ತಣ್ಣನೆ ಸುಯ್ ಎಂದು ಬೀಸೋ ತಂಗಾಳಿ
ತನುಮನವನ್ನೇಲ್ಲಾವರಿಸಿ,
ನಿಬಿಡ ಸ್ಥಳದಲ್ಲಾವರಿಸಿದ ಗಿಡಮರಗಳ ಆಲಿಂಗನವ
ಆಂತರ್ಯದೊಳು ಕಣ್ತುಂಬಿಸಿ,
ಅಂಬರದೊಳು ಅಂಚು ಅಂಚಿಗೆ ತುಂಡು ತುಂಡಾಗಿ
ಆವರಿಸಿರೋ ಆ ಬಿಳಿಮೋಡಗಳ ಅಬ್ಬರವನ್ನಾಲಿಸಿ,
ಚೆಂದುಳ್ಳ ಚಹರೆಯ ಆ ಚಂದಿರನ ಚೆಲುವನ್ನು ಮನಗಂಡು,
ಮಂದಹಾಸ ಬೀರಿತ್ತು ಮನವು ಅಗಮ್ಯವಾದ ಈ ನೋಟವ ಕಂಡು,
ಸಂಭ್ರಮಪಟ್ಟಿತ್ತು ತನುವು ಈ ಪದಗಳ ಜೋಡಣೆಯ ಔಚಿತ್ಯವ ಕಂಡು..!!-
ಕುಂದಾ ನಗರಿಯ ಒಲವಿನ ಹೂವು..😘
ಭಾವನೆಗಳಲ್ಲಿ ಬೆರೆತು ಹೋಗಿದೆ ಜೀವನ..💓
ಭಾವನೆಗಳೇ ಬ... read more
ನೆಮ್ಮದೀಯನ್ನರಸಿ
ನಿನ್ನತನವನ್ನೀಮರೆತು
ನಗುನಗುತ್ ನಡೆಯುತ್ತಿರಲ್,
ದಾರಿಹೋಕನ್ಮಾತಿಗ್
ತಲೆಗೊಟ್ಟ್ ನಿನ್ನೇ
ನೀ ಮರೆತ್ಬಿಟ್ಟೇ ಶಾಶ್ವತವಾಗಿ..!!-
ಕೆಲವೋಂದ್ಸಲಾ
ಕೆಲವರಿಗೆ ನಾವು
ಕೇವಲವಾಗಿಬಿಡ್ತೀವಿ
ಯಾಕೆಂದರೆ,
ಆ ಕೆಲವರಿಗೆ
ಅವರೇ ಶ್ರೇಷ್ಠ
ಅನ್ನೋ ಮನೋಭಾವನೆ..!!-
ನಿನ್ನ ಕಾಳಜಿಗಿಂದು
ಕಣ್ಮರೆಯಾಯಿತು ದಣಿವು..!!
ನಿನ್ನ ಸ್ನೇಹದ ಭಾವಕ್ಕಿಂದು
ತನ್ಮಯವಾಯಿತು ತನುವು..!!!-
ದುಂಬಿಯ ಝೇಂಕಾರಕೇ
ಮನವೆದ್ದು ಕುಣಿದಿದೆ..
ಹೂವುಗಳ ನಗುವಿಗೆ
ದುಂಬಿಯೇ ಕಾರಣವಾಗಿದೆ..
ನೇಸರನ ಹೊಸ ಬೆಳಕಿಗೆ
ಧರೆ ಹೊಸತೆನಿಸಿದೆ..
ಹಕ್ಕಿಗಳ ಕೂಗಿಗೆ
ಹೃದಯ ತಾಳಹಾಕುತ್ತಿದೆ..
ಪ್ರಕೃತಿಯ ಈ ಸೊಬಗಿಗೆ
ಮನ ಬೆರಗಾಗಿದೆ..
ಬೆರಗಾದ ಮನಕ್ಕೀಗ
ಒಲವಿನ ಮನ ನೆನಪಾಗಿದೆ..❤❤-
ಅವನ ಸ್ನೇಹದ ನೆನಪಿನಂಗಳದಲ್ಲಿ..👫
ಎನಗಿಲ್ಲ ಅವನ್ನೊರೆತು ಕಾಡಿಸಿ
ಪೀಡಿಸಿ ಮುನಿಸಿಕೊಂಡವರು ಜಾಸ್ತಿ..
ಕಂಗಳಿಗೆ ಕಾವಲುಗಾರನಾದ..
ಸ್ನೇಹಕ್ಕೆ ಸಂಪನ್ನ ಮೂರುತಿಯು ಅವನಾದ..
ಮುನಿಸಲ್ಲೂ ಕಂಡೆನು ಕಾಳಜಿಯೆಂಬ ಪದ..
ಕನಸಲ್ಲೂ ಅವನಾದ ಸ್ನೇಹಕೆ ಸ್ನೇಹದ ಭಾವ..
-
ಪ್ರೀತಿಯನ್ನು ಪ್ರೀತಿಯಿಂದ
ಹಂಚಿ ಎಲ್ಲರೂ
ಅನ್ಯೋನ್ಯವಾಗಿ
ಬಾಳೋಣ..
ರಂಜಾನ ಹಬ್ಬದ ಶುಭಾಶಯಗಳು..💐💐
-
ಬದುಕಿನಲ್ಲಿ ಬರೋವರಿಗೆಲ್ಲ
ಆದರದಿ ಸ್ವಾಗತಿಸುತ್ತಾ ಇರಬೇಕು..
ಬಿಟ್ಟು ಹೋಗುವವರಿಗೆ
ತನುಮನದೀ ಬೀಳ್ಕೊಡಬೇಕು..
ಯಾಕಂದರೆ ಬರೋರಿಗೆಲ್ಲ
ಜಾಗಬೇಕಲ್ವ.!!!?
-
ನನ್ನೀಬರಹದ
ಪ್ರತಿ ಪದಗಳೂ
ಆ ನಿನ್ನ
ಪ್ರೀತಿಯ ಕಂಡು
ನನ್ನೇ ಪ್ರಶ್ನಿಸುತಲಿಹವು,
ನನ್ನಲ್ಲೇ ಮರೆಯಾಗಿಹ
ಆ ಸವಿನೆನಪುಗಳಿಗಾಗಿ
ಅರಸುತ್ತಲಿರುವವು..!!-
ಏನೋ ತಿಳಿದಿಲ್ಲ,
ಬೇಜಾರಿಗೆ ಕೊನೆಯಿಲ್ಲ,
ನೆನಪುಗಳಿಗೆ ಸ್ಥಳವಿಲ್ಲ,
ನಗುವಿಗೆ ಮನಸಿಲ್ಲ,
ಮನದಲ್ಲಿ ಮನವಿಲ್ಲ,
ತಿಳಿಯಲು ಆಗುತ್ತಿಲ್ಲ,
ಅರಿಯದೇ ಅಳುತಿರುವೆನಲ್ಲ,
ಮರೆಯದೇ ಚಿಂತಿಸುತಿಹೆನಲ್ಲ,
ಓ ಮನವೇ,,ಏತಕ್ಕೆ ಈ ಬೇಜಾರು.?-