ಮನಸಾರೆ ಸಹಾಯದ ಕಾಣಿಕೆಯಿರಲಿ
ಅದಕ್ಕಾಗಿಯೇ ಅವರಿಂದ ನಿರೀಕ್ಷೆ ಮಾಡದಿರಿ
ಸಹಾಯ ಮಾಡಿದೆವೆಂದು ಢಂಗೂರ ಸಲ್ಲದು
ನೆರವು ಏನಿದ್ದರು ಗೌಪ್ಯವಾಗಿದ್ದರಷ್ಟೆ ಬೆಲೆ
ಮಾಡಿದವರಿಗೆ ಪಡೆದವರಿಗೆ ಬಿಟ್ಟು
ಉಳಿದವರಿಗೆ ತಿಳಿಯದಿರುವುದೆ ಒಳಿತು.!
-
ಸಹಾಯ ಮಾಡಲು ನಾವು
ಶ್ರೀಮಂತರೇ ಆಗಬೇಕೆಂದಿಲ್ಲ,
ನಮ್ಮಲ್ಲಿ ಹಣದ ಕಟ್ಟು ಇರಬೇಕೆಂದಿಲ್ಲ,
ಮಾಡುವ ಮನಸು ಇದ್ದರೆ,
ನಾವು ತಿನ್ನುವ ಎರಡು ಹೊತ್ತಿನ
ಊಟದಲ್ಲಿ ಒಂದು ಹೊತ್ತಿನ
ಊಟವನ್ನು ಕೂಡ ನೀಡಬಹುದು..-
ಇನ್ನೊಬ್ಬರಿಗೆ ಯಾವತ್ತು
ಸಹಾಯ ಮಾಡಲು ಹಿಂಜರಿಯಬೇಡಿ
ಏಕೆಂದರೆ ನಿಮ್ಮ ಆ ಒಂದು ಪುಟ್ಟ ಸಹಾಯ
ಕೂಡ ಬೇರೆಯವರ ಜೀವನದಲ್ಲಿ ಒಂದು
ದೊಡ್ಡ ಬದಲಾವಣೆ ತರಬಹುದು..-
ಕಷ್ಟಗಳೆಂಬ ಗೆರೆಗಳಿಂದ ಬಡತನವೆಂಬ ನೋವಿನಿಂದ ಬಳಲುತ್ತಿರುವ ಮನಸ್ಸುಗಳನ್ನು ಯಾವತ್ತು ತಿರಸ್ಕಾರದಿಂದ ನೋಡಬಾರದು ಸಾಧ್ಯವಾದಷ್ಟು ಸಹಾಯದ ಕೈಚಾಚೋಣ ಅವರ ಬದುಕಿಗೆ ಭರವಸೆ ತುಂಬೋಣ.
-
ನಿಮ್ಮ ಜೊತೆಗಾರರಾಗಲಿ, ಸಂಬಂಧಿಕರಾಗಲಿ, ಸ್ನೇಹಿತರಾಗಲಿ, ಇನ್ಯಾರೋ ಪರಿಚಯಸ್ಥರಾಗಿರಲಿ ನಿಮ್ಮನ್ನು ದಿನವೂ ನೆನಪಿಸಿಕೊಳ್ಳದೆ ಕೇವಲ ಯಾವುದೋ ಒಂದು ಸಂದರ್ಭದಲ್ಲಿ ಅಥವಾ ಅವರು ಸಮಸ್ಯೆಯಲ್ಲಿದ್ದಾಗ ಅಥವಾ ನಿಮ್ಮಿಂದ ಯಾವುದೋ ಒಂದು ಕಾರ್ಯ/ಕೆಲಸ ಆಗಬೇಕಿದ್ದಾಗ ಮಾತ್ರ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ, ನಿಮ್ಮ ಹತ್ತಿರ ಮಾತಾಡುತ್ತಾರೆ ಭೇಟಿಯಾಗುತ್ತಾರೆ ಎಂದೂ ಯಾವತ್ತೂ ಬೇಜಾರಾಗಬೇಡಿ ಬದಲಾಗಿ ಖುಷಿ ಪಡಿ.
