ನನ್ನ ಜೀವನವು ಉತ್ತಮವೇ
ಎಲ್ಲವೂ ನನ್ನ ಬಳಿ ಇರುವಾಗ
ನನ್ನ ಜೀವನವು ಇನ್ನೂ ಅತ್ಯುತ್ತಮವೆ
ಎಲ್ಲವೂ ನನ್ನ ಬಳಿ ಇಲ್ಲದೇ ಇರುವಾಗ
ನನ್ನ ಜೀವನವು ಅತ್ಯಂತ ಸುಖಮಯವು
ಎಲ್ಲರೂ ನನ್ನನ್ನು ಅಣಕಿಸುವಾಗ
ಆದರೆ ನನ್ನ ಜೀವನವು ಅತ್ಯಂತ ನರಕವು ನಮ್ಮವರೇ ನಮ್ಮನ್ನು ನಂಬದಿದ್ದಾಗ
-
ನಟ್ಟ ನಡುರಾತ್ರಿ
ನಿಟ್ಟುಸಿರೂಂದು ಉಸಿರಾಡಿತ್ತು
ಅಲ್ಲಿಗೆ
ರಾತ್ರಿಯೆಲ್ಲ ಅವಳ
ನೆನಪಿನ ಮಳೆ ಸುರಿಯಿತು-
ಎಲ್ಲವೂ ಖಾಲಿ
ನಾನೊಬ್ಬ ಏಕಾಂಗಿ
ನೀನಾದರೆ ನನ್ನ ಅರ್ಧಾಂಗಿ
ನಿನ್ನ ಮಡಿಲೇ ನನ್ನ ಜೋಕಾಲಿ
ನೀ ಹಾಡುವೆಯಾ ಲಾಲಿ
ನನ್ನ ಪ್ರೀತಿಯ ಚಂಪಾಕಲಿ-
ಮೊದಲು : ತಪ್ಪು ನಿನ್ನದೆ
ತಿಂಗಳುಗಳ ನಂತರ : ತಪ್ಪು ನನ್ನದೆ
ವರ್ಷಗಳ ನಂತರ : ಆಗಿನ ಪರಿಸ್ಥಿತಿ ,
ಸಂದರ್ಭಗಳು ಯಾರದು ತಪ್ಪಿಲ್ಲ
— % &-
ಅಪ್ಪಿ ಬಿಡಲೇ ಒಮ್ಮೆ
ನಿನ್ನ ಸರಿ ತಪ್ಪುಗಳ ಯೋಚಿಸದೆ
ಅಪ್ಪುಗೆಯ ಬಂಧನದಲ್ಲಿ
ಮುತ್ತಿಟ್ಟು ಬಿಡಲೇ ಒಮ್ಮೆ
ಮತ್ತಿನ ಸಂಗಡದಲ್ಲಿ
ದಯವಿಟ್ಟು ಸ್ವೀಕರಿಸು
ಕಣ್ಣರೆಪ್ಪೆಯ ಸನಿಹದಲ್ಲಿ
ಕೇಳಿಸಿ ಬಿಡು ಒಮ್ಮೆ ನೀ
ನಿನ್ನ ಹೃದಯದ ಬಡಿತವ
ನನ್ನ ಕಿವಿಗಳಿಗೆ
ಸದ್ದಿಲ್ಲದೆ ಆಲಿಸುವೆನು
ನನ್ನ ಕೊನೆಯ ಉಸಿರಿರುವವರೆಗೆ
— % &-
ಕಳೆದು ಹೋಗಬೇಕು
ನಕ್ಷೆಯೆ ಇರದ ದಾರಿಯಲ್ಲಿ
ಎಂದೂ ಅಂತ್ಯವಾಗುವ
ಈ ಜೀವನದಲ್ಲಿ— % &-
ಕಣ್ಣು ರೂಪಕದಲ್ಲಿ ಹನಿ ಜಾರುವ
ನರ್ತನವಿದು ಕಣ್ಣೀರೇ
ಭಾವಗಳ ಒಳನೋಟಕ್ಕೆ ಬೆಂದು
ಚಿಗರೆಯಂತೆ ಜಾರಿಹೋಗುವ
ನೀರು ಕಣ್ಣೀರೆ
ಮನಸ್ಸುಗಳ ತಾಕಲಾಟಕ್ಕೆ
ಮೌನವಾಗಿ ಗುಮ್ಮನಂತೆ ಕುಳಿತ
ದುಗುಡ ಮಾತುಗಳ ಮಾತು ಕಣ್ಣೀರೆ .
-
ನಮ್ಮವರನ್ನು ಕಳೆದುಕೊಳ್ಳುತ್ತಾ ಹೋದಂತೆ ನಮ್ಮನ್ನು ನಾವು ಕಂಡುಕೊಳ್ಳುತ್ತಾ ಹೋಗುತ್ತೇವೆ
-
ಭಾವಗಳೆಲ್ಲ ಬಾಚಿ ತಬ್ಬಿ
ಜೀವನಕ್ಕೆ ಜೇನು ಹಚ್ಚಿ
ನಿನ್ನಂತರಂಗವ ಸಂರಕ್ಷಿಸಿ ಇಡುವೆ
ಓ ಒಲವೆ
ನನ್ನಂತರಂಗದಲ್ಲಿ-
ಕಳೆದುಕೊಂಡೆ ಮೌನವ ನಿನ್ನ
ಸನಿಹದಿ
ಕಲಿಸು ಮಾತುಗಳ ಒಮ್ಮೆ ನೀ
ನನ್ನ ಸ್ವೀಕರಿಸಿ .-