ಬರಿದಾದ ಮನದೊಡಲ ಭಾವಗಳ ಗುಟ್ಟು
ಒಣಗಿದ ಮರದಂತಾಗುತಿದೆ ಬಡ ಜೀವವು ಸುಟ್ಟು
ಬತ್ತಿದೊಡಲ ಜೀವಾಂಕುರವು ಸೇರುತಿದೆ ಒಟ್ಟು
ಭಾವಾಂಕುರದ ಸ್ಫುರಿಸುವಿಕೆ ಪುನಃ ಪಣತೊಟ್ಟು.!
ಕೆಚ್ಚದೆಯ ಹೋರಾಟದ ಬದುಕಿನೊಂದಿಗೆ ಈ ಜೀವ
ತರಗೆಲೆಯಂತಾಗಿದೆ ನಿನ್ನಯ ನೆರವಿಲ್ಲದ ತಾವ
ಕಣ್ಣು ಕಾಣದ ಗಾವಿಲರಂತಾದ ನೋಡ ಈ ಮಾನವ
ಕರುಣೆ ತೋರದೆ ಸ್ವಾರ್ಥ ಮೆರದ ತೋರದೆ ಜಾಗವ.!
ಮೊರೆ ಇಟ್ಟಿರುವೆ ನೀಲಮೇಘಶ್ಯಾಮಲಿ ನನ್ನ ಪ್ರಾಣ
ಅವನೊಲುಮೆಯಿಲ್ಲದಿರೆ ಆಗುವುದು ಜೀವಹರಣ
ನಿಸ್ಸಾರದ ಬಾಳು ಕಾಪಾಡು ವಿಭೋ ಶಕ್ತಿಕುಂದಿದೆ ನಿತ್ರಾಣ
ಬೇಡುತಿರುವೆ ಕರುಣಿಸು ಪ್ರಭೋ ನಿನಗೆ ನಾ ಶರಣ.!
ನಿನ್ನ ದಯೆಯಿಂದಲೆ ನನಗೆ ನಿತ್ಯ ಬಡತನದಸಿರಿ ಜೀವನ
ಸುಖ ದುಃಖಗಳ ಲಾಲಿತ್ಯದ ಪ್ರಾಣಪೂರಣದಿ ನನ್ನೀ ಮನ
ನಿನ್ನ ಚರಣ ಕಮಲಗಳಿಗೆ ವಂದಿಸುತಿಹೆ ಆರೈಸು ಪಾವನ
ಜಗದ್ಭರಿತ ಫಲಭರಿತವಾಗಬೇಕಿದೆ ಮನ ಸಖ್ಯ ಸಾಧನ.!
ಅವನೊಲುಮೆಯಿಂದಲೆ ಬಾಡಿದ ಮನ ಚಿಗುರೊಡೆದಿದೆ
ಬತ್ತಿದೆದೆಯಲಿ ಬಿತ್ತಿದ ಜೀವರಕ್ಷಣೆ ಬೀಜ ಟಿಸಿಲೊಡೆದು ನಿಂತಿದೆ
ನಳನಳಿಸುತ ನಗು ನಲಿವಿನ ಜೀವನ ಇದಾಗಿದೆ
ಕೃಪಾಕಟಾಕ್ಷದ ದಯೆ ಅವನ ಮೊರೆ ಇದಕೆ ಸಾಕ್ಷಿಯಾಗಿದೆ.!
ಒಂದೊಂದೆ ಎಲೆಗಳು ಚಿಗುರಿದಂತೆ ಕಷ್ಟಗಳು ಮಾಯ
ಅಂತರಾಳದ ನೋವಿಗೆ ಹಸಿರ ಸಿಂಚನದ ಛಾಯ
ಎಲ್ಲೆಲ್ಲೂ ಹಸಿರುಸಿರ ಸಡಗರದ ಸಂಭ್ರಮದ ಧ್ಯೇಯ
ನೊಂದು ಬೆಂದ ಬಾಳಿಗಿಂದು ನವಚೈತನ್ಯವೆ ನವಅಧ್ಯಾಯ.!-
ಮತ್ತೆ ಅಂತ ಕೇಳ್ದಾಗ
ಹೇಳ್ಬೇಕು ಅನ್ಸುತ್ತೆ
ಎಲ್ಲಾನೂ..
ಆದ್ರೆ ಏನ್ ಮಾಡೋದು
ಗುರು ನಮ್ ಮೂಡ್
ಸರಿ ಇಲ್ದೇ ಇದ್ರೆ..
