ಕೊನೆಯಿರದ ಸಾಗರದಿ ತೀರದ ಹುಡುಕಾಟ
ಪ್ರೀತಿಯ ಕಡಲಲಿ ಆಗಾಗ ಜೋರಲೆಗಳ ಏರಿಳಿತ
ನಾಳೆಯಲಿ ನೆನ್ನೆಗಳ ನೆನಪಿನ ಮಳೆಯ ಜಲಪಾತ
ಸಾಕೆನಿಸಿದರು ಸಾಗುವುದು ತಿರುವುಗಳೊಡನೆ ಜೀವನದ ಬಾಳಪುಟ
ಒಟ್ಟಿನಲಿ ಎಲ್ಲವೂ ಅನಿರೀಕ್ಷಿತ,
ದಾರಿ ಕಾಣದೆ ನಡುವೆ ನಿಂತಾಗ
"ಸಪ್ತ ಸಾಗರದಾಚೆ ಎಲ್ಲೊ"
ಕೂಗೊಂದು ಕೇಳಿಸಿದೆ ನನ್ನೆ ಕರೆಯುತ
ನನ್ನೆ ಕರೆದು ಹಿಡಿ ಭರವಸೆಯ ನೀಡುತ..-
ಕೆಲವೊಂದು ಕಾಲ್ಪನಿಕ 😊
ಕೆಲವೊಂದು ನೈತಿಕ 🤘
ಬಾನಲಿ ಅದೆಷ್ಟು ಸುಂದರ
ತಾರೆಗಳೊಡನೆ ಆ ಒಂಟಿ ಚಂದಿರ
ಕೈಗೆಟುಕದೆ ಸೇರಿರಲು ಆಗಸದ ಊರ
ನಿನ್ನೊಲವ ಮಳೆ ಅದೆಷ್ಟು ಮಧುರ
ಸವಿಯದೆ ನೆನೆಯದೆಯು ಮನವು ಮಿಂದು ಭಾರ
ನೀ ನಾಳೆಗೆ ಅಮಾವಸೆ ಎಂದು ಸರಿದರು ದೂರ ದೂರ-
"ಕವಿತೆಗೊಂದಿಷ್ಟು ಕವಿತೆ"
ನೀ ಬರಿ ಪದಗಳ ಸಾಲಲ್ಲ
ಮನದಾಳದಿ ಅಳಿದುಳಿದ ಮೌನದ ಭಾಷೆ
Caption👇-
ಇರುವುದೆಲ್ಲವ ಇರುವಂತೆಯೇ ಇರಿಸಿ,
ತನ್ನದಲ್ಲದವುಗಳ ತನ್ನದಾಗಿಸುವಾಸೆಯಲಿ
ತನ್ನತನವನೆ ತಾ ತೊರೆದು,
ತನ್ನನ್ನೇ ತಾ ತಿಳಿಯದೆ,
ಮಣ್ಣಿನಲ್ಲಿ ಮಣ್ಣಾಗುವವರೆಗು
ಮಾನವೀಯತೆಯ ಮರೆತು
ಮಿತಿ ಮೀರಿ ಮೆರೆದ ಮನುಜರೊಳು,
ನಾನು ನನ್ನದರ ನಡುವೆ ನಶ್ವರವೆಂದರಿತು
ಮೌನಿಯಗಬೇಕು ಜನದೊಳು ಮೌನಿಯಾಗಬೇಕು.
ಸಕಲವನು ಸೃಷ್ಷ್ಟಿಸಿದ ಸೃಷ್ಟಿ ಕರ್ತನಂತೆ
ಮೂಕರಾಗಬೇಕು ಜಗದೊಳು ಮೂಕರಾಗಬೇಕು..-
ಇತ್ತೀಚೆಗೆ ನನ್ನ ನಾನೇ ಹುಡುಕುತಿರುವೆ ಸುತ್ತಮುತ್ತಲೂ
ನಿನ್ನ ಹೃದಯದೊಳು ಅಡಗಿರುವುದನೆ ಮರೆತು...
