ನಾ ನಿನ್ನ ನಗುವಿಗೊಂದು
ಸಾರ ಬರೆಯಲೆ
ಆ ಸಾರದಲ್ಲಿ ಧಾರೆಯಾಗಿ
ನಾನೇ ಹರಿಯಲೇ.
ನಾ ನಿನ್ನ ಭಾವಕ್ಕೊಂದು
ಚಿತ್ರ ಬರೆಯಲೆ
ಆ ಚಿತ್ರತ್ಮದಲ್ಲಿ ಒಂದಾಗಿ
ನಿನ್ನ ಕರೆಯಲೇ....
ನಾ ನಿನ್ನ ನೋಟಕ್ಕೊಂದು
ಪ್ರತಿಕ್ರಿಯೆ ಬರೆಯಲೆ
ಆ ಕ್ರಿಯೆಯಲ್ಲಿ ಬಂಧಿಯಾಗಿ
ನಾ ಬಿಂದುವಾಗಲೇ..
ನಾ ನಿನ್ನ ಮಾತಿಗೊಂದು
ಚುಟುಕ ಬರೆಯಲೆ
ಆ ಚುಟುಕದಲ್ಲಿ ಚಿಟಿಕೆಯಾಗಿ
ನಾ ಘಟ್ಟ ಸೆರಲೇ...
ನಾ ನಿನ್ನ ನೆನಪಿಗೊಂದು
ಸಹಯೋಗ ಬರೆಯಲೆ
ಆ ಯೋಗದಲ್ಲಿ ಭೋಗವಾಗಿ
ನಾ ಭಾಗ್ಯ ಪಡೆಯಲೇ...-
ಮೌಲ್ಯವರಿಯದ ಬಂಧಕ್ಕೆ
ಏಕೆ ಹರಕೆ ಕಟ್ಟಲಿ??
ನಾಡಿ ಮಿಡಿಯದ ಹೃದಯಕ್ಕೆ
ಏಕೆ ಹಾಜರಾತಿ ಹಾಕಲಿ??-
ನಮ್ಮನ್ನು ಅರ್ಥ ಮಾಡಿಕೊಳ್ಳುವಂಥವರು ಸಿಗುವುದು ವಿರಳ..
ಆದರೆ
ನಮ್ಮೊಂದಿಗೆ ವ್ಯರ್ಥವಾಗಿ ಮಾತನಾಡುವಂಥವರು ಸಿಗುವರು ಬಹಳ..-
*ಗೆಳೆಯ*
ನಿನ್ನೊಡನೆ ಕುಳಿತು ಭವಿಷ್ಯದ ಕನಸ ಕಾಣುವಾಸೆ ಗೆಳೆಯ
ಮನದ ಕದವ ತೆರೆದು ಪಿಟಿ ಪಿಟಿ ಮಾತು ಆಡುವಾಸೆ ಗೆಳೆಯ..
ನನ್ನಂತರಂಗದಲಿ ನಿನ್ನೊಲವಿಗೆ ಉಸಿರಾಗಿ ಕೊನೆ ತನಕ ಪಯಣಿಸುವೆ
ನಿನ್ನ ತುಂಟಾಟಕ್ಕೆ ಮುಗ್ಧೆಯಂತೆ ಕಿಲ ಕಿಲನೆ ನಗುವಾಸೆ ಗೆಳೆಯ..
ಎರಡು ಹೃದಯ ಸಂಗಮ ಅನುಕ್ಷಣ ಒಂದು ಬಗೆಯ ಸಂಭ್ರಮ
ಹಾದಿಲಿ ಕೈಗೆ ಕೈಯ ಬೆಸೆದು ಜಿಟಿ ಜಿಟಿ ಮಳೇಲಿ ನಡೆವಾಸೆ ಗೆಳೆಯ..
