ಈ ಸಂಜೆಗಳೇ ಹಾಗೇ..
ಮೈಗೆ ತಂಪು ನೀಡುವ ತಂಗಾಳಿಗಿಂತ
ಮನಸ್ಸನ್ನ ತಡಕಾಡೋ,
ನೆನಪುಗಳಿಗೆನೇ ಕಾರಣವಾಗುವದು ವಿಪರ್ಯಾಸ..!-
ಅಂತರ್ಮುಖಿ ಭಾವಜೀವಿ,,,☺
ಹುಟ್ಟಿದ್ದು ರನ್ನನ ನಾಡಿನಲ್ಲಿ ,
😍10-ಸಪ್ಟೆಂಬರ್..... read more
ಅವನೆಂದರೆ...♥️
ನಾ ಬರೆಯದೆ ಉಳಿದ
ಅಕ್ಷರಗಳಲ್ಲಿ ಅಡಗಿ ಕೂತವ..
ಅವನೆಂದರೆ...♥️
ನಾ ಅಭಿವ್ಯಕ್ತಿಸಲಾಗದ
ಭಾವಗಳಲ್ಲಿ ಬಂಧಿಯಾದವ..
ಅವನೆಂದರೆ...♥️
ನಾ ನುಡಿಯದ ಪದಗಳಿಗೆ
ಮೌನ ಬೇಲಿಯಾದವ..
ಅವನೆಂದರೆ...♥️
ಊಹೆಗೂ ನಿಲುಕದ
ಪ್ರೀತಿಯ ಮಳೆ ಹರಿಸಿದವ..
ಅವನೆಂದರೆ...♥️
ಕಲ್ಪನೆಗೂ ಸಿಗದಂತೆ
ನನ್ನುಸಿರಲ್ಲಿ ಬೇರೆತವ..
ಅವನೆಂದರೆ...♥️
ಈ ಅಸ್ತಿತ್ವ ಇರೋವರೆಗೂ
ನೆಮ್ಮದಿಯ ನೆಲೆಯಾದವ..
ಅವನೆಂದರೆ...♥️
ಆರಾಧನೆಗೂ ಮೀರಿದ
ಆಂತರ್ಯದೊಡೆಯ..
ಅವನೆಂದರೆ...♥️
ನನ್ನಾತ್ಮ ದೇಹ ತೋರೆವರೆಗೂ
ಗುಂಡಿಗೆಯ ಅರಸನಾಗಿರುವವ..-
ನಟ್ಟಿರುಳ ಪ್ರೀತಿಗೆ ಬಿದ್ದ ನಂತರವಷ್ಟೇ,
ಚಂದ್ರ ಮುದ್ದಾಗಿ ಮಿನುಗಿದ್ದು..
ಹಾಲ್ಬೆಳದಿಂಗಳ ಚೆಲ್ಲಿದ್ದು..!
ಇರುಳು ಮಾತ್ರ ಮೌನದಲ್ಲಿದೆ;
ಮನಸಾರೆ ಮೆಚ್ಚಿದ್ದೋ!?
ಪ್ರೇಮಿಸಿದ್ದೋ!? ಧ್ಯಾನಿಸಿದ್ದೋ!?,,,
ರಾತ್ರಿಬೆಳದಿಂಗಳು ಮಾತ್ರ..
ಅಂಗಳದಿ ಅಚ್ಚಮಲ್ಲಿಗೆಯಾಗಿದೆ..!!!-
ಬಿಲ್ಕೂಲ್ ಬಣ್ಣ ಬಳಿದಿದ್ದೇನೆ...
ನನ್ನೊಳಗಿನ ಎಲ್ಲ ಭಾವನೆಗಳಿಗೂ!
ಈ ಕಣ್ಣು ಮಾತ್ರ ತುಂಬಾ ನಿಯತ್ತಿಂದು
ಒಂದೇ ಏಟಿಗೆ ಎಲ್ಲವನ್ನು ಅಳಿಸಿ ಹಾಕಿಬಿಡುತ್ತೆ...-
ಜೀವನವೆಂದರೆ ಬಹುಷಃ
ಮತ್ತೇನು ಅಲ್ಲಾ;
ಹರಿದು ಚಿಂದಿ ಆಗಿರುವ
ಬವಣೆಯ ನೂಲನ್ನೇ,,
ಮತ್ತೆ ಮತ್ತೆ ಹೊಸೆದು
ಹೊಸದಾಗಿ ನೈಯುವುದು...!-
ಭಾವ-ಬವಣೆಗಳಿಗೂ,,
ನಿರ್ವಾತ-ನಿರ್ಲಿಪ್ತತೇಗಳಿಗೂ,,
ಸಂತೃಪ್ತಿ-ಸಂತಾಪಗಳಿಗೂ,,
ಹುಟ್ಟೋ ಕನಸುಗಳಿಗೂ,,
ಕೊಲ್ಲೋ ನೆನಪುಗಳಿಗೂ,,
ಸಜ್ಜಾದ ಬಹುದೊಡ್ಡ
ರಂಗಸಜ್ಜಿಕೆ..!! ಅದೋ ;
ನಿಗೂಢ ಮತ್ತು ಅಷ್ಟೇ ಅತ್ಯಾಪ್ತ..!-
ಅವನೋ ಕಿರುನಗೆಯ
ಸರದರಾ,,
ಅವಳೋ ಮಾತುಗಳ
ಮಹಾರಾಣಿ,,
ಅವನು ಅವಳ ಮಾತಿಗಾಗಿ
ಕಾದ ಚಾತಕಪಕ್ಷಿ,,
ಅವಳು ಅವನ
ಗಾಂಭೀರ್ಯದ ಚರಣದಾಸಿ..-
ನಿನ್ನೊಂದಿಗೆ ದೂರ ಸಾಗುವ ಕನಸಿದೆ,,
ನನಗೆ ಕಾಲು ಸೋಲದಿರಲಿ,,
ನಿನಗೆ ತಿರುವುಗಳು ಬಾರದಿರಲಿ..
ನಿನ್ನೊಟ್ಟಿಗೆ ಸಾವಿರ ಮಾತು ಹೇಳೋದಿದೆ,,
ನನ್ನ ಮಾತು ಮುಗಿಯದಿರಲಿ,,
ನಿನಗೆ ತಾತ್ಸಾರ ಮೂಡದಿರಲಿ..
ನಿನ್ನನ್ನ ತುಸು ಜಾಸ್ತಿ ಪ್ರೀತಿಸೋದಿದೆ,,
ನನ್ನ ಮನಸು ಮಗುವಾಗಿರಲಿ,,
ನಿನ್ನೊಲವೆ ತಾಯಾಗಿರಲಿ..
ನಿನಗಾಗಿ ಬೈಯೋದು ಒಂದಿದೆ,,
ನನ್ನೊಲವ ಮಾತಾಗಿರಲಿ,,
ನಿನಗರ್ಥವಾಗುತಿರಲಿ..
ನಿನ್ನಲ್ಲಿ ಹೇಳದೆ ಉಳಿದ ಭಾವ ಒಂದಿದೆ,,
ನನ್ನ ಭಾವಪದವಾಗಲಿ,,
ನಿನ್ನಂತರಾಳ ಭಾಷ್ಯವಾಗಲಿ.-