ಅಳಿಯನೆನ್ನೆಲೆ ಅಕ್ಕನ ಆನಂದ ಎನ್ನಲೆ
ಅಕ್ಕರೆಯ ಒಲುಮೆಗೆ ಮನ ಕರಗಿದೆ
ಪ್ರಾರ್ಥನೆಯಿಂದ ಜನಿಸಿದ ಪೋರ
ಪ್ರಾಣವೆ ಅಮ್ಮನೆನ್ನುವ ಚೋರ
ನಗುವಿನ ಸಾಹುಕಾರ
ಕೋಪದಲ್ಲೂ ಪ್ರೀತಿಗೆ ಹತ್ತಿರ
ಗಗನದಂತೆ ವಿಶಾಲ ಮನಸು
ಪ್ರೇಮವೊಂದೆ ಬಯಸೋದು ಕನಸು..-
ಹೆತ್ತ ತಾಯಿ - ಹೊತ್ತ ತಾಯಿಯ ಋಣ ತೀರಿಸದೆ ಸತ್ತರೆ ನೀ ಹುಟ್ಟಿದ್ದು ವ್ಯರ್ಥ!
ಅನ್ನ ತಿನ್ನೊವಾಗ ಹೆಸಿಗೆಯ ನೆನೆಯದಿರು
ದುಡಿಮೆ ತಾಣದಿ ದುರಹಂಕಾರ ತೋರದಿರು
ಕನ್ನ ಹಾಕುವಾಗ ಧರ್ಮವ ಮರೆನಿಲ್ಲದಿರು
ಬಡಿದು ಬಾಳುವ ನೀಚತನವ ಮೆರೆಸದಿರು,
ನೀನೆಷ್ಟು ಸಾಚ ಎಂಬುದ ನಾ ಅರಿತವ
ಕೆಣಕದಿರು ನನ್ನ ಸ್ವಾಭಿಮಾನವ!
ಕೆಣಕಿ ಕಾಲ್ಕೆರೆದು ನಿಂತರೆ
ಮುಂದಿನ ಅನಿಷ್ಟಕ್ಕೆಲ್ಲ ಶನಿ ಆಗನು ಹೊರೆ!
ಅರಿತು ನಡೆದರೆ ಬದುಕು ಕ್ಷೇಮ
ಅರಿತೂ ದುಡುಕಿದರೆ ಕೋಮ.!-
ಏನೆ ರುಕ್ಕು...
ತಗೊಂಡಿಯ ಹೊಸ ಗಾಡಿ
ನಂದು ಸಿಕ್ಸ್ ಪ್ಯಾಕ್ ಬಾಡಿ
ಹಾಕ್ಕೊಂಡು ನೀ ಬಿಳಿ ಚೂಡಿ
ಬಂದ್ರೆ ಬಳಿ ಕುಣಿಯುವೆ ಹಾಡಿ
ನೀನಂತು ಅಂದದ ಲೇಡಿ
ನಾನಾಗುವೆ ನಿನ್ನಂದಕೆ ಕೇಡಿ
ಕಾಯ್ತಿರ್ತಿನಿ ಕೆರೆ ಏರಿ ಬಳಿ
ತೊಟ್ಟು ಬಾ ಬಳೆ, ಓಲೆ, ಚೂಡಿ ಬಣ್ಣ ಬಿಳಿ
ಖಾಲಿ ಇರಲಿ ಹಣೆ
ಹಾಕಿರಲಿ ಎರಡು ಜಡೆ
ಬಂದರೆ ನೀ...
ಊರ್ಗಂಚುವೆ ಬೂಂದಿ
ಅಂದದ ಮೊಗಕೆ ನಾ ಇಡುವೆ ಬಿಂದಿ
ನಮ್ ಜೋಡಿ ಮೆಚ್ಚಿ ಕೂಗ್ಬೇಕು ನಂದಿ.-
ಪರಿಸ್ಥಿತಿಗಳಿಂದ ದೂರಾದ ಸಂಬಂಧ
ಮತ್ತೆ ಸೇರಬಹುದು,
ಆದರೆ
ಮನಸ್ಥಿತಿಗಳಿಂದ ದೂರಾದ ಸಂಬಂಧ
ಎಂದಿಗೂ ಸೇರದು!!-
ನೆಪ ಮಾತ್ರಕ್ಕೆ ದೇಹವಿಹುದು ಮನುಜ
ಎಡವಿಕೆಯೆ ಎಚ್ಚರಿಕೆ!
ಜಪ - ತಪದಿ ಸರಿಯದು ತಪ್ಪಿನ ಸಜ
ಸತ್ಯ ಪರ ಜಂಗಮ, ಜೋಕೆ..
ಈ ಕಲಿಗಾಲದಲ್ಲಿ..,
ಧರ್ಮದ ಹುಲಿಯ ಆಹಾರಕ್ಕೆ
ಮತಿಗೆಟ್ಟ ಅಧರ್ಮಿಯೆ ಮೇಕೆ!-
ಹಸಿರ ಭೂರಮೆಯಲ್ಲಿ
ಜೋಗದ ಸಿರಿಯ ನಡುವೆ
ಹುಣ್ಣಿಮೆಯ ಅಂಗಳದಿ
ಹೂವು ಬನವ ಸಿಂಗರಿಸಿ
ಮೋಡದ ಜೊತೆ ಸ್ನೇಹಿಸಿ
ಆಗಸದಿಂದ ಮಳೆ ಹನಿಗಳ ತರಸಿ
ಚಿಲಿಪಿಲಿ ಹಕ್ಕಿಗಳ ಕರೆಸಿ
ರಂಗೋಲಿಯೊಂದ ಬಿಡಿಸಿ
ರಂಗೇರಲು ಮಳೆಬಿಲ್ಲ ಸೇರಿಸಿ
ಮೂಡಿಬಂದ ಆ ಚಿತ್ರವ ಕಂಡು
ಚಂದಿರ ಎತ್ತಿದ್ದಾನೆ ಆರತಿ
ಕಾರಣ ಅವಳಂತೆ ಸ್ವರ್ಗದ ಒಡತಿ
ಆ ಚಿತ್ರವೆ ನೀ ಕೀರ್ತಿ
"ಹುಟ್ಟು ಹಬ್ಬದ ಶುಭಾಶಯಗಳು ಗೆಳತಿ"-
ಪುಕ್ಸಟ್ಟೆ ದೊರೆಯದು ಏನು,
ಕಷ್ಟಪಟ್ಟ್ರೆ ನಿಂದೆ ಬಾನು.
ಇಷ್ಟದಿ ಆಲಿಸು ಸೋಲಿನ pain
ಸ್ವಚ್ಛದಿ ಮನಸು ಆಗಿರಲಿ fine.
ಒಂದಿನ ನೀ ಆಗಲೇ ಬೇಕು win
So....,
ಪ್ರಯತ್ನ ಇರಲಿ Again and Again!-