ತೊಟ್ಟಿರುವ ಬಂಗಾರವ ನೋಡಿ
ಪ್ರತಿಷ್ಟತೆಯೆ ಅಳೆಯಬೇಡ,
ಸಾಲು ಮರದ ತಿಮ್ಮಕ್ಕನ ಕಾರ್ಯದ ಮುಂದೆ
ಕೋಟಿ ಬಂಗಾರ ಕೂಡ
ಸಾಸಿವೆಯ ಕಾಳಿನಷ್ಟು ಮೂಢ;
ಪ್ರತಿಷ್ಟತೆ ಎಂಬುದಕ್ಕೆ
ಇಂತವರು ಉದಾಹರಣೆ ನೋಡ;-
ನೆಟ್ಟಳು ಸಾಲು ಸಾಲು ಮರಗಳ
ಕಂಡಳು ಅವುಗಳಲ್ಲೇ ಮಕ್ಕಳ
ಸಲುಹಿದಳು ಪೋಷಿಸಿದಳು
ಹಸಿರ ಸಿರಿಗೆ ಉಸಿರಾದಳು
ನೀರೆರದಳು ಬಾಚಿ ತಬ್ಬಿದಳು
ಹಸಿರಿಗೆ ಜೀವ ಕಳೆಯ ತುಂಬಿದಳು
ಪರಿಸರ ಕುಲಕೆ ವರವಾಗಿ ಬಂದಳು
ಮಾನವ ಕುಲಕೆ ಪರಿಸರ ಸಂರಕ್ಷಣೆಯ
ನೀತಿ ಸಾರಿದಳು
"ವಯಸ್ಕರಿಗೆ ಮಾದರಿಯಾಗಿ ನಿಂತ ವನದೇವತೆ
ಗಿಡಮರಗಳೇ ದೇವರೆಂದು ಕೈ ಮುಗಿದ ವೃಕ್ಷದೇವತೆ"-
ಮರಗಳನ್ನು ಮಕ್ಕಳನ್ನಾಗಿಸಿಕೊಂಡು ಪೋಷಿಸುತ್ತಿರುವ ಸಾಲು ಮರದ ತಿಮ್ಮಕ್ಕನವರು
ಪ್ರಕೃತಿಮಾತೆಯ ನಿಜಸ್ವರೂಪದಂತಿರುವ ನೀವೆಷ್ಟು ಹೃದಯವಂತರು
ವಯಸ್ಕರನ್ನು ನಾಚಿಸುವಂತಿದೆ ನೀವು ಮಾಡಿರುವ ಸಾಧನೆ
ವಾತಾವರಣದ ಬಗ್ಗೆ ಕಾಳಜಿ ತೋರಲು ನೀವೇ ದೊಡ್ಡ ಪ್ರೇರಣೆ
ಇಂದಿನ ವಿಶ್ವಪರಿಸರ ದಿನಾಚರಣೆ ಹೀಗೆ ಜಾರಿಯಲ್ಲಿರಲಿ
ನೆರಳಿನ ವಿಹಾರ ಮಾಡುವಾಗಲೆಲ್ಲಾ ನಿಮ್ಮ ಹೆಸರು ನಮಗೆ ನೆನಪಾಗಲಿ
ನಿಸರ್ಗದೇವಿಯ ವರಪಡೆದ ನೀವು ಪುಣ್ಯಶಾಲಿಗಳು
ನಿಮ್ಮನ್ನು ಕನ್ನಡನಾಡಲ್ಲಿ ಕಂಡ ನಾವು ಅದೃಷ್ಟಶಾಲಿಗಳು
ಆಲದ ಮರಗಳನ್ನು ನೋಡಿದಾಗ ನಿಮ್ಮ ಮುಖ ಕಣ್ಮುಂದೆ ಬರುತ್ತದೆ
ವೃಕ್ಷದೇವೋಭವ ಎನ್ನುವ ಮಾತಿಗೆ ಉಪಮೇಯ ನೀವೇ ಅನಿಸುತ್ತದೆ
ನಿಮ್ಮ ಬಾಳ್ವೆಯನ್ನು ಆಧರಿಸಿ ನೆಡಸಬಹುದು ಒಂದು ಗ್ರಂಥ ರಚನೆ
ದೂರದಿಂದಲೇ ಕಾಲ್ಮುಗಿದು ಮಾಡುತ್ತಿರುವೆ ನಿಮಗೆಂದೇ ಈ ಕವಿತೆ ಅರ್ಪಣೆ.
