ಬೇವಿನ ಕಹಿ ಜೊತೆಗೆ
ಬೆಲ್ಲದ ಸಿಹಿ ಸೇರಿಸಿ
ಬೇವು ಬೆಲ್ಲವ ಸವೆದು
ಕಹಿಯಾದ ಕಷ್ಟವ ಎದುರಿಸಿ
ಸಿಹಿಯಾದ ಜೀವನ ಸಾಗಿಸುತ್ತಾ
ಸಿಹಿಯಾದ ನೆನಪಿನ ಜೊತೆಗೆ
ಈ ಯುಗಾದಿ ಹಬ್ಬವನ್ನು ಸಂಭ್ರಮದಿಂದ
ಆಚರಿಸೋಣ ಬನ್ನಿ.
ಹೊಸ ವರ್ಷದ ಆರಂಭ ಎಲ್ಲರ
ಜೀವನ ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ♥️💐
-
ಅಭಿಮಾನಿಗಳ ಕಣ್ಣಲ್ಲಿ ದೇವರಾಗಿ
ಸರಳತೆಯ ದಾರಿ ತೋರಿದ
ಮಾರ್ಗದರ್ಶಿಯಾಗಿ
ಎಲ್ಲರ ಮನ ಗೆದ್ದ ನಾಯಕ
ನಗು ಮೊಗದ ರಾಜಕುಮಾರ
ನಮ್ಮೆಲ್ಲರ ನೆಚ್ಚಿನ
ಅಪ್ಪು ಸರ್ ಅವರಿಗೆ
ಹುಟ್ಟು ಹಬ್ಬದ ಶುಭಾಶಯಗಳು🎂🎉-
ಹಗಲಿರುಳು ದುಡಿದ ಬೆಳೆಗೆ ಬೆಲೆ ಇಲ್ಲ ಇಂದು
ನಷ್ಟವಾಗುತ್ತಿದೆ ರೈತನಿಗೆ ಇಂದು ಎಂದೆಂದು
ನೈಸರ್ಗಿಕ ಬೆಳೆ ಬೆಳೆಯುತ್ತಿದ್ದರು ಅಂದು
ರಾಸಾಯನಿಕ ಬೆಳೆಗೆ ಮಾರು ಹೋಗುತ್ತಿದ್ದಾರೆ ಇಂದು
ಆರೋಗ್ಯವಾದ ಆಹಾರ ಸೇವಿಸುತ್ತಿದ್ದರು ಅಂದು
ರುಚಿಗೊಸ್ಕರ್ ಆಹಾರ ಸೇವಿಸುತ್ತಿದ್ದಾರೆ ಇಂದು
ರಾಗಿ ಮುದ್ದೆ ತಿಂದು ಗಟ್ಟಿ ಮುಟ್ಟಾಗಿದ್ದರು ಅಂದು
ಪಾನಿಪುರ ತಿಂದು ಶಕ್ತಿಯೇ ಇಲ್ಲದಂತ್ತಾಗಿದೆ ಇಂದು
ಫಲವತ್ತಾದ ಮಣ್ಣು ನಮ್ಮದಾಗಿತ್ತು ಅಂದು
ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ
ಕಡಿಮೆಯಾಗುತ್ತಿದೆ ಇಂದು..
ರೈತರ ದಿನಾಚರಣೆಯ ಶುಭಾಶಯಗಳು 💐-
ಬಾನಲ್ಲಿ ಬೆಳಕಿನ ಚಿತ್ತಾರ,
ಎಲ್ಲರ ಮನೆ ಅಂಗಳದಲ್ಲಿ ಮೂಡಿದೆ
ಬಣ್ಣ ಬಣ್ಣದ ರಂಗೋಲಿಯ ಝೇಂಕಾರ
ದೀಪ ಬೆಳಗುವ ದೀಪಾವಳಿಯಿಂದ ಮೂಡಿದೆ
ಎಲ್ಲೆಡೆ ಬೆಳಕಿನ ವಾತಾವರಣ
ತಂದಿದೆ ಎಲ್ಲರ ಮನೆ ಮನಗಳಲ್ಲಿ ಸಂತೋಷ ಸಂಭ್ರಮದ ಸಡಗರ
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🪔✨-
ಗುರಿ ಮುಟ್ಟುವ ದಾರಿ ಒಳ್ಳೆಯದಾಗಿರಲಿ
ಕಂಡ ಕನಸು ನನಸಾಗಿಸಿಕೊಳ್ಳಲು
ಪ್ರಯತ್ನದ ಓಟ ಎಂದು ನಿಲ್ಲದಿರಲಿ ..-
ನೀರಿನಲ್ಲಿ ಈಜೋಕೆ ತಂದೆ ಹೇಳಿಕೊಟ್ಟಿದ್ದಾರೆ