ಕಳೆದ ದಿನಗಳ ನೆನಪಿನ ಸ್ಪರ್ಶಕ್ಕೆ ಒಲವು ಚಿಲುಮೆಯಾಗಿ ಚಿಮ್ಮಿದೆ
ಬೆರೆತು ಹೋದ ಭಾವದಿ ದಿನ ದಿನ ಚೈತ್ರಮಾಸ ಆಗುವಾಸೆ ಗೆಳೆಯ..
ನನ್ನೆದೆ ಅಂಗಳದ ಚಿತ್ತಾರವ ಕಣ್ಣ್ ಸನ್ನೆಯಲ್ಲೇ ಬಿಡಿಸುವಾಸೆ ಗೆಳೆಯ
'ಅವಳದನಿ'ಲಿ ನವಕಾವ್ಯವ ನಿನ್ನೆದುರು ಸರ ಸರನೆ ನುಡಿವಾಸೆ ಗೆಳೆಯ..-
ನೀ ಹತ್ತಿರವೆನ್ನುವ ಉತ್ತರ ಸಿಗುವ ತನಕ
ನಾ ತತ್ತರಿಸುವೆನೆನ್ನುವುದು ನನ್ನ ಚಿತ್ತದ ದ್ಯೋತಕ.-
ಬೆಂದರಿಲ್ಲಿ, ನೊಂದರಿಲ್ಲಿ, ಅರ್ಥವಿಲ್ಲ ಬಾಳಿನಲ್ಲಿ
ಬೆಟ್ಟದಂತೆ ನಿಂತರಿಲ್ಲಿ,
ಹೆಸರುಂಟು ಇತಿಹಾಸದ ಪುಟಗಳಲ್ಲಿ..-
ಕಾದಿದೆ ಮನವೀಗ ನಿನಗೆ
ಭೂಮಿ ಕಾದಂತೆ ಮಳೆಗೆ
ನಿನ್ನ ನೆನಪೊಂದೆ ಹೃದಯಕೆ
ನಿನ್ನ ಬರಹವೆ ಸಾಕು ಜೀವಕೆ...-
ಈ ಜಗತ್ತಿನಲ್ಲಿ
ನೋವಿಗಂಟಿದ ಕಣ್ಣೀರು,
ನಲಿವಿಗಂಟಿದ ನಗು,
ಯಾವುದು ಶಾಶ್ವತವಲ್ಲ
ಎಲ್ಲವೂ ಕ್ಷಣಿಕ
ನಾವೆಲ್ಲರೂ
ಕ್ಷಣಿಕದಲ್ಲಿ ಕ್ಷಣಿಕ..-
ಅಳಿದದ್ದು ಯಾವುದು ಮನಸ್ಸಲ್ಲಿ ಉಳಿಯಲ್ಲ
ಉಳಿದದ್ದು ಯಾವುದು ಮನಸ್ಸಿನಿಂದ ಅಳಿಯಲ್ಲ..
ಪಡೆದುಕೊಂಡು ಬಂದಿದ್ದು ಕೈಜಾರಿ ಹೋಗಲ್ಲ.
ಕೈಜಾರಿ ಹೋದದ್ದನ್ನು ನಾವು ಪಡೆದುಕೊಂಡಿರಲ್ಲ..
ಕಣ್ಣಿಗೆ ಕಂಡಿದೆಲ್ಲಾ ಸತ್ಯವಾಗಬೇಕೆಂದಿಲ್ಲ
ಸತ್ಯವು ಕಣ್ಣಿಗೆ ಕಾಣಿಸಬೇಕೆಂದಿಲ್ಲ...
ನಡೆವ ಹಾದಿಯೆಲ್ಲಾ ಗುರಿಯ ತಲುಪಿಸಲ್ಲ..
ಗುರಿ ತಲುಪುವ ಹಾದಿಯಲ್ಲಿಯೇ ನಡೆಯಬೇಕಲ್ಲ..
ನಮಗೆ ನನಸಾಗುವ ಕನಸುಗಳೇ ಬೀಳುವುದಿಲ್ಲ
ಬೀಳುವ ಕನಸುಗಳ ನಾವೇ ನನಸಾಗಿಸಬೇಕಲ್ಲ..-