ಮಲ್ಲಿಗೆ ಮತ್ತು ಕನಕಾಂಬರ ಹೂವುಗಳು ಸ್ನೇಹ ಜೀವಿಗಳು, ಬೇಗ ಬೆಸದುಕೊಂಡು ಒಂದೇ ಹೂಮಾಲೆಯಲ್ಲಿ ಜೊತೆಯಾಗಿ ಮುಡಿಯನ್ನು ಅಲಂಕರಿಸುತ್ತವೆ.
ಗುಲಾಬಿ ಹೂವಿಗೆ ತನ್ನ ಅಂದದ ಮೇಲಿನ ಅಭಿಮಾನ ಜಾಸ್ತಿ,ಮುಳ್ಳಿನ ಕಾವಲು ಇಟ್ಟುಕೊಂಡಿರುತ್ತಾಳೆ ಮತ್ತು ಮುಡಿಯನ್ನು ಒಬ್ಬಳೇ ಅಲಂಕರಿಸುತ್ತಾಳೆ.-
ಸಿಹಿ ನೆನಪುಗಳನ್ನು ಪುಸ್ತಕಮಾಡಿ ಮನದ ಗ್ರಂಥಾಲಯದಲ್ಲಿ ಸಂಗ್ರಹಿಸಬೇಕು.
ಪುಟ ತಿರುವಿ ಮೆಲುಕು ಹಾಕಲು ಆಗಾಗ ಭೇಟಿ ಕೊಡುತ್ತಿರಬೇಕು-
ಬಾಳಿನ ಉಳಿತಾಯ ಖಾತೆಯಲ್ಲಿ ಹಣವಿಲ್ಲದಿದ್ದರೂ
ಚಾಲ್ತಿಯಲ್ಲಿರುವ ಖಾತೆಯಲ್ಲಿ ನಗುವಿರಬೇಕು ☺-
ನೆನಪಿನ ಅಲೆಗಳ ಸೃಷ್ಟಿಸುತ್ತ ಸಾಗುವ ಈ ಬಾಳು
ಎಲ್ಲಾ ಸಿಹಿ ನೆನಪಿನ ಅಲೆಗಳಾದರೆ ಇನ್ನೂ ಸೊಗಸು ಅದೇ ಬಾಳು.-
ಡಾ.ರಾಜಕುಮಾರ್ ಅವರ ಧ್ವನಿಯಲ್ಲಿ ಗುರು ರಾಯರ ಹಾಡುಗಳನ್ನು ಕೇಳುತ್ತಿದ್ದರೆ ಯಾರಾದರೂ ಭಕ್ತಿ ಪರವಶರಾಗುತ್ತಾರೆ.
-
ನಾನು ಇದ್ದೀನಿ ನಿನ್ನ ಜೊತೆಗೆ ,
ಎನ್ನವ ಸ್ನೇಹಿತನ ಮಾತು ಎಂಥ ಕಷ್ಟವನ್ನೂ ಎದರಿಸಲು ನಮಗೆ ಧೈರ್ಯ ತುಂಬುತ್ತದೆ😊-
ಗುಡುಗು ಸಿಡಿಲಿನೊಂದಿಗೆ ಬರುತ್ತಿರುವ ಮಳೆಗೆ, ಒಂದು ವಿನಂತಿ ಸಲ್ಲಿಸ ಬೇಕನಿಸಿದೆ ಮನಕ್ಕೆ.
ಭುವಿಗೆ ಬಂದಿರುವ ರೋಗವ ತೊಳೆದು, ನೆಮ್ಮದಿ ಕೊಡು ಎಲ್ಲರ ಜೀವಕ್ಕೆ.
ಋಣಿಯಾಗಿರುವೆ ಕೊನೆವರೆಗೂ ನಿನ್ನ ಪಾದಕ್ಕೆ.-
Happy Friendship Day
ಸ್ನೇಹವೊಂದು ಮುತ್ತಿನಂಥ ಸ್ನೇಹಿತರನ್ನು ತುಂಬಿಕೊಂಡಿರುವ ಕಡಲು
ಬಾಳ ಹಾದಿಯಲ್ಲಿ ನಗುತ ಸಾಗಲು ಸ್ನೇಹಿತರಿರಬೇಕು ಹಗಲು ಇರುಳು-
ಜೀವನದ ಜೋಕಾಲಿಯಲ್ಲಿ ನಾವು ಜೀಕುವಾಗ,
ನಮ್ಮ ಜೊತೆಯಲ್ಲಿ ಕೆಲವರು ಜೊತೆಗೆ ಜೀಕುತ್ತಾರೆ
ಮತ್ತೆ ಹಲವರು ಜೀಕಿ ಹೋಗುತ್ತಾರೆ
ಯಾರೆ ಜೀಕಿದರೂ ಬಿಟ್ಟರು ಜೀವನದ ಜೋಕಾಲಿ ಜೀಕುತ್ತಿರಬೇಕು.
ಜೀವನದ ಗುಟ್ಟು ಇಷ್ಟೇ ಅಲ್ಲವೇ
-