Abhigna P M Gowda   (✍ ಅಭಿಜ್ಞಾ ಪಿ ಎಮ್ ಗೌಡ)
9.7k Followers · 201 Following

read more
Joined 7 September 2018


read more
Joined 7 September 2018
8 HOURS AGO

ಅರುಣನ ಉದಯವು ಕಣ್ಮನ ಸೆಳೆದಿದೆ
ಬೆರಗನು ಸೂಸುವ ಸಾಸಿರಗದಿರ
ಕರೆದಿವೆ ಹಕ್ಕಿಗಳಿಂಚರ ಕಂಪನು ಹೆಚ್ಚಿಸಿ
ಮೆರೆಯುವ ವೈಭವ ಸಾಹಿತ್ಯಸಾರ||

ಕಸವರ ಬಣ್ಣವ ಚೆಲ್ಲುತ ಧರೆಯಲಿ
ಬೆಸೆದಿದೆ ಬಂಧವ ಚಿರಂತನ
ವಿಸರುಹ ಕಂಪದು ನಸುಕಲಿ ಮಿರುಗುತ
ವಸುಮತಿ ಮಿಂಚಿದೆ ನಿತ್ಯನೂತನ||

ಗಭಸ್ತಿ ಬೆಳಕದು ಧರೆಯಲಿ ಮರೆಯಲಿ
ಶುಭಕರ ಸೂಚನೆ ತರುತಿರಲು
ತಬಲದ ನಾದಕೆ ಜತನದಿ ಸೇರುತ
ರಭಸದಿ ಮಿನುಗಿದೆ ಹೊಂಬಿಸಿಲು||

-


20 HOURS AGO

ghji

-


21 HOURS AGO

ಲಮನಜಜ

-


15 NOV AT 7:13

ಡಡದಧಮಮ

-


13 NOV AT 8:30

ಅಕ್ಷರ ಗಾರುಡಿಗ
ಪದಗಳ ಮಾಂತ್ರಿಕ
ನೇರನುಡಿ ನೇರ ನಡೆಯ ಕಲಾಕಾರ
ಹಾಗು ಬರಹಗಾರ
ಉದಯರವಿಯ
ಅಘಾತಕಾರಿ
ನಿರ್ಗಮನ ನಿಜಕ್ಕೂ
ಅಕ್ಷರಲೋಕಕೆ ತುಂಬಲಾರದನಷ್ಟ
ಬರೆಯುವ ಪ್ರತಿ ಸಾಲಲೂ
ಅಭಿಮಾನದ ಅಕ್ಷರ ಸಿಂಚನ
ಪ್ರತಿಯೊಬ್ಬರ ಮನಸ್ಸನ
ಸೂರೆಗೊಳ್ಳುವಂತಿತ್ತು..
ರವಿಬೆಳಗೆರೆಯವರ
ಅವಿರತಶ್ರಮ ಆತ್ಮಾವಿಶ್ವಾಸದ ಛಲ
ಅವಿಸ್ಮರಣೀಯವಾಗಿದ್ದವು.!

-


12 NOV AT 8:35

ನನ್ನ ಕಾಲ್ಗೆಜ್ಜೆಯ
ಸಪ್ತಸ್ವರ ರಾಗಕೆ
ನಿನ್ನೆಸರಿನ
ಝೇಂಕಾರದ
ಕಲರವ.!

ನಿನ್ನ ಪ್ರತಿಮಾತಿನ
ಸ್ವರಗಾನಕೆ
ನನ್ನುಸಿರನ
ಭಾವಮೇಳವೆ
ಚಂದದ ವೈಭವ!

-


12 NOV AT 8:27

ಕೆಲವೊಮ್ಮೆ
ಅಡೆತಡೆಗಳಿಲ್ಲದಿದ್ದರೆ
ಬದುಕೊಂತರ
ನಿಮ್ಮಳವಾದ
ಭಾವಸಾಗರದ ಬೀದಿ!
ಒಮ್ಮೊಮ್ಮೆ
ಏರಿಳಿತಗಳುಂಟಾದರೆ
ಆರ್ಭಟಿಸುವ
ಜನಸಂದಣಿಯುಳ್ಳ
ನಿರ್ಭೀತಿಯಿಲ್ಲದ ಹಾದಿ

-


2 NOV AT 15:19

ಜನ್ಮಭೂಮಿ ಕನ್ನಡಾಂಬೆ ಭುವನೇಶ್ವರಿ
ಚೆಲುವಿನ ತಂಗಾಳಿಯೆ ಕನ್ನಡತಿ
ನಿನ್ನ  ಕೃಪೆಯು ನಿತ್ಯವಿರಲಿ ರಾಜೇಶ್ವರಿ
ಭುವನ ಪಾಲಿತೆಯು ಭಾಗ್ಯವತಿ..

ನನ್ನೆದೆ ಮಂದಿರ ಸದಮಲದ ಗೂಡು
ದಿವ್ಯತಥ್ಯ ಪೂಜಿಸಿ ನಡೆವೆವು
ಹೊನ್ನಕಳಶದಿ ಕೂರಿಸುತ ಜೇನಗೂಡು
ಭವ್ಯಪಥದಿ ಮೆರೆಸಿ ಸಾಗುವೆವು....

ವಂದಿಸಿತ ನಿತ್ಯ ಕನ್ನಡತಿಗೆ ದಿವ್ಯಾರತಿ
ನನ್ನರಸಿ ನನ್ನೊಡತಿ ದೇವಿ
ಆರಾಧಿಸಿ ಮೊಳಗಿಸಿ ಜೈಕಾರ ಭಾತಿ
ಕರುಣಿಸುತ ನಿಂತ ವಾಗ್ದೇವಿ...

