ಗಂಡ ಹೆಂಡತಿ ಸಂಬಂಧ ಅನ್ನೋದು ಎಷ್ಟೊಂದು ಪವಿತ್ರ ಮತ್ತೆ ಪವರ್ ಫುಲ್ ಅಲ್ವಾ!!??
ಮದುವೆ ಮೊದಲು ಯಾರೋ ಏನೋ ಗೊತ್ತಿರಲ್ಲ
ಅದ್ರೆ ಮದುವೆ ಅದ್ಮೇಲೆ ಅವರೆ ಎಲ್ಲಾ ಆಗಿಬಿಡ್ತಾರೆ...-
"ಹಣ" ನೀನು "ಹೆಣ" ಆಗುವ ತನಕ ಮೆರೆಸಬಹುದು,
ಆದರೆ ನಿನ್ನವರು ನೀ ಸತ್ತ ಮೇಲೂ ಕೂಡ ನಿನ್ನ ಮೆರೆಸ್ತಾರೆ, ನಿನ್ನಾತ್ಮಕೆ ಶಾಂತಿ ನೀಡುವುದರ ಮುಖೇನ...-
ಕೆಲವೊಬ್ಬರನ್ನು ಬೇಡ ಅಂತ ಮನಸಿಂದ ಹೊರ ಹಾಕೋಕು ಆಗಲ್ಲ...,
ಹಾಗೆ ಅಂತ ನಮ್ಮೋರು ಅಂತ ಮನಸಲ್ಲಿ ಇರಿಸಿಕೊಳ್ಳೋಕು ಆಗಲ್ಲ....-
ರತಿರೂಪಿ ವೈಯಾರಕ್ಕೆ
ಇನ್ನೊಂದು ಹೆಸರೇ ನಿನ್ನಲ್ಲವೆ ಸಖಿ..!!
ಸೌಂದರ್ಯವ ಅರಿವೆ ಅನ್ನುವ
ಪಂಜರದಲ್ಲಿ ಬಚ್ಚಿಡುವ
ಕಲೆಯಲ್ಲವೇ ನಿನ್ನದು ಸಖಿ ..!!
ಹೆಣ್ತನದ ಎದೆ ಗೂಡಲ್ಲಿ
ನೂರು ಆಸೆಯ ಬಚ್ಚಿಟ್ಟು
ಸೆರಗ ತುದಿಯಲ್ಲಿ ಕಣ್ಣೀರ
ವರಿಸಿಕೊಳ್ಳುವವಳು ನೀನಲ್ಲವೇ ಸಖಿ..!!
ಸಖನ ಸ್ಪರ್ಶಕ್ಕೆ ಹಾತೊರೆದು
ಗರಿ ಬಿಚ್ಚಿ ಕುಣಿದ ನವಿಲಂತೆ
ಅಲ್ಲವೇ ನಿನ್ನ ಕನಸುಗಳು ಸಖಿ..!!
ಮೂರು ದಿನದ ಬಾಳಿನಲ್ಲಿ
ದುಪ್ಪಟ್ಟು ಪ್ರೀತಿಯ ನೀಡಿ
ತಮ್ಮವರ ಸುಖಕ್ಕಾಗಿ ಸ್ಮರಿಸುವ
ಬೆಳದಿಂಗಳಲ್ಲವೆ ನೀನು ಸಖಿ..!!-
ಕೆಲವರ ಪರಿಚಯ ಬೇಗ ಆಗುತ್ತೆ ಹೋಗ್ತಾ ಹೋಗ್ತಾ ಅವರು ಬಣ್ಣದ ಅರಿವು ನಮಗೆ ಆಗುತ್ತೆ....,
ಇನ್ನು ಕೆಲವರ ಪರಿಚಯ ವಿಳಂಬವಾದರೂ ಅವರ ಒಳ್ಳೆತನದ ಅರಿವು ನಮಗೆ ಆಗುತ್ತೆ....!!!-
ಅವಳನ್ನು ವಿವಸ್ತ್ರ ಮಾಡಿದ್ದು ಅವನೆ ಆದರೂ
ಅವಳಿಗೆ ಮಾತ್ರ ವೇಶ್ಯೆ ಅನ್ನುವ ಪಟ್ಟ...!!!!-
ಯಾರಾದರೂ ನಮ್ಮನ್ನು ಸಮಯ ಸಿಕ್ಕಾಗ ಭೇಟಿಯಾಗುವುದಕ್ಕೂ,
ಸಮಯ ಮಾಡಿಕೊಂಡು ಭೇಟಿಯಾಗುವುದಕ್ಕೂ ವ್ಯತ್ಯಾಸವಿದೆ.
ಮೊದಲನೆಯದ್ದು ಅವಶ್ಯಕತೆ
ಎರಡನೆಯದ್ದು ಆಧ್ಯತೆ.....-
ಮನುಷ್ಯ ಎಷ್ಟೇ ದೊಡ್ಡವನಾದ್ರು,
ಎಷ್ಟೇ ವಿಧ್ಯೆ, ಬುದ್ಧಿ ಇದ್ದರೂ,
ಎಷ್ಟೇ ಆಸ್ತಿ, ಹಣ ಮಾಡಿದ್ದರು ಕೂಡ
ತನ್ನ ಮೊದಲ ಮತ್ತು ಕೊನೆಯ ಸ್ನಾನವನ್ನು
ತನ್ನ ಕೈಯಾರೆ ಮಾಡಿಕೊಳ್ಳಲಾರ-