-
ಸಾಲು ಸಾಲು
ಮರವ ಸಲುಹಿ
ಬೆಳಸಿದಳು ಮಾತೃಶ್ರೀ
ಸಾಲು ಮರದ
ತಿಮ್ಮಕ್ಕ ಳೆಂದು
ಹೆಸರಾದಳು
ಹಸಿರ ಹಾರೈಸಿದ ವನಶ್ರೀ
ಸಾಧನೆಗೆ ಹರಸಿ
ಬಂದಿತ್ತು ಪದ್ಮಶ್ರೀ...-
ವಾಹನಗಳ ನಿಲ್ಲಿಸಲು ಎಲ್ಲರಿಗೂ ಬೇಕು ನೆರಳು!
ಮರ ಕಡಿಯುವಾಗ ಚುರ್ ಎನ್ನದು ಯಾರ ಕರುಳು.
ನೆನೆದು ನಮಿಸಿ ಸಾಲುಮರದ ತಿಮ್ಮಕ್ಕನ,
ಎಂದೂ ಮಿಡಿಯುತ್ತಿತ್ತು ಪ್ರಕೃತಿಗಾಗಿ ಅವಳ ಮನ.-
ತಾಯಿಯಾದಳು ಗಿಡ-ಮರಗಳಿಗೆ
ಹಸಿರ ಕಾಯುವಳು ಪ್ರತಿ ಗಳಿಗೆ
ಪಸಿರಿನ ಹಸಿರಿಗೆ
ಹಸಿರಿನ ಉಸಿರಿಗೆ
ಜೀವನವಿತ್ತಳು ದೇಣಿಗೆ
ನೀರಿತ್ತಳು ದಾಹದ ಮಕ್ಕಳಿಗೆ
ತೋರಿಸಿದಳು ಹಸಿರುವನದ ಆ ನಗೆ
ಸಾರುತಿಹಳು ಜಗಕೆ ಹೀಗೆ
ಬರ ದೂಡಿ, ಮರನೆಡಿ ನಿಮ್ಮನೆಗೆ
ಹರಿದ್ವರ್ಣ ಬರುವುದು ಬಾಗಿಲಿಗೆ
ಹಲವಾರು ವೀರ ವನಿತೆಯರು ಈ ಲೋಕಕ್ಕೆ
ರಾಣಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಒನಕೆ ಓಬವ್ವ, ರಾಣಿ ಅಬ್ಬಕ್ಕ
ಇತಿಹಾಸಕ್ಕೊಬ್ಬಳೆ ಸಾಲು ಮರದ ತಿಮ್ಮಕ್ಕ 🙏
DK-M-
ತಿಮ್ಮಕ್ಕ
ಸಾಲು ಸಾಲು
ಮರ ನೆಟ್ಟ
ನಮ್ಮಕ್ಕ
ಸಾಲು ಮರದ ತಿಮ್ಮಕ್ಕ,
ಮರಗಳಿಗೆ ನೀ ತಾಯಕ್ಕ,
ಪ್ರಕೃತಿಗೆ ನೀ ದೊಡ್ಡಕ್ಕ,
ನಿನಗಿದೋ ನನ್ನ ಸಲಾಂ ಅಕ್ಕ.
-
ಸಾಲು ಸಾಲಾಗಿ
ಗಿಡ ನೆಟ್ಟು ಸಲಹಿದ ಸಾಲು ಮರದ ತಿಮ್ಮಕ್ಕಗು
ಸ್ಮರಿಸೋಣ ವಿಶ್ವ ಪರಿಸರ ದಿನದಂದು..-