ಬಾರದ ಮಳೆ ಬರ ತರುವುದು
ಬಂದ ಮಳೆ ನೆರೆ ತರುವುದು
ಸಾಲದೊರೆಯ ಹೊತ್ತ ರೈತ
ಬೇಪ್ಪಾಗಿ ಕೂಡುವನು ಇತ್ತ...!
ಇದು ಕಲಿಯುಗದ ವಿಪರ್ಯಾಸ
ಹಿಡಿ ಅನ್ನಕ್ಕೆ ಅನ್ನದಾತನ ಸಂಕಷ್ಟ
ಉಳುವ ಭೂಮಿಯ ಒಡಲ ಕಾವಿಗೆ
ಬೆವರ ಬದಲು ರಕ್ತದ ತರ್ಪಣ...!
ಹಸಿರೆಲೆಯೆ ಉಸಿರೆಂದು ಹಲುಬಿದ
ವಸುದೆಗೆ ಬೀಜ ಬಿತ್ತಿ ವರುಣನ ಕರೆದ
ಗೋವಿನ ಗಂಜಲಲಿ ಗಣ್ಯತೆಯ ಕಂಡ
ಗತಿಸಿಗದೇ ನೇಳಿಗೆ ಕೊರಲೋಡ್ಡಿದ...!
ಇತ್ತ ಬೆಳೆಯಿಲ್ಲ ಅತ್ತ ಸಾಲ ತಪ್ಪಲಿಲ್ಲ
ಕೋಟಿ ಕೋಟಿ ಸಾಲಕ್ಕೆ ದೇಶ ಬಿಟ್ಟರೂ
ಸಾವಿರ ಸಾಲಕ್ಕೆ ಮನೆ ಮುಟ್ಟುಗೋಲು
ಹಸು ನೀಗಿಸುವ ಹಮ್ಮಿರಗೆ ಅವಮಾನ ಪಾಲು
ಭಾರತೀಯ ಬೆನ್ನಮೂಳೆ ನಾಮಾಂಕಿತ
ಶಾಂತಿಸೂತ್ರಕೆ ಸಿಲುಕಿ ಕ್ರಾಂತಿಗೆ ಬಲಿಯಾದ
ವ್ಯವಸಾಯದಿ ಬಿಸಿ ನೆತ್ತರ ಬಸಿದವ
ಕುಂತನಿಂದು ಕೈ ಹೊತ್ತು ಮಸ್ತಕಕ...!
-✍🏻 ಪ್ರಿಯಾಂಕಾ ಬಿಳ್ಳೂರ.
-
ನೇಗಿಲು ಹೊತ್ತ ಜೀವಗಳೆರಡು
ಉಳುವ ಯೋಗಿಯ
ಉಳುಮೆಯ ಸೊಗಸಿಗೆ
ಲಜ್ಜೆಯಿಂದಲಿ ಹೆಜ್ಜೆಯ ಹಾಕುತ
ಮಣ್ಣನು ಹದವಗೊಳಿಸುತ ಸಾಗಲು
ಭೂರಮೆಯು ಹಸಿರ
ಸೀರೆಯನುಟ್ಟು ಕಂಗೊಳಿಸಿದಳು..-
ಕೈ ತುತ್ತನಿಟ್ಟು ನಮ್ಮನ್ನೆಲ್ಲ
ಪೋಷಿಸುವ ಪೋಷಕ
ಸಲಹುವ ಸಾಹುಕಾರ
ನಿನಗಿದೋ ನಮ್ಮಯ ನಮಸ್ಕಾರ-
ಹಗಲು ಇರಳು ಎನ್ನದೆ
ದುಡಿಮೆಯೇ ರೈತರ ಉಸಿರು
ಬೆವರಿನ ನಿರಂತರ ದುಡಿಮೆಯೇ ಹಸಿರು
ಪ್ರತಿ ಬಿತ್ತನೆಯ ಸಸಿಯಲಿ ಅಡಗಿದೆ
ರೈತರ ಅವ್ವಂದಿರ ಹರಕೆ
ದುಡಿಯುವ ರೈತರ ಕೊರಳಿಗೆ
ಬೀಳದಿರಲಿ ನೇಣಿನ ಕುಣಿಕೆ-
ರೈತನೆಂಬ ಸಿರಿಯು
ನೀಡುವನು ತನ್ನ ಬೆವರ
ಹರಸಿ ದುಡಿದ ಫಲವನ್ನು
ಬಂದಷ್ಷು ದುಡ್ಡು ಬರಲಿ ಎಂದು
ಕೇಳಿದಷ್ಟಕ್ಕೆ ಕೊಟ್ಟು
ನಷ್ಟವ ಸಾಲವಾಗಿ ಪಡೆದು
ತನ್ನ ಬದುಕನ್ನೇ ಎರವಲಾಗಿ ಇಟ್ಟು,
ಮಕ್ಕಳು, ಮಡದಿಯ
ಸರಪಳಿಗೆ ಸಿಕ್ಕು
ತನ್ನ ಬಗ್ಗೆ ತಾ ಮರೆತು
ಅವರ ಕ್ಷೇಮವ
ತನ್ನ ಕ್ಷೇಮವೆಂದು
ಎಲ್ಲದರಲ್ಲೂ ತನ್ನನ್ನು ತಾ
ಕಷ್ಟವೆಂಬ ಬೆಂಕಿಯಲ್ಲಿ
ದೂಡಿಕೊಂಡುಬಿಡುವನು..
ತನ್ನ ಮೇಲಿರದ ನಂಬಿಕೆಯ
ವರುಣನ ಮೇಲಿಟ್ಟು
ತನ್ನ ತಾ ಮರೆತು ಪೈರನ್ನು
ತನ್ನ ಮಗುವಂತೆ ಸಾಕುವ
ಹೃದಯವಂತ ನಮ್ಮ ರೈತನು..
ಅವನಿಗೊಂದು ನನ್ನ ಸಲಾಮ್..🙏😍
-
ಬಸಿದ ಬೆವರು ಭೂತಾಯಿಯ ಮಡಿಲಿಗೆ
ಕೆಸರು ತುಂಬಿದ ಬದುಕು ರೈತನ ಪಾಲಿಗೆ.
ದುಡಿದು ಬೆಳೆದ ಫಸಲು ಕಡಿಮೆ ಬೆಲೆಗೆ.
ಹಸಿರು ನಂಬಿದ ಸಾಲ ಅವನ ಹೆಗಲಿಗೆ.
ಬೆಳೆದು ತಂದ ಅನ್ನ ಹಸಿದವರ ಅಗಲಿಗೆ.
ಓಟಿನ ಗುರುತು ಮಾತ್ರ ರೈತನ ಬೆರಳಿಗೆ.
ಕೊಳೆತ ಸಾಲದ ಶೂಲ ಅವನ ಕೊರಳಿಗೆ.-