ಉತ್ತರ ಸಿಗದ ಬದುಕಿನಲಿ
ಪ್ರಶ್ನೆಗಳ ಹಾರಾಟ...
ನೆಮ್ಮದಿ ಇಲ್ಲದ ಜೀವನದಲ್ಲಿ
ನೆನಪುಗಳ ಅಲೆದಾಟ....😴🤗
-
A K
(A K)
36 Followers · 56 Following
ಅಳೆಯಲಾಗದ ಅರೆಯಲಾಗದ ಜಗದಲ್ಲಿ ಜಗಮಗಿಸಬೇಕೆಂಬ ಆಸೆ ಹೊತ್ತ ಹುಡುಗ ನಾ.. ಬಿಸಿಲ ನಾಡು,ತೊಗರಿ ಕಣಜ ಕಲಬುರಗಿ... read more
Joined 1 October 2020
5 APR 2022 AT 20:36
11 MAR 2022 AT 21:05
ನಾಳೆಯ ಬಗ್ಗೆ ಚಿಂತೆಯಿಂದ ಪಾರಾಗಲು ಒಂದೇ ಒಂದು ದಾರಿ,
ಅದುವೇ,
ಇಂದಿನ ದಿನವನ್ನು ವ್ಯರ್ಥ ಮಾಡದೆ ಬಳಸಿಕೊಳ್ಳಬೇಕು.
-
1 OCT 2021 AT 20:51
ಬಾಯಾರಿದ ಸೂರ್ಯ
ದಾಹ ತಣಿಸಿಕೊಳ್ಳಲು
ಕಡಲೆಡೆಗೆ ವಾಲಿದ,
ಸಂಜೆ
ಎಂದು ಹೆಸರಿಟ್ಟ ಜಗತ್ತಿನ ಕಣ್ಣಿಗೆ
ಚಂದ್ರಮ ಗೋಚರಿಸಿದ್ದು ಆಗಲೇ
😊-
24 AUG 2021 AT 20:26
ಅರಿಯದ ಗೊಂದಲಗಳಿವೆ
ಬಗೆಹರಿಯದ ತೊಂದರೆಗಳಿವೆ
ಆದರೂ ಎಲ್ಲದಕ್ಕೂ....
ನಕ್ಕುನಡೆಯಬೇಕು ಯಾಕೋ ಗೊತ್ತಿಲ್ಲ
ಬಂದದ್ದೆಲ್ಲಾ ಸ್ವಿಕರಿಸಬೇಕಲ್ಲವೇ...
ಅದು ಬಿಟ್ಟು ಬೇರೆ ವಿಧಿಯಿಲ್ಲ...
"ಭಾವನೆ"-
22 JUL 2021 AT 21:31
ಕೆಟ್ಟ ಸಮಯದಲ್ಲಿ
ಹೆಗಲ ಮೇಲೆ ಇಟ್ಟ ಕೈಗಳು,
ಯಶಸ್ಸಿನ ಚಪ್ಪಾಳೆಗಿಂತಲೂ
ಹೆಚ್ಚು ಮೌಲ್ಯಯುತವಾಗಿರುತ್ತವೆ...!!-
15 JUN 2021 AT 22:13
ಕೆಲವೊಮ್ಮೆ ಮನಸ್ಸು ಹೇಳುತ್ತದೆ
ಜನರು ನಿನ್ನೊಂದಿಗೆ ಹೇಗೆ ವರ್ತಿಸುತ್ತಾರೋ ,
ನೀನು ಹಾಗೆ ವರ್ತಿಸು ಎಂದು ...
ಆದರೆ ಹೃದಯ ಹೇಳುತ್ತದೆ ನಾವು
ಅವರಂತೆಯೇ ವರ್ತಿಸಿದರೆ , ಅವರಿಗೂ
ನಮಗೂ ಏನು ವ್ಯತ್ಯಾಸ ಎಂದು......-
9 MAR 2021 AT 11:49
ಜೀವನದಲ್ಲಿ ಕೆಲವೊಂದು ನೋವುಗಳು ಬದುಕಲು ಬಿಡುವುದಿಲ್ಲ.
ಮತ್ತು ಕೆಲವು ಜವಾಬ್ಧಾರಿಗಳು ಸಾಯಲು ಬಿಡುವುದಿಲ್ಲ...😍😍-