ಮುಳುಗುತ್ತೀನಿ ಅಂತ ಭಯ ಬೇಡ
ಜೀವನದಲ್ಲಿ ಸಾಧಿಸೋಕೆ ತಾಯಿ ತಿಳಿಸಿಕೊಟ್ಟಿದ್ದಾರೆ
ಸೋಲತೀನಿ ಅನ್ನೊ ಮಾತ್ ಬೇಡ
ಪ್ರಶ್ನೆಗಳು ನೂರಾರು ಬಂದರು
ಉತ್ತರ ಕೊಡೊ ಸಾಮರ್ಥ್ಯ ನಿನ್ನಲ್ಲಿದೆ
ಆ ನಂಬಿಕೆ ನಮ್ಮಲ್ಲಿದೆ.-
ಅಪ್ಪನ ಪ್ರೀತಿಯೆ ನನಗೆ ಶಕ್ತಿ
ಅವರೆ ನನ್ನ ಜೀವನಕ್ಕೆ ಸ್ಪೂರ್ತಿ
ಅವರೆ ನನ್ನ ಭವಿಷ್ಯ ರೂಪಿಸಿದ್ದು
ಅವರೆ ನನ್ನ ಪ್ರಪಂಚ
ಅವರೆ ನನ್ನ ಆಸ್ತಿ
-
ನಿನ್ನಲ್ಲಿ ಅಡಗಿಹುದು ವಿಶ್ವದ ಜ್ಞಾನ
ಅದರಲ್ಲಿರುವುದು ಜೀವನದ ಸಾರ
ಅದು ಮೂಡಿರುವುದು ಅಕ್ಷರದಿಂದ
ಅದೇ ಅಕ್ಷರದಿಂದ ನಾ ಅರಿತೆನು
ಇತಿಹಾಸ, ಆಧುನಿಕ, ವಿಜ್ಞಾನ, ತಂತ್ರಜ್ಞಾನ.
ನೀ ತಿಳಿಸಿಕೊಡುತ್ತಿರುವೆ ನಾ ನೋಡಿರದ
ನಾ ಅರಿಯದ ಪ್ರಾಚೀನಕತೆಯ, ನೈಜತೆಯ,
ಸಂಸ್ಕೃತಿ, ಆಧುನಿಕತೆಯ ವಿಷಯವನ್ನ
ಅಕ್ಷರದ ಮೂಲಕ ಅರಿವು ಮೂಡಿಸುತ್ತಿರುವೆ.
ನಿನ್ನ ಮೂಲಕ ಅರಿತ ಜ್ಞಾನವೇ
ನಮ್ಮ ಜೀವನಕ್ಕೆ ಮೂಲ ಆಧಾರ.
-
ಅಪ್ಪು ಸರ್,
ಡಾ. ರಾಜಕುಮಾರ ಅವರಿಗೆ ಪ್ರೇಮದ ಕಾಣಿಕೆಯಾಗಿ ಬಂದವರು
ಪಾರ್ವತ್ತಮ್ಮನವರಿಗೆ ಮುದ್ದಿನ ಮಗನಾದವರು
ಗಾಜನೂರಿಗೆ ಗೋಪಾಲನಾಗಿರುವರು
ಶಿವಣ್ಣನವರಿಗೆ ಶಕ್ತಿಯಾಗಿರುವರು
ರಾಘಣ್ಣನವರಿಗೆ ರಾಗವಾಗಿರುವರು
ಅಶ್ವಿನಿಯವರಿಗೆ ಆತ್ಮವಾಗಿರುವರು
ದೃತಿಯವರಿಗೆ ಧೈರ್ಯವಾಗಿರುವರು
ಬಡವರ ಬಂಧುತ್ವದಲ್ಲಿ ಬೆರೆತವರು
ಅನುಶ್ರೀಯವರ ಅನುಕರಣೆಯಲ್ಲಿ ಅನಾವರಣಗೊಂಡವರು
ಬೆಟ್ಟದ ಹೂವ್ವಿಗೂ ಬೇಕಾದವರು
ಭಕ್ತ ಪ್ರಹಲ್ಲಾದ ಪಾತ್ರದಿಂದ ಪರಿಚಯವಾದವರು
ಅಭಿಮಾನಿಗಳಿಗೆ ದೇವರಾದವರು
ಉತ್ತರ ಕರ್ನಾಟಕಕ್ಕೇ ಎತ್ತರದ ವ್ಯಕ್ತಿತ್ವವಾದವರು
ಕರುನಾಡಿಗೆ ಕಲ್ಪವೃಕ್ಷವಾದವರು
ಪುಟ್ಟಮಗುವಿನಲ್ಲೂ ನಗೆ ಹೊಮ್ಮಿಸಿದವರು
ಅವರೇ ನಮ್ಮೆಲ್ಲರ ನೆಚ್ಚಿನ ನಟ
ಪುನೀತರಾಜಕುಮಾರ ಸರ್..
-
ವೀಣೆ ನುಡಿಸಲು ಬಾರದಿದ್ದಾಗ
ಅದರ ಗಂಧ ಗಾಳಿಯು ನಮಗೆ ತಿಳಿಯದಿದ್ದಾಗ
ಅದರ ತಂತಿಯಿಂದ ನಾದ ಹೊರಹೊಮ್ಮದಿದ್ದಾಗ
ವೀಣೆ ಇದ್ದರು ಫಲವಿಲ್ಲ..
-