ಅರಿಶಿನ ಕುಂಕುಮ ಶೋಭಿತ ಭಾಷಿಣಿ
ಧರೆಯಲಿ ಜಲದಲಿ ಮಿಂದೆದ್ದು
ಗಿರಿವನ ಕಲರವ ಹಸಿರಿನ ಭಾಗ್ಯವು
ಹೊಳೆದಳು ನಡುವೆ ನಲಿದೆದ್ದು...

ಹಡೆದವ್ವ ತಾಯಿ ಪೊರೆದಂತೆ ನಮ್ಮನು
ನಿತ್ಯವೂ ರಕ್ಷಿಸಿ ಕಾದವಳು
ಧವಳದಿ ಸಹ್ಯಾದ್ರಿ ಪರ್ವತ ಗೋಪುರ
ತಣ್ಣನೆ ದಣಿವನು ನೀಗುವಳು...

ಚಿನ್ನುಡಿಯ ಪಸರಿಸಿ ಬೆಳೆಸುವಳು ತಾಯಿ
ತಾಯ್ನುಡಿಗೆ ನಮಿಸುತ ಸಾಗೋಣ
ಮುನ್ನುಡಿಯ ಬರೆದು ಕನ್ನಡವ ಉಳಿಸುತ
ಹೊನ್ನುಡಿಯ ಹಾಡಿ ಹೊಗಳೋಣ.!

-


2 NOV AT 14:03

ಕರುನಾಡ ದೀಪವನು
ಮೆರೆದಾಡಿ ಹಚ್ಚುತಲಿ
ಧರೆಯನು ಪ್ರಜ್ವಲಿಸೊ ವಾಗೀಶ್ವರಿ
ಕರೆಯನ್ನು ನೀಡುತಲಿ
ಗರಿಮೆಯನು ಹರಡುತ್ತ
ಹಿರಿತನದಿ ಬೀಗುತಿಹ ದಿವ್ಯೇಶ್ವರಿ||

ಒಲವೆತ್ತಿ ಹಣತೆಯನು
ನಲಿಯುತ್ತ ಬೆಳಗುವರು
ಚೆಲುವಿನಲಿ ಕನ್ನಡತಿ ಸರ್ವೇಶ್ವರಿ
ಅಲೆಅಲೆಯ ನುಲಿವಿನಲಿ
ಕಲೆಯಾಗಿ ಬಿಂಬಿಸುತ
ಸಲಿಲದಲು ಶುದ್ಧತೆಯ ಗಂಗೇಶ್ವರಿ||

ಕುಂಕುಮದ ಸೇಚನದಿ
ಕಂಕಣಿಕೆ ಕುಣಿಸುತ್ತ
ಸಂಕಲಿತ ಮಾಡುತಲಿ ಭುವನೇಶ್ವರಿ
ಟಂಕಾರ ಮಧುರತೆಯು
ಸಂಕಲ್ಪ ಗೈಯುತಲಿ
ಕಂಕರಿಯ ನುಡಿಸುವಳು ರಾಜೇಶ್ವರಿ||

ಅರಿಶಿನದಿ ಮಿಂಚುತ್ತ
ತರುಗಳಲಿ ನಲಿಯುತ್ತ
ಕರಮುಗಿವೆ ಕರುನಾಡ ಜಗದೀಶ್ವರಿ
ತರಕಸವ ಹಿಡಿಯುತ್ತ
ಚರಿತಾರ್ಥ ಹೆಸರಿಸಲು
ಪರಿಪುಷ್ಠಿ ಹೆಚ್ಚಿಸುವ ಪರಮೇಶ್ವರಿ..

-


2 NOV AT 9:39

ನಮ್ಮೀ ಕರುನಾಡು

ಕರುನಾಡ ಕಂಪನು ಬೀಸುತಿಹ ಬೀಡು
ತರುಲತೆಯ ಹಸಿರು ತುಂಬೈತಿ ಚಿಗುರಿ
ಪಂಪರನ್ನ ಜನ್ನಪೊನ್ನರೊತ್ತಿಹ ಐಸಿರಿ
ದಾಸಸಾಹಿತ್ಯ ಶಿಲ್ಪಕಲೆ ಮೆರದ ನಾಡು....

ಸಹ್ಯಾದ್ರಿ ತಪ್ಪಲದು ಕನ್ನಡತಿಗೆ ಕಿರೀಟ
ಕಾವೇರಿ ಕೃಷ್ಣೆ ಕಪಿಲೆಯರ ಅಭಿಷೇಕ
ಗಿರಿವನ ಅರಣ್ಯಗಳ ತೋರಣದ ಪ್ರತೀಕ
ಭುವನೇಶ್ವರಿ ಪರಿಷೆಯಿದು ಸಾರೋಟ....

ಅಷ್ಟಜ್ಞಾನಪೀಠ ಪ್ರಶಸ್ತಿಗಳ ಭಾಷೆಯಿದು
ಅಕ್ಷರಜ್ಞಾನದಿ ಗಿರಿಶಿಖರ ಮುಟ್ಟಿದ ವಾಗ್ದೇವಿ
ಛಂದೋಬದ್ಧ ಕವನಗಳಲಿ ಸಿಂಗಾರ ದೇವಿ
ಸಾಹಿತ್ಯ ಶಿಲ್ಪಕಲೆ ದಾರ್ಶನಿಕರ ನಾಡಿದು....

ಕನ್ನಡತಿ ಸೊಗಸೈತಿ ನಲಿವೈತಿ ನಿನ್ನೊಡಲು
ಮುತ್ತು ರತ್ನ ಹವಳಗಳೊತ್ತ ನಿನ್ನೀ ಮಡಿಲು..

-


Fetching Abhigna P M Gowda Quotes