ಮೌನ ಮಾತಾಡಿದಾಗ   (ಉಷಾ ಎಲ್ ಗೌಡ)
1.4k Followers · 363 Following

read more
Joined 7 December 2018


read more
Joined 7 December 2018

ಕ್ಷಮೆ ಇರಲಿ ಗೆಳೆಯ
ಅನುಮತಿ ಇಲ್ಲದೆ
ಆಹ್ವಾನ ನೀಡುತಿರುವೆ..
ಬೇಸರಿಸದೆ ಸಮ್ಮತಿಸಿ ಬರುವೆಯ..
ಕ್ಷಣ ಹೊತ್ತು...
ನನ್ನಿ ಕನಸಿನ ಲೋಕಕೆ..
ಬಣ್ಣದ ಬಯಕೆಯ ನಾಕಕೆ..
ಮಬ್ಬುಗತ್ತಲೆಯ ಮುಸುಕ ಸರಿಸಿ,
ಮೌನ ದೀವಿಗೆಯ ಮನದಲ್ಲಿ ಸ್ಥಾಪಿಸಿ,
ಮುದದಿಂದ ನಿಂತಿರುವೆ
ಮುತ್ತಿನ ಮಂಟಪದಲ್ಲಿ...
ಮತ್ತು ಬರುವಷ್ಟು
ಒಲವ ಧಾರೆ ಎರೆಯಲು...!
ಮನ ತಣಿಯುವಂತೆ
ನಿನ್ನನೊಮ್ಮೆ ಮುದ್ದಿಸಲು...!!

-



ಹೊಣೆಗಾರಿಕೆ
ಅನ್ನೋದು
ಹೆಗಲೇರಿ ಕುಳಿತಾಗ..
ಕನಸುಗಳ ಕೈ ಹಿಡಿದು
ಆಸೆಗಳ ಗಂಟನೊತ್ತು
ಕರ್ದುಕಿನ ಕನ್ನಡಿಯಲ್ಲಿ
ಪ್ರತಿಬಿಂಬ ನೋಡುವ ಯತ್ನ
ಮಾಡದೆ ಇರುವುದೇ ಒಳಿತು...

-



ಕೈ ಚೆಲ್ಲಿದ
ನೆನಪುಗಳೇ....!
ಮನದಿಂದ
ಜಾರಿ ಬಿಡಿ,
ಮರೆತು
ಕೊಂಚ ವಿರಮಿಸುವೆ,
ಮನದೊಳಗಿದ್ದು
ಮೌನದ ತೆರೆಯೊಳಗೆ
ಕಣ್ಣೀರ ತೊರೆಯ ಹರಿಸದಿರಿ...!!

-



ನೊಂದು ನಿಂತ
ಬದುಕಿಗೆ
ನಗುವೊಂದು
ಬೇಕಾಗಿದೆ.!
ಕದಪಿನಲಿ ಇಳಿಬಿದ್ದ
ಮುತ್ತುಗಳ
ಜೊತೆಗೂಡಿಸಲು...!!
ನನ್ನ ನೋವಿಗೆ
ನನ್ನನ್ನು
ನಾನೇ ಸಂತೈಸಲು...!!!

-



ತಿಳಿಯದ ದಾರಿಯ ಪಯಣಕೆ
ಅವನೊಬ್ಬನೇ ಮಾರ್ಗಸೂಚಿ..
ಕರೆದಾಗ ಹೋಗಲೇ ಬೇಕು
ತನ್ನೆಲ್ಲಾ ನೋವ ಮರೆಮಾಚಿ..

-



ಮಿತಿ ಮೀರಿ ಕಟ್ಟಿದ
ಬಣ್ಣದ ಕನಸುಗಳ
ಕೊಂಚ ಜೀವ ಕೊಟ್ಟು
ಉಳಿಸಬೇಕಿದೆ.!
ಜೀವಂತಿಕೆ
ಕಳೆದುಕೊಳ್ಳುತ್ತಿರುವ
ಬದುಕಿಗೊಂದಿಷ್ಟು
ಉಸಿರ ನೀಡಲು.....!!

-



ಎಣಿಸಬೇಕಿದೆ
ಬಾ ಗೆಳೆಯ...
ನಿನ್ನ ಜೊತೆಯಾಗಿ
ನಾನಿಟ್ಟ
ಹೆಜ್ಜೆಯ ಗುರುತುಗಳ..
ನೆನಪುಗಳ ಸಂತೆಯಲಿ
ಪುರಾವೆಗಳ ಕೇಳುವ
ಈ ಮನಕೆ
ನಮ್ಮೊಲವನೊಮ್ಮೆ
ಧೃಢೀಕರಿಸ ಬೇಕಿದೆ..

-



ಹೇಗೆ ಹೇಳಲಿ ಗೆಳೆಯ
ನಿನಗೆ ನಾ ವಿದಾಯವನು....
ಮನದಾಳದ ನೋವಿಗೆ ಮದ್ದು ಕೊಟ್ಟವ ನೀನು.
ಮುದ್ದು ಮನಸುಗಳ ಸಾಂಗತ್ಯಕ್ಕೆ ಪೂರಕನಾದವ ನೀನು..
ಪ್ರೀತಿಯ ಕಲರವಕೆ ಸಾಕ್ಷಿಯಾದವ ನೀನು..
ನಗುವಿನ ಹಂದರವ ಹೆಣೆದು ಕೊಟ್ಟವ ನೀನು..
ಇಷ್ಟಕ್ಕೆಲ್ಲ ಕಾರಣನಾದವ ನಿನಗೆ
ಹೇಗೆ ಹೇಳಲಿ ಗೆಳೆಯ
ನಾ ವಿದಾಯವನು....

-




ನೂರು ಕನಸ ಹೆಗಲೇರಿಸಿಕೊಂಡ
ತಾಯಿ ಎಂಬ ಹುಚ್ಚು ಮನಸು..
{✍️👇}

-



ಮೌನದ ಭಾಷೆಗೆ
ಮನಸಿನ ಸಂಭಾಷಣೆ..
ಮಾತಿನ ದಾಟಿಗೆ
ಭಾವದ ಅನುಮೋದನೆ..

-


Fetching ಮೌನ ಮಾತಾಡಿದಾಗ Quotes