ನಿಮ್ಮ ಹತ್ತಿರ ನಿಮಗೆ ಗೊತ್ತಿಲ್ಲದಿರುವಂತೆಯೇ ಅವರ ಅನೇಕ ಸಮಸ್ಯೆಗಳಿಗೆ ಪರಿಹಾರ ಅಡಗಿವೆ ಅವರಿಗೆ ಗೊತ್ತಿಲ್ಲದ ಎಷ್ಟೋ ಮಾಹಿತಿಗಳು ನಿಮ್ಮಲ್ಲಿ ಸಂಗ್ರಹವಾಗಿವೆ ಹಾಗೆ ಅವರಿಂದ ಮಾಡಲಾಗದ ಎಷ್ಟೋ ಕಾರ್ಯಗಳು/ಕೆಲಸಗಳು ನಿಮ್ಮಿಂದ ಮಾಡಲು ಸಾಧ್ಯ ಇದಕ್ಕಿಂತ ಒಳ್ಳೆಯ ವಿಷಯ ಮತ್ತೇನಿದೆ ಹೇಳಿ ಹಾಗಾಗಿ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಿ ಸಂತೋಷವಾಗಿರಿ ಜೊತೆಗೆ ಇತರರಿಗೂ ಸಂತೋಷ ನೀಡಿ.
-
ಸ್ವಾಭಿಮಾನವನ್ನೇ ಸ್ವತ್ತಾಗಿಸಿ ಬದುಕುವವರಿಗೆ ಪರರು ನೀಡುವ
ಕಿಲುಬು ಕಾಸು ಸಹ ಪಾಷಾಣವೆಂದೆನಿಸುತ್ತದೆ..!
ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಯಾರಾದರೂ ನಿಮ್ಮನ್ನು
ಸ್ವಾಭಿಮಾನದಲ್ಲೂ ಸಹಾಯವ ಬೇಡಿದೊಡೆ
ಸಹಾಯಹಸ್ತವ ಚಾಚಿ ನಿಂದಿಸದಿರಿ ಅವರಲ್ಲಿ ಸ್ವಾಭಿಮಾನವದು ತಾತ್ಕಾಲಿಕವಾಗಿ ಸೋತಿರುತ್ತದಷ್ಟೆ ಸತ್ತಿರುವುದಿಲ್ಲ 😔-
ಮನಸಾರೆ ಸಾಂತ್ವನ ನೀಡುವ ದೊಡ್ಡತನವಿರಲಿ..
ಅದಕಾಗಿ ಗರ್ವ ಗೊಳ್ಳದಿರಿ..
ಸಾಂತ್ವನವನು ಪಡೆದ ಮನ ಆನಂದವ ಉಂಡಾಗ
ಮತ್ತೆ ಸಾಂತ್ವನವ ನೆನಪಿಸುವ ಆ ಮಾತು ಬೇಡ..
ನೀವೇನೆಂಬುದು ಆ ನೊಂದಮನಕೆ ತಿಳಿದಿರುವಾಗ
ಮತ್ತಾರಿಗೂ ಅದು ತಿಳಿಯುವ ಅಗತ್ಯವಿಲ್ಲ..-
ಕಾವಿ ಹಾಕಿದವರೆಲ್ಲ ಸನ್ಯಾಸಿಗಳಲ್ಲ
ಖಾದಿ ತೊಟ್ಟವರೆಲ್ಲ ದೇಶಭಕ್ತರಲ್ಲ
ಖಾಕಿಯಿಲ್ಲದೆಯೂ ಸಾರ್ವಜನಿಕ
ಸೇವೆಗೈಯುವ ಹೃನ್ಮನಗಳನ್ನ
ನೆನಪಿಸಿಕೊಳ್ಳುವವರು ಬಹು ವಿರಳ..!
-
ಎಲ್ರಿಗೂ ನೆರಳು ನೀಡುವ ಮರ
ತನ್ನ ನೆರಳಲ್ಲೇ ಇನ್ನೊಂದು ಗಿಡ
ಬೆಳಿಯಲಿಕ್ಕೆ ಅವಕಾಶ ನೀಡೊಲ್ಲ.
-