ಕನಸು ಕಾಣುವ ಕವಿ ನಾನು....
ಎಲ್ಲೆಲ್ಲೂ ನಿನ್ನ ಕನಸಿನದೆ ಸಾಲು....
ಪ್ರೇಮರೋಗಕೆ ಪರಿಹಾರವೇನು?
ನಾನು ಮೌನಿ!
ನೀನೆ ನನ್ನೊಳಗೆ ಅವತಾರ ತಾಳು...
ನನ್ನಂತಃಕರಣದಲ್ಲಿ ಉದಯವಾಗಿ,
ಈ ಪ್ರೇಮಿಯ ಉಳಿಸುವ,
ಪ್ರೇಮದ ಸ್ಪರ್ಶಮಣಿ ನೀನಾಗು!!
(ಕ್ಯಾಪ್ಶನ್ನಲ್ಲಿ)-
InkFade
2.4k Followers · 266 Following
sanātsanātanatamaḥ kapilah kapiravyayaḥ |
svastidassvastikrtsvasti svastibhuksvastidakṣiṇa... read more
svastidassvastikrtsvasti svastibhuksvastidakṣiṇa... read more
Joined 20 January 2019
19 MAY 2023 AT 13:26
17 MAY 2023 AT 13:21
ಬರಲು ಅಲ್ಲಿ ರವಿ ತಾನು
ಅರಳಿತು ಇಲ್ಲಿ ಪ್ರೀತಿ ಹೂವೂ
ಯಾರಿರಲಿ, ಇರದಿರಲಿ
ನೀನಿರದೆ ಹೇಗಿರಲಿ
ನನ್ನ ಮೌನ ಮಾತ ನೀ ಹಾಡಿದೆ
ನಿನ್ನ ಕನಸ ತಂದು ನಾ ಎದೆ ತುಂಬಿದೆ
ನನ್ನ ಬಾಳ ದಾರಿಗೆ ನೀ ಬೆಳಕಾದೆ
ಆ ಬೆಳಕಲಿ ನಾ ಆಶಾಕಿರಣವೊಂದ ಕಂಡೆ-
3 MAY 2023 AT 18:28
ಹೊತ್ತಿಲ್ಲ ಗೊತ್ತಿಲ್ಲ ಪ್ರೀತೀ ಹುಟ್ಟೋಕೆ
ಕ್ಷಣದಲೆ ಅನುರಾಗ ಹಂಗೆ ಆಗ್ಬಿಡ್ತದೆ!
ಸ್ವಾರ್ಥವೋ ಸ್ನೇಹವೋ ಕಾರಣ ಬೇಕೇನೋ?
ಹಿಂದೇನು ಮುಂದೇನು ಪ್ರೀತಿನೇ ಎಲ್ಲಾನೊ.!-
2 MAY 2023 AT 12:17
ಇಳಿಸಂಜೆ ಹಾಗೆ
ಅವಳು ಕಾಡುತ್ತಾಳೆ
ರಜನಿಯು ಮುಚ್ಚಿ
ಸೂರ್ಯೋದಯವಾಗುವವರೆಗೂ;
ನಾನೋ ಅವಳೆದೆಗೆ ಪಿಸುಮಾತಲಿ
ಎದೆದನಿಯ ಲಾಲಿಯಾಗಿಸುವೆ
ಬಿಡದಂತೆಯೆ ಯುಗಪೂರ-
22 APR 2023 AT 11:52
ಭಾವಗೀತೆಯಲ್ಲಿರಲು ಜೀವನ ಸಂತೆ
ಒಲವ ಹಚ್ಚಿಕೊಂಡ ಸದಾನುರಾಗಿ
ದುಗುಡದೊಳಡಗಿರಲು ಬರಿ ಚಿಂತೆ
ವರವ ಕಳೆದುಕೊಂಡ ಹುಚ್ಚು ವಿರಹಿ
ಸಾಕಷ್ಟು ಪ್ರಶ್ನೆ ಎದ್ದಿದೆ
ಉತ್ತರ ಪ್ರಶ್ನೆಯಲ್ಲೆ ಆಟವಾಡಿಸುತ್ತಿದೆ
ಎಲ್ಲವೂ ರಂಗು ತುಂಬಿರುವ ಗುಂಗು
ನಿಲ್ಲಿಸಲು ಆತಿಶಯದ ಹಂಗು-