GEETHANJALI   (ಗೀತಾಂಜಲಿ ಎಸ್ ಸಿ)
3.9k Followers · 336 Following

4 AUG AT 14:07

ಬೇಡದ್ದು ಕೇಳಿ
ಅನಿಸಿದ್ದು ತಪ್ಪಾಗಿ
ಪ್ರೀತಿ ಸತ್ತಿತ್ತು!

-


3 AUG AT 14:04

ನಮ್ಮ ತಾಪತ್ರಯಗಳನ್ನು ಹೇಳಿಕೊಳ್ಳದೆಯೆ ಅವರ ಸಾನಿಧ್ಯದಲ್ಲಿ ನೆಮ್ಮದಿ ಸಿಗುತ್ತದೆಯೋ ಹಾಗೆ ನಮ್ಮ ಏಳಿಗೆಯನ್ನು ತಮ್ಮದೆನ್ನುವಂತೆ ಸಂಭ್ರಮಿಸುತ್ತಾರೊ ಅವರೇ ನಿಜವಾದ ಸ್ನೇಹಿತರು !

-


1 AUG AT 13:40

ತಿಂಗಳು ತುಂಬ ಹಬ್ಬಗಳು
ಜೇಬು ಚೆಲ್ಲುವಷ್ಟು ಖರ್ಚುಗಳು
ಏನೇ ಬರಲಿ,ಮನೆ ತುಂಬ ನಗು ಇರಲಿ
ಆಗಸ್ಟ್‌ ಆಗಸದಷ್ಟು ನೆಮ್ಮದಿ ಕರುಣಿಸಲಿ

-


30 JUL AT 15:28

*ರುಬಾಯಿ*
ಆ ಕತ್ತಲ ಸಾಮ್ರಾಜ್ಯದಲ್ಲಿ ಭಕ್ತಿಯು ಮಾರಲ್ಪಡುತ್ತದೆ
ಬುದ್ಧಿಯಿಂದ ಮಾಡಲಾಗದ್ದು ನಂಬಿಕೆ ನಂಬಿಸುತ್ತದೆ
ರಣಬೇಟೆಗಾರನನ್ನು ಕುರಿಯೊಂದು ಹಿಡಿದುಹಾಕಿದೆ
ಅಸಲಿಯತ್ತು ಒಂದು ದಿನ ಬಯಲಿಗೆ ಬರುತ್ತದೆ.

-


7 JUL AT 13:14

ಬದುಕಿನ ಪಯಣದಲ್ಲಿ
ದಾರಿ ಹೇಗೆ ಇರಲಿ
ಜೊತೆಯಲ್ಲಿ ಸಾಗಿದರೆ
ಪ್ರೀತಿ ಸಾರ್ಥಕವಾಗುತ್ತದೆ.

-


7 JUL AT 12:59

ಅವನು ಪ್ರೀತಿಯನ್ನು ಉಪಾಸಿಸುವವನು
ಅವಳು ಪ್ರೀತಿಯನ್ನು ಉಸಿರಾಗಿಸಿಕೊಂಡವಳು!

-


30 JUN AT 9:46

ಹಾಯ್ಕು
...…........
ಉಳಿಸಿಕೊಳ್ಳಿ
ಕೆಂಪು ಗುಲಾಬಿತುಂಡು
ಹೃದಯದಲ್ಲಿ

-


27 JUN AT 23:29

ನಿನ್ನ ನೆನಪು
ಚಲಿಸುತ್ತದೆ, ಚಲಿಸದೆ
ದೂರುತ್ತದೆ ದೂರದೆ!

-


22 JUN AT 21:17

ಹಾಯ್ ಜೂನ್ ನೀನೂ ಸಹ ಹೇಳಿ ಬಿಡು
ಅಣ್ಣನ ಮುದ್ದಿನ ತಂಗಿ, ಅಕ್ಕಂದಿರ ಪುಟ್ಟ ತಂಗಿ,
ತಮ್ಮಂದಿರ ಅಕ್ಕರೆಯ ಅಕ್ಕ ಭಾರತಿಗೆ
ಹುಟ್ಟುಹಬ್ಬದ ಶುಭಾಶಯಗಳು💕💕💕💕
‌ ‌‌(ಅಡಿಬರಹ ಓದಿ)

-


17 JUN AT 20:02

ಕಲ್ಲಾಗಿದ್ದ ಮನ ಯಾಕೆ ಸಾಕಿ ಇವಳಪ್ಪುಗೆಯಲ್ಲಿ ಕರಗುತ್ತಿದೆ
ಪ್ರೀತಿಯ ತನಿಗಂಪು ತೇಲುತ್ತಿರೆ, ಸ್ವರ್ಗದಮೃತವನೊಲ್ಲೆನೆನ್ನೆನು!

-


Fetching GEETHANJALI Quotes