ಆಗಾಗ ನೀ ಎದುರಾದರೆ ಎದೆಯೊಳವಿತ
ಭಾವನೆಗಳ ವಿನಿಮಯ ನನಗರಿವಾಗದೆಯೆ
ಕಣ್ ಕಣ್ಗಳು ಬೆರೆತು...
ಮೌನದಿ ಮನಸುಗಳು ಮಾತಾಡಿದೆ
ಸಣ್ಣ ಸಿಹಿ ಕಿರುಬೆರಳ ಸ್ಪರ್ಶವ ಬಯಸುತ
ನಾಚಿ ದೂರದಿ ನಿನ್ನೆದುರು ನಿಂತು...
ಉಸಿರುಸಿರ ಏರಿಳಿತದೊಳು
ನಿನ್ನ ಹೆಸರನೆ ಜಪಿಸುವೆ ಆಲಿಸು
ಚೂರು ನೀ ತುಸು ಸನಿಹವೇ ಕುಳಿತು..
ನೀನಿರದ ಗಳಿಗೆಯಲಿ ಕಲ್ಪನಾ ಲೋಕದೊಳು
ಜೊತೆಗಿರುವೆ ತುಂಟ ನಗು ಬೀರಿ ಉಳಿಸುತ
ಕೆನ್ನೆ ಮೇಲೊಂದು ಗುರುತು..
ಕೆಲವೊಮ್ಮೆ ಇನ್ನೇನಿದೆ ಅನಿಸಿದೆ ಜಗದೊಳು
ನಿನ್ನೊಲವ ಹೊರತು❣️..ನಿನ್ನೊಲವ ಹೊರತು❣️..
- ಮನ
-
ಗೆಳೆಯ
ಮುಗಿದು ಹೋಗಲು ಹೊರಟ ಅಧ್ಯಯದಿ
ನಿನ್ನಾಗಮನ ತೆರೆದಿದೆ ಹೊಸದೊಂದು ಕಥೆ..
ನಿನಗೆ ಹೇಳದೆ ಉಳಿದ
ಸಿಹಿ ಮಾತುಗಳೇ ಪ್ರೇರಣೆ
ರಚಿಸಲು ನಾ ಕವಿತೆ..
-ಮನ
— % &-
ಗೆಳೆಯಾ,
ಕಾಣುವ ನೂರು ಜನರ ನಡುವೆ
ಕಾಡುತ ನೀ ಸೆಳೆದೆ ಗಮನ
ಅಂದೆ ಹೂ ಹೃದಯದೊಳಗೇ ನಿನ್ನಾಗಮನ
ಕಣ್ಣಸನ್ನೆ ಹೇಳುತಿದೆ ಮನದಾಳದ ಕವನ
ಕಣ್ಣಿಗೆ ಕಣ್ಣಿಟ್ಟು ಒಲವನರಿತುಕೋ ನೀ ಜಾಣ
ಕೆಲವೊಮ್ಮೆ ಭಾವನೆಗಳ ಹೇಳಲಾಗದೆ ನಾ ಮೌನ
ಆ ಮೌನದಲು ನೀ ನಡೆಸುವೆ ಭಾವತೀರಯಾನ
ನಿನದೆ ಗುಂಗು ಈ ಅನುರಾಗಿಗೆ ಪ್ರತಿ ಕ್ಷಣ
ನಿನ್ನಗುವ ನೆನೆದು ನಗುವೆ ಅರೆಹುಚ್ಚಿಯಂತೇ ದಿನ
ನಿನ್ನ ಬಗ್ಗೆ ಗೀಚುವುದು ಹಾಳಾದಿ ಲೇಖನ
ನಿನಗೇ ಮುಡಿಪು ಈ ಜೀವನ
ನಮದು ಬಿಡಿಸಲಾಗದ ಭಾವ ಬಂಧನ
ಏನು ಮೋಡಿ ಮಾಡಿರುವೆ ಚಿನ್ನಾ
-ಮನ
-