ಪ್ರಿಯಾಂಕಾ ಬಿಳ್ಳೂರ   (✍🏻ಸವಿಪ್ರಿಯೇ (ಪ್ರಿಯಾಂಕಾ))
1.5k Followers · 63 Following

read more
Joined 27 March 2020


read more
Joined 27 March 2020

ಸದಾಕಾಲ ನಗುವ ನಗುವಿಗೆ
ಅದ್ಯಾಕೋ ಈ ದಿನ ವಿಪರೀತ ಅಳು
ಅಳುವ ನಗುವಿನ ಆರ್ತನಾದ
ನಗುವ ನಗುವಿನ ಕಣ್ಮರೆಯ ತನನ....

-



ಹೇಳಲಾಗದ ನೂರು ನೋವುಗಳ
ಒಡಲ ವೇದನೆಯನ್ನು ಮೌನವೆಂದೇ ಪ್ರತಿನಿಧಿಸಿದೆ.
ಮನಬಿಚ್ಚಿ ಮಾತಾಡುವ ಹೃದಯವಿಂದು
ಶಾಶ್ವತ ಮೌನಕ್ಕೆ ಸ್ಥಾನಕೊಟ್ಟಿದೆ.
ಕಂಡ ಕನಸೆಲ್ಲಾ, ಬೇಸದ ಬಂಧ- ಭಾಂಧವ್ಯಗಳೆಲ್ಲ
ಶೂನ್ಯತೆಯ ಪ್ರತಿಬಿಂಬವಾಗಿ ಗೋಚರಿಸಿವೆ
ಕೇಳಿ ಬಿಡಲೇ ಕಾರಣ ನಾನಿನ್ನೂ ಮನವಿಗೆ.?
ಪಾಪ.! ಅದಕ್ಕೂ ಅನುಮಾನ..,ಸತ್ಯತೆಯ ಸೂಚನ...!

-



ಯಾವಾಗ ನಿಮ್ಮವರಿಗೆ ನೀವಲ್ಲದ ಇನ್ನೊಬ್ಬರು ಅವರವರಾಗುತ್ತಾರೋ,
ಆವಾಗ ನಿಮ್ಮತನ ಬಿಟ್ಟು ನೀವು ಅವರ ಬಳಿ ಹೋದರೂ,
ನೀವು ಅವರವರಾಗಿ ಉಳಿದಿರುವುದಿಲ್ಲ......
ನಿಮ್ಮ ಸ್ಥಾನ ನಿಮಗೆ ತಿಳಿಯದೆಯೇ ಪಲ್ಲಟವಾಗಿರುತ್ತದೆ.....
ಎಚ್ಛರ...!!!

-



ಸಣ್ಣವೆನಲ್ಲಾ ಅವು
ಸಾವಿನ ದಾರಿಗೆ ಸಮೀಪವೆಂದಿಗೂ...!

-



ಬದುಕೆಂಬ ಈ ಪಯಣದಲ್ಲಿ
ಎಲ್ಲವೂ ಪ್ರಶ್ನಾರ್ಥಕ
ನನ್ನವರಾರಿಲ್ಲ ಎನ್ನುವ ನಿರರ್ಥಕ
ಸಂಬಂಧದ ಸುಳಿವಿಲ್ಲ
ಉಳಿಯುವ ಭರವಸೆಯುಳಿದಿಲ್ಲ.

-



ನೆನಪಿರದ ಪ್ರೀತಿಗೆ...!
ಮನದಿಯಿರದ ಒಲವಿಗೆ...!
ನೆನಪಿನ ನೆಪಮಾಡಿಯಾದರೂ., ನೆನಪಿಸಿಕೊಳ್ಳಬಾರದೇ...??

-



ಎಲ್ಲಾ ನೋವಿಗೂ
ನೀನಿರುವ ಮದ್ದಿನ
ಅಮಲಿದೆ ಗೆಳತಿ...!
ನೀನೇ ಇಲ್ಲದ
ವಿರಹದ ನೋವಿನ ಸಂಗತಿ
ಅರುಹಲಿ ನಾನ್ಯಾರಿಗೆ...?

-



Someone to the "Writer" : What is ur
Happiness...?
Writer : Seeing my quotes in others
Status and Story.

-



ನಿನ್ನ ನೆನಪೆಂಬ ದೋಣಿಯಲ್ಲಿ.,
ತಂಪೆರೆಯುವಂತಿದ್ದ ಆ ಮಾತುಗಳೆಲ್ಲ.,
ಬಿಸಿಲ ತಾಪಕ್ಕೆ ಸಿಕ್ಕಿ ಬೆವರಿಳಿಸಿದಂತಿವೆ...!

ಮಳೆ ಹನಿಗಳಂತಿದ್ದ ಮನಸ್ಸಿನ ಭಾವನೆಗಳು.,
ಗುಡುಗು-ಸಿಡಿಲ ಹೊಡೆತಕ್ಕೆ ಸಿಕ್ಕಿ.,
ಒಡೆದ ಕನ್ನಡಿಯ ಚೂಪಾದ ಚುರಾಗಿವೆ...!

ನವಿರಾಗಿ ಚಿಗುರೊಡೆಯುವಂತಿದ್ದ ಕನಸುಗಳೆಲ್ಲ.,
ಮರೀಚಿಕೆಯ ಕಲ್ಪನೆಯ ಸೆಳೆತಕ್ಕೆ ಸಿಕ್ಕಿ.,
ನೆಲೆ ಕಾಣದೆ ಒಲವಿನ ಬಯಕೆಯ ಕೊಲೆಗೈದಿವೆ...!

-



ಗುರುವಿಗೂ ಗುರುತ್ವಕ್ಕೂ ಇರುವ ವ್ಯತ್ಯಾಸವಿಷ್ಟೆ...,

ಗುರುತ್ವ ತನ್ನ ಶಕ್ತಿಯಿಂದ ಎಲ್ಲವನ್ನೂ
ಮೇಲಿಂದ ಕೆಳಗೆ ಸೆಳೆದರೆ...,
ಗುರು ತನ್ನ ಶಕ್ತಿಯಿಂದ, ಕೌಶಲ್ಯದಿಂದ, ಸಾಮರ್ಥಧಿಂದ, ಕೆಳಗಿರುವ ಅದೆಸ್ಟೋ
ವಿಧ್ಯಾರ್ಥಿ ಕುಲವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಾರೆ.

-


Fetching ಪ್ರಿಯಾಂಕಾ ಬಿಳ್ಳೂರ Quotes