅವನು ಬರಿ ಕಲ್ಲೆ ವಾಸ್ತವ ಸತ್ಯ.-
ಚುಟುಕುಗಳು
೧.ಬದುಕು
ದೃಢನಿರ್ಧಾರವು ನಮ್ಮೊಂದಿಗಿರಲು
ಎದುರಾಗುವ ಕಷ್ಟವನ್ನೆದುರಿಸಬೇಕು
ಭರವಸೆಯೊಂದಿಗೆ ನಾವು ಸಾಗುತಿರಲು
ನಮ್ಮ ಬದುಕು ಸಾರ್ಥಕವೆನಿಸಬೇಕು
೨.ದೇವತಾಂಶ
ಜಗವೇ ಬ್ರಹ್ಮಸೃಷ್ಟಿಯ ಅದ್ಭುತ
ಅಣುರೇಣುವಿನಲ್ಲೂ ದೇವತಾಂಶ
ಕೂಡಿರುವಾಗ ದೇವರೇ ಅನವರತ
ಅರಿತು ಬಾಳಬೇಕು ನಾವು ಸತ್ಯಾಂಶ-
ಒಬ್ಬರ ಮನೆಗೆ ಕಿಡಿ ಇಡುವ ಕೆಲಸ ಮಾಡಬೇಡಿ
ಯಾಕೆಂದರೆ ನಿಮ್ಮ ಮನೆಗೆ ಮತ್ತೊಬ್ಬರು
ಅಗ್ನಿ ಜ್ವಾಲೆಯನ್ನೇ ಇಟ್ಟು ಬಿಡುವರು-
ಗೆಳತಿ ಮುದ್ದಾದ ನಿನ್ನ ಕಣ್ಣೋಟದಲ್ಲಿ
ಕಂಡೆ ನಾ ಒಲವಿನ ಆವೃತಿ
ಮುಗ್ಧವಾದ ಆ ನಗುವಿಗೆ ಮನದಲ್ಲಿ
ಹೆಚ್ಚಿದೆ ಹುಚ್ಚು ಪ್ರೀತಿ
-
ಮನವೇ ನಿನ್ನ ಸ್ಪರ್ಶತೆಯ ಸ್ವೀಕರಿಸಿರಲು
ಬದುಕಲ್ಲಿ ಸದಾ ಗೆಲುಮೆಯ ಹೊನಲು
ನೀ ಮಾತಾಡದೇ ಸುಮ್ಮನಿರಲು
ಮನಸ್ಸಿಗೇಕೋ ನೋವಿನ ಅಮಲು-
ಉಸಿರಾಟವೊಂದೇ ಮನುಜನ ನಿಜವಾದ ಆಸ್ತಿ
ಅದು ನಿಂತರೆ ದೇಹ ಆಗದೆಂದೂ ದುರಸ್ತಿ
ಶರೀರ ಮಣ್ಣಲ್ಲಿ ಸೇರಿ ಉಳಿಯುವುದು ಬರಿ ಅಸ್ಥಿ
-