ವಿಶ್ವ ವಿಷ್ಣು   (ವಿಶ್ವನಾಥ ವಾನರಾಸಿ)
34 Followers · 23 Following

Joined 20 January 2019


Joined 20 January 2019

ಪ್ರೀತಿಯೇ ನನ್ನ ಬದುಕಿನ ಸ್ವರ್ಗವಾದಾಗ
ಆ ಪ್ರೀತಿ ಪಿಶಾಚಿಯಾಗಿ ನನ್ನ ಕೊಲ್ಲುವಾಗ
ಯಾರಿಗೇಳಲಿ ನನ್ನ ಮನಸಿನ ನೋವ
ಹೋದರೆ ಹೋಗಲಿ ಬಿಡು ಇನ್ನು ಈ ಜೀವ!.

-



ನಿನ್ನ ನೋವುಗಳಿಗೆ ನೆರಳಾಗಿ
ನಿನ್ನ ಕಷ್ಟಗಳಿಗೆ ಕಾವಲಾಗಿ
ನಿನ್ನ ಕನಸುಗಳಿಗೆ ಕುಡಿಯಾಗಿ
ನನ್ನ ಜೀವನವಿಡೀ ನಿನಗಾಗಿ
ನನ್ನ ಜೀವನವೇ ಇಡುವೆ ಮುಡುಪಾಗಿ.

-



ಹಕ್ಕಿಗಳ ಚಿಲಿಪಿಲಿಯ ನಾದ
ಹೂಗಳಂತೆ ಬೀಳುತ್ತಿರುವ ಮಂಜು
ಗಿಡಮರಗಳು ಬೀಸುವ ತಂಗಾಳಿ
ನೇಸರ ಕಂಣ್ತೆರೆದಾಗ ಮೂಡುವ ಬೆಳಕು
ಎಚ್ಚರವಾಗಿಸಿದೆ ಮಲಗಿರುವ ನನ್ನ ಮನವ.
🌅🌅ಶುಭೋದಯ🌅🌅

-



ಹೊಸದು ಹಳೆಯದೇನಿಲ್ಲ ಈ ನಮ್ಮ ಜಗತ್ತಿನಲ್ಲಿ
ಹಳೆಯದೆಲ್ಲ ಮರೆತರೆ ಪ್ರತಿದಿನವೂ ಹೊಸ ವರ್ಷ
ಕ್ಯಾಲೆಂಡರ್ ಹಳೆಯದಾಗಿರಬಹುದುದೇ ಹೊರತು
ಹುಟ್ಟುವ ಜೀವಿಗಳು ಬಿಟ್ಟು ನಾವೆಲ್ಲರೂ ಹಳಬರೆ

-



ಬೆವರು ಸುರಿಸಿ ದುಡಿವ ನಮ್ಮ ರೈತ
ತಾನು ಉದ್ಧಾರ ಆಗುವುದರಲ್ಲಿ ಸೋತ,
ಸೋತರು ತನ್ನ ಕಾಲು ಸವೆದರೂ ಈತ
ಅನ್ನ ನೀಡುವನು ಇಡೀ ಜಗಕೆಲ್ಲ ಈ ಸಂತ.

-



ಬದುಕಿರುವಾಗ ಒಳ್ಳೇದು ಮಾಡಿ
ಅನ್ಕೊಡ ಗುರಿಯ ಕಡೆಗೆ ನಡಿ
ದ್ವೇಷ ಅಸೂಯೆಗಳ ಬದಿಗೆ ಬಿಡಿ
ಜೀವನದಲಿ ಉಳಿಯುವುದು ಮೂರಡಿ ಆರಡಿ

-



ಮಕ್ಕಳನ್ನು
ಸಮುದ್ರದ ಒಳಗೆ ಉಪಯೋಗವಿಲ್ಲದ ಮುತ್ತುಗಳನ್ನಾಗಿ ಮಾಡಬೇಡಿ,
ಭಾರತಾಂಬೆಯ ಕೊರಳ ಹಾರಿನ
ಮುತ್ತುಗಳನ್ನಾಗಿ ಹಲಂಕರಿಸಿ.
ಭಾರತ ಸಿರಿವಂತವಾಗುತ್ತದೆ,
ಭಾರತಾಂಬೆ ವಿಶ್ವಕ್ಕೆ ತಾಯಿಯಾಗುತ್ತಾಳೆ.

-



ಅವಳಿಂದಲೇ ಜನಿಸಿದವರು ನಾವು
ಅವಳಿಂದಲೇ ನಗುವವರು ನಾವು
ಅವಳಿಂದಲೇ ಬೆಳೆಯುವವರು ನಾವು
ಅವಳಿಂದಲೇ ಕಲಿಯುವವರು ನಾವು
ನಮ್ಮಿಂದ ಏನು ಆಶಿಸದವಳು ನಮ್ಮ ತಾಯಿ
ದೇವರಿಲ್ಲ ಈ ಜಗದಲ್ಲಿ
ತಾಯಿ ಒಬ್ಬಳೇ ದೇವರಿಲ್ಲಿ

-



ದೇಶಕ್ಕಾಗಿ ಜನಿಸಿದ ಮಹಾನ್ ಚೇತ
ಭಾರತಾಂಬೆಯ ಪ್ರೀತಿಯ ಸುತ
ದೇಶಕ್ಕಾಗಿಯೇ ಹೋರಾಡಿದ ಈತ
ದೇಶಕ್ಕಾಗಿಯೇ ಪ್ರಾಣ ತ್ಯಜಿಸಿದಾತ

-



ಸುಮಗಳಿಗೆ ಕೊನೆವರೆಗೂ ಗಿಡದಲ್ಲಿ ಸುಖವಿಲ್ಲ
ಕೊಂದು ಅದರ ಹೆಣವ ಮುಡಿಸುವರು ಕಲ್ಲಿಗೆಲ್ಲ
ಜೀವವಿಲ್ಲದ ಆ ಕಲ್ಲಿಗೇಕೆ ಹೂಗಳ ಅಲಂಕಾರ
ಭಗವಂತನ ಹೆಸರೇಳಿ ಹೂವಿನಮೇಲೇಕೆ ಬಲತ್ಕಾರ

-


Fetching ವಿಶ್ವ ವಿಷ್ಣು Quotes