🎊ಯುಗಾದಿ ಹಬ್ಬದ ಶುಭಾಶಯಗಳು🎊
ಮೂಡನದಿ ನಗುತಿರೆ ಅರುಣ.!
ಇಂಪಾದ ಹಕ್ಕಿಗಳ ಗಾಯನ.!
ಎಲ್ಲೆಲ್ಲೂ ಹಸಿರ ತೋರಣ.!
ಮನೆಯಲ್ಲಿ ಸಿಹಿಯ ಹೂರಣ.!
ಸವಿಯಿರಿ ಬೇವು-ಬೆಲ್ಲ ಮಿಶ್ರಣ.!
ಯುಗಾದಿಗೆ ಮೂಡಲಿ ನವ ಕಿರಣ.!
ನಗುತ ಸಾಗಿ ಅದೇ ಗೆಲುವಿನ ಕಾರಣ.!-
ಕನ್ನಡ ನನ್ನೆದೆಯಲಿ ಚಾಚಿರುವ ಹಸಿರು🤗
💻ಉದ್ಯೋಗಿ - BAYER GBS - Ex-IBMer
🎂ಮೇ 0... read more
ನನ್ನೆದೆಯ ಹೊಸ್ತಿಲಲ್ಲಿ ಪ್ರೀತಿ ತುಂಬಿದ ಸೇರನಿಟ್ಟಿರುವೆ.!
ಬಲಗಾಲಲ್ಲಿ ಒದ್ದು ಬಾ ನನ್ನ ಮನದ ತುಂಬೆಲ್ಲಾ.!
ಕೈ ಬಿಡದೇ ಎಂದೂ ಜೊತೆಗಿರುವೆ ನಾ ನಿನ್ನ ನಲ್ಲ.!-
ಕನ್ನಡ ಮಾತೆಗಿದೆ ತನ್ನ ಮಕ್ಕಳ ಮೇಲೆ ಸದಾ ಮಮತೆ.
ಕನ್ನಡವೇ ನಮ್ಮೆಲ್ಲರ ಮನೆ,ಮನ ಬೆಳಗುವ ಒಂದು ಸುಂದರ ಹಣತೆ.
ಜೀವನದಿ ಕಾವೇರಿ ತಾಯಿಯ ಆರ್ಶಿವಾದ ಇರುವವರೆಗೆ ನಮ್ಮ ಜೊತೆ.
ಆತ್ಮೀಯತೆ ಭಾವಕೆ, ಹೃದಯ ಸಾಮ್ರಜ್ಯಕೆ ಕನ್ನಡಿಗರಿಗಿಲ್ಲ ಎಂದೂ ಕೊರತೆ.-
ಕತ್ತಲ ಕರಗಿಸಲು ಬೆಳಗಿದ ದೀಪ.
ನೆಮ್ಮದಿಯ ಉಸಿರನು ನೀಡಿದ ದೀಪ.
ಅಜ್ಞಾನವ ತೊಡೆದು,
ಸುಜ್ಞಾವವ ಉರಿಸಿಸು ಹಚ್ಚಿದ ದೀಪ!
ಬೆಳಗಲಿ ಎಲ್ಲರ ಮನಂಗಳದಲಿ.
ಪ್ರಕಾಶಿಸಲಿ ಬದುಕು ಸಂತಸದಲಿ.-
ಹಠ ಮಾಡಿ ಸಾಪ್ಟ್ವೇರ್ ಇಂಜಿನಿಯರ್ ಹುಡ್ಗನನ್ನೇ ಅಳಿಯನನ್ನಾಗಿ ಪಡೆದ ಎಲ್ಲಾ ಅತ್ತೆ-ಮಾವಂದಿರಿಗೆ 'ಇಂಜಿನಿಯರ್' ದಿನದ ಶುಭಾಷಯಗಳು!😁😁
-
ಅವರೇ ಧೈರ್ಯ,
ನೀ ಮುನ್ನುಗ್ಗಲು.
ಅವರೇ ಸ್ಫೂರ್ತಿ,
ನೀ ಗುರಿ ಸೇರಲು.
ಅವರೇ ಬಲ,
ನೀ ಹೋರಾಡಲು.
ಅವರೇ ಛಲ,
ನೀ ಜಗವ ಗೆಲ್ಲಲು.
ಅವರಿದ್ದರೇ ಬೇಕಿಲ್ಲ ಭಯ.
ಅವರಿದ್ದರೇ ಸಿಕ್ಕಂತೆ ಜಯ.
ಜೊತೆಗಿದ್ದರೂ, ಇಲ್ಲದ್ದಿದ್ದರೂ,
ಅಪ್ಪ ಎಲ್ಲರ ಮನೆಯ ಮೊದಲ ನಾಯಕ.
ಬದುಕಿನ ದೋಣಿ ನಡೆಸಲು ಕಲಿಸಿದ ನಾವಿಕ.-
ಹೊಸದನ್ನು ಪ್ರಾರಂಭಿಸಿದಾಗ,
ತೊಡಕುಗಳು ಸಾಮಾನ್ಯ..!
ಅಡೆ ತಡೆಗಳನ್ನು ಮೀರಿ,
ದಿಟ್ಟ ನಿರ್ಧಾರದಿಂದ,
ಗುರಿ ಕಡೆ ಮುನ್ನಗಿದ್ದರೇ
ಗೆಲುವು ಸಾಧಿಸಬಹುದು..!-
ಹೊರಗೆ ಜಿಟಿ ಮಳೆ
ನಿಲ್ಲದೇ ಸುರಿಯುತಿದೆ!
ಮನದೊಳಗೆ ನಿನ್ನ
ನೆನಪು ಬಿಡದೇ ಕಾಡುತಿದೆ!
ಮಳೆ, ನೆನಪು ಒಮ್ಮೆಲೇ ನಿಂತರೂ,
ಬಿಡದೇ ತೊಟ್ಟಿಕ್ಕಿವುದು ಮಳೆಹನಿ.
ನಿಲ್ಲದೇ ಜಾರುವುದು ಕಣ್ಣಹನಿ.-