ಭಾವನೆಗಳ ಪಂಜರದಲ್ಲಿ
ಕನಸುಗಳ ರತ್ನಮಾಲ
ಮಳೆಯಾಗಿ ಸೇರಲೆ
ನಿನ್ನ ಹನಿಯಂತೆ ಜಿನುಗುತ
ಕೂಡಿ ಇಟ್ಟ ಒಲವ
ಧಾರೆ ಎರೆಯುವ ಹಂಬಲ
ನೀನಾಗುವೆಯ ಈ ರಾಧೆಗೆ ಬೆಂಬಲ
ಕೊಳಲ ರಿಂಗಣಕೆ ಉಸಿರಾಗುವಂತೆ ಸಂಗೀತ
ಅಂತರಂಗದಲಿ ನಿನ್ನೊಲವ
ರಥೋತ್ಸವ ಸಾಗುತ್ತಿರುವ
ಪಲ್ಲಕ್ಕಿಯಲ್ಲಿ ಹೃದಯದ ಮೃದಂಗ
ಜಪಿಸುತಿಹ ನಾಮದ
ಮಾಂಗಲ್ಯ ನಿನ್ನದಾಗಲೇ ಕೃಷ್ಣ....
✍️ Thilaka kulal
-
ಮುಂದರಿಯದ ನಡಿಗೆಗೆ
ಹಿಂದರಿಯದ ಗಾನ
ವಾಸ್ತವದ ಮುಂದೆ
ಕೀಲುಗೊಂಬೆ ಯಂತೆ ಗೀತೆ
ಗೊಣಗುತಿಹ ಬದುಕಿಗೆ
ನಿನ್ನೊಲವಿನ ಹೊನಲು
ಕರೆತರುತ್ತಿದೆ ಮುಗಿಲು......!!!
✍️ Thilaka kulal
-
ಗರಿಬಿಚ್ಚಿ ಕುಣಿಯ ಬೇಕೆಂದೇ
ನಿನ್ನೊಳಗೆ ನಾನು
ಮರೀಚಿಕೆಯಾಗಿ
ಸಪ್ತಸಾಗರದಾಚೆ ನೀನು
ಕಣ್ಣ ಮುಂದೆ
ಪ್ರೀತಿಯ ಹೊನಲು
ಕಳೆಯುತಿಹ ದಿನಗಳಿಗೆ ನೀನು
ಒಲವಿನ ಬಾಡಿಗೆಯೇನು
ಮರೆಯಲಾಗದೆ ಬಿಗಿಹಿಡಿದ
ನೆನಪಿನ ಪದಪುಂಜಗಳಲ್ಲಿ ನೀನು
ಕಣ್ಣಂಚಿನ ಹನಿಗಳಿಗೆ
ಪ್ರಶ್ನೆಯಾಗಿ ಉಳಿದೆಯೇನು....!?
✍️Thilaka kulal
-
ಬೀಸುತ್ತಿದೆ ನೆನಪಿನ ಗಾಳಿ
ಕರೆಯಬೇಡ ಭಾವನೆಗಳನ್ನೇರಿ
ಮರೆತು ಬಿಡುವೆ
ಬಾಳ ದೋಣಿ ನಿನ್ನೊಲವನ್ನೇರಿ
ಹೆಚ್ಚೇನು ಹೇಳದೆ ಒಲವ
ಬೀದಿಯಲಿ ರಂಗೇರಿ
ತುಸು ಹಾಯಾಗಿ ನಡೆದುಬಿಡಲೇ
ಜೊತೆಯಾಗಿ ಕನಸುಗಳನ್ನೇರಿ
ಕೂಡಿಟ್ಟ ನೆನಪಿನ ಬಾಡೂಟದಲ್ಲಿ
ಬರವಣಿಗೆಯ ಲತ ಕುಂಚವನ್ನೇರಿ
ಕಳೆದು ಬಿಡಲೇ ಮತ್ತೆ..
ಬದುಕ ಬಂಡಿ ಕಲ್ಪನೆಗಳನ್ನೇರಿ
✍️ Thilaka kulal
-
ಕಲ್ಪನೆಗಳ ಮಂದಿರದಲ್ಲಿ
ನಾ ಕೈ ಮುಗಿಯುವೆ
ಭಾವನೆಗಳ ಮಳೆಗೆ
ಭೋರ್ಗರೆಯುವ ಕನಸಿಗೆ ನೀ
ಜೊತೆಯಾಗು ಕೊನೆಯವರೆಗೆ
ಹುಚ್ಚು ಕನಸಿನ
ಹಚ್ಚಹಸುರಿನ ಕವಲು ದಾರಿಗೆ
ಕಡಲಿನ ಒಲವ ನಗೆ
ಕೈ ಬೀಸಿದೆ ಮನದ ಕರೆ
ನಿನ್ನೊಲವ ಗೋಪುರಕೆ
ತಡಮಾಡದೆ ತೆರೆದು ನೋಡು
ಅಂತಃ ಪುರದ ಪಲ್ಲಕ್ಕಿಯ
ಬರವಣಿಗೆಯ ಮೆರವಣಿಗೆ
ನಿನ್ನೊಲವ ಕಡೆ....
