ಜೀವನವಿಹುದು
ಜಗದಗಲ, ಮುಗಿಲಗಲ!.
ಸಾವಿರದ ಚಿಂತೆ, ಸಾವು ಇರದ ಚಿಂತೆ,
ಇಹರಲ್ಲಿ ಸಾವಿರ ಸಾವಿರಾರು ನನ್ನಂತೆ!.
ಸುತ್ತಲೂ ನಿಬಿಡ ಜನ, ನೀನೊಬ್ಬ ಸೆಳೆದ ನನ್ನಮನ!..
ನಿನ್ನಲ್ಲೂ ಉಂಟು ಏರಿಳಿತ,
ಬದಲಾವಣೆಯ ಅನಿವಾರ್ಯತೆಗೆ ಮತ ಹಾಕುತ...
ಅದು "ಆ" ಒಂದು ದಿನವಾದರೂ, ನನಗದು ಅಹಿತ... ಅಂದು ನನ್ನ ಮನ ಆಗದು ವಿಹಿತ.-
ಸಧ್ಯಕ್ಕೆPresently settled@ Kalaburgi
DOB:07.10.1968
ಬೆನ್ನು ಬಾಗಿದರೇನು?
ದೇಹ ಉಳುಕಿದರೇನು?
ಓಡುತಿರು ಜೀವನದಿ ಹಿಡಿದು ಜಾಡು.
ಉರುಳಿಹುದು, ಉರುಳುತಿಹುದು, ಮುಂದೆಯೂ ಉರುಳುವದು..
ಇಂದು ಇಲ್ಲಿ ಮತ್ತೆ ಆ ನಾಡು!.
ಅಡೆತಡೆಗಳುಂಟು,ನಡೆಯುವುದು ಅನಿವಾರ್ಯ
ನಡಿಗೆ ಆದರೂ ಕುಂಟು..ಮುಗಿಸಲು *ಆ* ಮಹಾತ್ಕಾರ್ಯ!.
ವ್ಯತ್ಯಾಸವಿಲ್ಲ ನೀ ಹಿಂದೆ..ನಾ ಮುಂದೆ!
ನಡೆಯುತಿರುವ ನಾವೆಲ್ಲರದ್ದೂ ಒಂದೇ ಮಂದೆ.
ನಡೆದುಹೋಗಿ ಬಿಟ್ಟುಹೋದ ಗುರುತುಗಳು, ಸಾರುವವು
ಅವು ಎಷ್ಟು ಜನರಿಗೆ ಇಷ್ಟ ವಾಗುವವು?!,
ನಡೆಯುವಾಗ *ಪ್ರಲ್ಹಾದಸುತಸ್ತುತಿಪವಿಠಲ* ನ ನೆನೆ,
ದಾರಿ ಸುಲಭವಾಗುವುದಂತೆ
ಈ ಮನೆಯಿಂ-ಆ ಮನೆ!.-
ಕೆಂಪನೆಯ ಸುಮಗಳ
ಕಂಪಿನಲ್ಲೂ ನಿನ್ನಾ ಹೆಸರು,
ಕಪ್ಪನೆಯ ಕೋಗಿಲೆಯ
ಇಂಪಿನಲ್ಲೂ ನಿನ್ನಾ ಹೆಸರು,
ಸಾಗರದ ಅಲೆಗಳೂ
ನುಡಿದವು ನಿನ್ನಾ ಹೆಸರು,
ತಂಪನೆಯ ಗಾಳಿಯ ತಂರಗಗಳ
ಮೇಲೂ ನಿನ್ನಾ ಹೆಸರು,
ಚಲಿಸುವ ಬೆಳ್ಳಿಯ ಮೋಡಗಳ
ಮೇಲೂ ನಿನ್ನಾ ಹೆಸರು,
ಹೊಳೆಯುವ ಮುತ್ತುಗಳ
ಮೇಲೂ ನಿನ್ನಾ ಹೆಸರು
ಪ್ರಕೃತಿಗೂ ತಿಳಿದಿದೆ
ನೀನೇ ನನ್ನ ಉಸಿರು,
ನಾನೆಂದೂ ನಿನ್ನ ಮನಸಿನಲ್ಲಿ
ನೀನೂ ನನ್ನ ಮನದಲ್ಲಿ ತಥಾಗತ!,
ಹೇ ಅನಿತ.-
ಜಗವು ಕುಣಿಯುವುದು ನನ್ನಯ ಗೊಂಬೆಯಾಟಕೆ,
ನಾನೆಂದೂ ಅಣಿಯಾಗುವೆ ನಿನ್ನೊಡನೆಯ ಆಟಕೆ.
