ಮನಸ್ಸಿಗೆ ಕಣ್ಣು
ಕಿವಿಗಳಿಲ್ಲ ಗಾಲಿಬ್
ಅನುಭವ ಸೆರೆ
ಹಿಡಿಯುವ ಜಾಣ್ಮೆಯಿದೆ-
ಬರವಣಿಗೆ ಮನೋರಂಜನೆಯ ಸರಕಲ್ಲ, ಬದ್... read more
ನೆನ್ನೆ ಬೆತ್ತಲೆಯಾಗಿದ್ದವನಿಗೆ ಬಟ್ಟೆಯ ಅವಶ್ಯಕತೆ ಇತ್ತು ಗಾಲಿಬ್
ಇಂದು ಬೆತ್ತಲೆಯಾಗಿದ್ದವರಲ್ಲಿ ದುಡ್ಡಿದ್ದರೆ ಫ್ಯಾಷನ್ ಅನಿಸಿಕೊಳ್ಳುತದೆ-
ಭಾವನೆಗಳು ಬಾಳಿಗೆ
ಬೆಳಕಾಗಬೇಕು ಜನಾಬ್
ಕತ್ತಲೆಯನ್ನು ತೊಡಿಸಬಾರದು
ಕತ್ತಲು ಬದುಕಿಗೆ ನೆಮ್ಮದಿ
ತಾಣವಾಗಬೇಕು ಜನಾಬ್
ಶಾಂತಿ ಕದಡಬಾರದು-
ಗಜಲ್ ಎಂದರೆ..
ಭಾವನೆಗಳನ್ನು ಪದಗಳ ಮೂಲಕ
ಹಾಡುವ ಕಲೆ
ಅದು ಶಬ್ಧವಲ್ಲ, ಅನುಭವ
ಅದು ಓದುವ ಸರಕಲ್ಲ,
ಅನುಭವಿಸುವ ಸೆಲೆ-
ಗಜಲ್...
ಭಾವನೆಗಳ ಭಾಷೆ
ಮನಸು ಹಾಡುವ ಮೌನ ಗಾನ
ಮಾತುಗಳಿಂದ ಕೇಳಿಸುವ ಮನದಾಳದ ಧ್ವನಿ-
ಕಂಬನಿ ಒರೆಸುವ ಬೆರಳುಗಳು
ಹತ್ತಿರವಿರದಿದ್ದರೂ ಪರವಾಗಿಲ್ಲ ಸಾಹೇಬ್
ಕಂಗಳನು ಚುಚ್ಚುವ ಉಗುರುಗಳು ಹತ್ತಿರವಿರದಿರಲಿ
ಹೊಟ್ಟೆ-ಬಟ್ಟೆಯಲ್ಲಿಯೇ
ಜೀವನ ಕಳೆದುಹೋಗಬಾರದು ಸಾಹೇಬ್
ಬದುಕೆನ್ನುವುದು ನೆಮ್ಮದಿಯ ತಾಣವಾಗಬೇಕು-
ತಪ್ಪು ನಿನ್ನದೆ ಎನ್ನುವಷ್ಟು ಸಂಬಂಧಗಳಿಗೆ ಬೆನ್ನು ಹತ್ತಬೇಡ
ಇಲ್ಲಿ ಯಾರನ್ನೂ ದೂರಲಾಗುವುದಿಲ್ಲ ನಿನ್ನನ್ನು ಹೊರತುಪಡಿಸಿ-
ಇತರರನ್ನು ಕೆರಳಿಸುವ ಇತರರ ಮಾತುಗಳಿಗೆ
ಕೆರಳುವ ಸ್ವಭಾವ ಸಾತ್ವಿಕ ವ್ಯಕ್ತಿತ್ವವನ್ನು ನಿರ್ಮಿಸದು
ಅನ್ಯರ ನಿಯಂತ್ರಣಕ್ಕೆ ಒಳಪಡುವ ಮನಸುಗಳು
ಅಸ್ಮಿತೆಯನ್ನು ಉಳಿಸಿಕೊಳ್ಳಲಾರವು ಜನಾಬ್-