✍️Thilaka kulal
-
ಪ್ರೀತಿಯ ಪಾಲು
ಹೃದಯದಲ್ಲಿರಿಸಿ
ಒಲುಮೆಯ ರಂಗಲಿ
ಮುಗುಳುನಗುತಿದೆ ಭಾವನೆಗಳ ಚಿತ್ತಾರ
ಮನದಾಳದಲಿ ಆಲಂಗಿಸಿದ
ಪರಿ ಅಂಕುರಿಸಿದ ಅನನ್ಯ
ಕನಸಿಗೆ ನಿನ್ನ ನಾಮಧೇಯದ
ಸಿಂಧೂರ ಮೀಸಲಾತಿ ಒಲವಿಗೆ
ಲಜ್ಜೆಯ ಲಹರಿ
ಹೆಜ್ಜೆಯನ್ನಿರಿಸಿ ಲಾವಣ್ಯದಿ
ಅಲಂಕಾರಿಸಿದ ಮದರಂಗಿ
ಬಣ್ಣಿಸಿದೆ ಕನಸಲಿ ಆವರಿಸಿದ
ಹೃದಯದ ಯೋಜನೆಯ...
✍Thilaka kulal
-
ನಿನ್ನ ಸೇರುವ ಹಂಬಲದಲಿ
ಆಕಾಂಕ್ಷೆಯ ತೂಕ
ಇನ್ನೂ ಹೆಚ್ಚಾಗಿದೆ ಈ ತವಕ
ಒಲವಿನ ಸಾಗರಕೆ
ಹುಚ್ಚೆದ್ದ ಕನಸಿನ
ತೊಳಲಾಟದ ಬಂಧನದಲ್ಲಿ
ಮಿಡುಕಾಡುತಿರುವ ಭಾವ
ಒಲುಮೆಯ ಪರಿಚಯಕೆ
ಹಾತೊರೆದಿದೆ ತಾಳಿಕೆಯ ಬಾಳಿಕೆ
ಒದ್ದಾಡುವ ಯೋಚನೆಗಳಿಗೆ
ಮಿಂದೇಳುವಾಸೆ ಅನುರಾಗದಲಿ
ನಿಷ್ಕಪಟ ಪ್ರೀತಿಗೆ
ನಾವಿಕನಾಗು ಸ್ವಾತಂತ್ರ್ಯಕೆ...
✍Thilaka Kulal
-
ಎತ್ತ ಸಾಗಿದೆ ಈ ಮೌನ
ವಿಧಿಯ ಆಟಕೆ ಶರಣಾಗುವ ಮುನ್ನ
ಬದುಕು ಕಟ್ಟಿತ್ತು ನಯನ
ಬಾಳ ತೋರಣ
ಜೋತು ಬಿದ್ದು ನಗುತಿಹೆ ಅತ್ತ
ಸೋತು ನುಂಗಿದ ನೋವಿಗೆ
ಕುರುಡಾಗಿದೆ ಜೀವನ
ಕಾಣದ ಕಣ್ಣಿಗೂ
ಕರಗದ ಹೃದಯಕೂ
ಹರಿದ ಕಾಗದದ ಉಳಿದ ಬದುಕಿಗೆ
ಬಿಳಿಯ ವಸ್ತ್ರಕೆ ಸೆರಗೊಡ್ಡಿತು ಈ ಮೌನ-
ಮಧುರ ಸಂಜೆಯ
ಸನಿಹದಲಿ ಬೆಳ್ಳಿ ಮೋಡಗಳ
ಸಂಚಾರದ ಇಂಚರ
ನಳನಳಿಸುತಿಹ ರಂಗಿನಲ್ಲಿ
ಮಿಂದು ನಿಂದಿಹ ಆಗರ
ಅಂಬರ ಮಣಿಯ ಶೃಂಗಾರ
ಹೊನ್ನ ಹೊದಿಕೆಯ ಮರೆಯಲಿ
ನೇಸರನ ಕಣ್ಸನ್ನೆಯ ಕಾವ್ಯಕೆ
ಭುವಿಯ ನಲುಮೆಯ ಚಿತ್ತಾರ
ಮುಗಿಲ ಅಭೀಪ್ಸೆಯ ಪಟದಲಿ
ಕಿರಣಗಳ ಝೇಂಕಾರ
ಅನ್ಯೋನ್ಯ ಮಮತೆಯ
ಸಾಗರದ ಭಾವಕೆ
ಈ ತಿಳಿ ಸಂಜೆಯ ಸಂಭಾಷಣೆ ಮನೋಹರ..
✍Thilaka kulal
-
ಗಾಳಿ ಸುದ್ದಿಯ ಮರೆಯಲ್ಲಿ ಅಡಗಿತ್ತು ನಿಘಂಟು ಶಬ್ದಗಳ ಸಾಲು ವರದಿಯ ಸುಳಿಗೆ ಒಡೆಯಿತು ಬಳಿದ ಬಣ್ಣದ ಉಳಿದ ಪಾಲು...
-