ಸಾವಿರ ಸ್ನೇಹಿತರಿಗೆ ಸ್ನೇಹಿತೆಯಾದವಳಲ್ಲ ನಾನು!
ಒಂದೊಮ್ಮೆ ಆಗಿದ್ದರೂ ಅದು ಕೇವಲ ನಿಗದಿತ ಅವಧಿಗಷ್ಟೇ!
ಆತ್ಮೀಯ ಸ್ನೇಹಿತ ಎಂಬ ಸಾಲಲ್ಲಿ ಮೊದಲಿಗರಾಗಿ ಇದ್ದ ಅವರು ಎಂದಿಗೂ ಮೊದಲಿಗರೇ 💙❤️
ಭರ್ತಿಯಾಗದ ಖಾಲಿತನದ ಹೊರತು ಇನ್ನಾರಿಗೂ ಆ ಖಾಯಂ ಸ್ಥಾನ ದೊರಕದು....-
ಹೇಳೋಕೇನಿಲ್ಲ! ತೋಚಿದ್ದು ಗೀಚೋದು (ಸಂದರ್ಭಕ್ಕನುಸಾರ, ಕಲ್ಪನೆಗನುಸಾರ) ಅಷ್ಟೇ!
ಕನಸು ಕಮರಿಹೋಗುವ ಮುನ್ನ ಬದುಕಿಬಿಡು...
ಬದುಕು ಅನಿಶ್ಚಿತ!
ನಾವು ಉಸಿರಾಡುವ ದಿನಗಳು ಮಾತ್ರ ನಮ್ಮ ಪಾಲಿಗೆ ಕನಸ ಹೊತ್ತು ತರುವುದಷ್ಟೇ ಶಾಶ್ವತ ❤️💙-
ಬದುಕಲ್ಲಿ ಎಲ್ಲವೂ ಬೇಕು ಎನಿಸುವಾಗ ಜೀವನ ಆರಂಭಿಕ ಹಂತದಲ್ಲಿರುತ್ತದೆ...
ಬೇಕು ಎನ್ನುವುದರಲ್ಲೇ ಅದನು ಸವೆಸುತ್ತ ಹೋದಂತೆಲ್ಲ ಜೀವಿತಾವಧಿಯ ಬಹುಪಾಲು ಮುಕ್ತಾಯದ ಹಂತ ತಲುಪಿಬಿಟ್ಟಿರುತ್ತದೆ!
-
ಕೆಲವರ ಸಂಘವೇ ಹಾಗೇ...
ಅಲ್ಪ ಸಮಯದಲ್ಲೇ ಅವರೊಂದಿಗಿನ ಅತ್ಯಾಪ್ತತೆಯದು ಆತ್ಮೀಯತೆಯ ಬೆನ್ನೇರಿ ಮನದಿ ಸ್ನೇಹದ ಬೀಡು ಬಿಟ್ಟಿರುತ್ತದೆ!
ಕಳೆದುಕೊಳ್ಳುತ್ತೇವೆ ಎನ್ನುವ ಸಣ್ಣ ಸೂಚನೆಯೂ ಸಿಗದಂತೆ ಮಾಯವಾಗಿ ಬಿಡುತ್ತಾರೆ...
ಕಳೆದುಕೊಂಡರೂ ಜೊತೆಗಿರುವರು ಎನಿಸುವ ನಂಟು
ಸ್ನೇಹವೆಂಬ ಗಂಟಿಗೆ ಖಾಯಂ ಕಾವಲಿನಂತೆ ❤️💙
-
ತನ್ನ ತಪ್ಪುಗಳನ್ನು ಅರಿತು ಒಪ್ಪಿಕೊಳ್ಳುವವನು ತಪ್ಪಿತಸ್ಥನಾಗಲಾರ ಬದಲಿಗೆ ಉತ್ತಮ ಮನುಷ್ಯನಾಗುತ್ತಾನೆ....
-
ನಾವು ಯಾರನ್ನೋ ಸಂತೋಷ ಪಡಿಸಲು ಯತ್ನಿಸುವ ಪ್ರತಿಭಾರಿಯೂ ನಮ್ಮ ಸ್ವಯಂ ಸಂತೋಷವನ್ನು ಮರೆತು ಅವರ ಸಂತಸದಲ್ಲೇ ನಮ್ಮ ಖುಷಿಯನ್ನು ಕಂಡುಕೊಳ್ಳುತ್ತೇವೆ!
ನಾವು ಮಾಡಿದ ಪ್ರತಿಯೊಂದು ಪ್ರಯತ್ನವನ್ನೂ ಅವರು ತಿಳಿದೂ ತಿಳಿಯದಂತೆ ತೆಗಳುತ್ತಲೇ ಹೋದಾಗ ನಮ್ಮ ಅತಿಯಾದ ಮೂರ್ಖತನಕ್ಕೆ ನಮ್ಮನ್ನೇ ನಾವು ತಪ್ಪಿತಸ್ಥರೆಂದು ಒಪ್ಪಿಕೊಂಡುಬಿಡುತ್ತೇವೆ....
-
ನಿಮ್ಮ ಜೊತೆಗಿನ ನಡವಳಿಕೆಯನ್ನು ಬದಲಿಸಿಕೊಂಡವರಿಗೆ ಕಲಿಸುವ ಉತ್ತಮ ಪಾಠ!
ನಿಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳಿ 🤞-