ಜಗವು ಮರುಳಾಗುವುದು ನನ್ನಯ ಮುರಳಿಗೆ,
ನನ್ನ ಬೆರಳುಗಳು ಸುತ್ತುವವು ನಿನ್ನ ಕೊರಳಿಗೆ.
ಜಗವು ಜಾರುವುದು ನನ್ನ ಮಾಯೆಗೆ,
ನಾನು ಜಾರುತಿಹೆ ನಿನ್ನಯ ಮುಗ್ಧತೆಗೆ.-
ನಮ್ಮ ನೆನಪುಗಳ ಹೊತ್ತಿರುವ
ಈ ಸುಮ ಬಾಡದ ಹೂವು.
ನಮ್ಮ ಕನಸುಗಳು ಬತ್ತದಂತೆ
ಕಾಯಬೇಕಿದೆ ಇದನ್ನು ನಾವು.-
ಬದುಕನ್ನು ನಾವು ಹುಡುಕುವಾ
ಸಮಯ ವ್ಯರ್ಥ ವಾದರೂ ಸರಿ.
ಸಾವು ಸಮಯಕ್ಕೆ ಕೇಳದ ಅರಿ,
ತಾನೇ ಹುಡುಕಿ ಬರುವುದೇ ಅದರ ಪರಿ.-
ಅಂತ್ಯವಿಲ್ಲದ ಆದಿ
ಇರದೆಂದೂ ಹೋಗಲಲ್ಲಿಗೆ ಹಾದಿ.
ಸೃಷ್ಟಿಯ ಮೂಲಕ್ಕೆ ನೂರೆಂಟು ಕಥನ,
ಹುಟ್ಟಿ ಬಂದಂತೆ ಮಾಡುವಾಗ ಮಂಥನ.
ಅರಿಯಲಾಗದ ಆ ಮಹಾ ಶಕ್ತಿ,
ಅರಿಯಲು ಸಾಕು ಕೇವಲ ಭಕ್ತಿ.
ಇರುವುದರಿಂದಲೇ ಲಯ,
ಮಾನವನಿಗದೊಂದೇ ಭಯ!.
ಪ್ರಲ್ಹಾದಸುತಸ್ತುತಿಪವಿಠಲ ನ ನೆನೆ
ವೈಕುಂಠವಾಗುವುದು ಮನದ ಮನೆ.-
ತಲೆಯ ಮೇಲೆ ನಿನ್ನ ರಕ್ಷೆ
ಹೋಗದಂತೆ ಬಿಟ್ಟು ಸಂಸ್ಕಾರ ಕಕ್ಷೆ
ನನ್ನದೆಲ್ಲವೂ ನಿನ್ನ ಭಿಕ್ಷೆ
ಪ್ರಲ್ಹಾದಸುತಸ್ತುತಿಪವಿಠಲ ನ ಪೂಜಿಪ
ಶ್ರೀಗುರುರಾಯರಿಂದ ಎಲ್ಲವೂ ಸುಭಿಕ್ಷೆ.-
ಮುಗಿಯದ ನಿರೀಕ್ಷೆ!
ಬರದಿರುವುದಕ್ಕೆ ಸಮೀಕ್ಷೆ!!
ಬಂದಾಗ ಕಾದಿದೆ ತುಸು ಪರೀಕ್ಷೆ!!!
ನಂತರ ಮುನಿಸಿನಲ್ಲಿ ಪ್ರೀತಿಯೊಲವದ ಶಿಕ್ಷೆ!.
ಈ ಚೆಲ್ಲಾಟಗಳೇ ಸಂಸಾರಕ್ಕೆ ಶ್ರೀರಕ್ಷೆ
ಸತಿ ಪತಿಗಳು ಆಗಿ ಒಂದೇ ಕಕ್ಷೆ
ಜೀವನ ಆಗುತ ಸುಭಿಕ್ಷೆ!-