ಏನಿಲ್ಲ ಅಂತಾನೇ
ಬರೋದು 😏..
-
ಮಳೆಯ ಹನಿ ಬಿದ್ದು
ನೆಲದಿಂದ ಹಬೆ ಏಳುತ್ತಿದೆ.
ಪಾಪ!!
ಒಡಲ ಯಾವ ಗಾಯ ಹಸಿಯಾಯಿತೋ
ಯಾವ ದರ್ದು ಹಸುರಾಯಿತೋ!!-
ಯಾರ ಸಹಾಯವನ್ನು ಅಪೇಕ್ಷಿಸದೆ ನನಗೆ ನಾನೇ ಸಾಂತ್ವನ ಹೇಳಿಕೊಂಡು ನಿಧಾನವಾಗಿ ಹಾರಾಟದ ಆರ್ಭಟ ಮಾಡುವೆ.
-
ಬಾಲ್ಯದ ಆಟ ಆ ಹುಡುಗಾಟ ಮತ್ತೆ ಬರೋಕೆ
ಸಾಧ್ಯವೇ ಇಲ್ಲ.
ದ್ವೇಷವಿರದ ಜಗಳ,ಆಸೆಗಳಿರದ ಪ್ರೀತಿ,ಮೋಸವರಿಯದ ಮನಸು,ಬೇದ ಭಾವಗಳಿರಿಯದ ಗೆಳೆತನ,ನಗುವಿನ ಜೊತೆಗೆ ಬೆಸೆದ ಪುಟ್ಟ ಮನಸುಗಳ ಒಡನಾಟ
ಕಲ್ಮಷವಿರದ ಮನಸೊಳಗೆ ಗೆಳೆಯ ಗೆಳತಿಯ ನಡುವೆ
ಸ್ನೇಹಬಂಧನದ ಸಂತಸ. ಎಷ್ಟು ಚಂದ ಈ ಬಾಲ್ಯ ಆಟ ....-
ಈ ಜನ್ಮವೇ ಕಡೆ
ಅದುಕ್ಕೆ ಇದೆ ಜನ್ಮದಲ್ಲಿ
ಮತ್ತೆ ಮತ್ತೆ ಹುಟ್ಟಿಬರಬೇಕು
ಬದುಕಿನ ಪ್ರಯೋಗಶಾಲೆ ಯಲ್ಲಿ
ಮಗ್ಗಲು ಮುರಿದ ಅತಂತ್ರ
ಪರಿಸ್ಥಿಯಲ್ಲೂ ತಕ್ಕ ಮಟ್ಟಿಗೆ
ಈ ಬದುಕು ಈ ನನ್ನ ಜನ್ಮ
ಆಶ್ರಯಿಸಲೇ ಬೇಕು-
ನಯನಕೆ ಕಾಣುವ ಮೊದಲ ದೇವತೆ ಅಮ್ಮನ ಮಡಿಲೇ ಒಲವಿನ ಸ್ವರ್ಗ
ಗಾಯನಕೆ ಸಿಗದ ಕವಿತೆಯಿವಳೀ ತಾಯಿಯ ಒಡಲೇ ಚೆಲುವಿನ ಸ್ವರ್ಗ
ಗರ್ಭದೊಳು ನವಮಾಸ ಹೊತ್ತು ಹೆತ್ತು ಬೆಳೆಸಿ ಸಂಪೂರ್ಣಳಾದಳಲ್ಲ
ಧರೆಯೊಳು ಮಮತೆಯ ಮೂರುತಿ ಜನನಿಯೇ ಮಗುವಿನ ಸ್ವರ್ಗ
ಮನೆಯ ಮಕ್ಕಳ ಖುಷಿಯಲ್ಲಿ ತನ್ನ ದುಃಖವ ಮರೆಯುವಳು ಸತ್ಯ
ಹೆತ್ತವಳ ಆಶಯ ಅಡೆತಡೆಯಿಲ್ಲದೆ ಈಡೇರಿದರೆ ಅದುವೇ ನಲಿವಿನ ಸ್ವರ್ಗ
ಉತ್ತಮ ಸಂಸ್ಕಾರವ ಮರೆಯದೆ ಕಲಿಸುವಳು ಕರ್ತವ್ಯದಿ
ಪಡೆದ ಶಿಕ್ಷಣವು ಸಾಮಾಜಿಕ ಕಾರ್ಯಕ್ಕೆ ಜೊತೆಯಾದರದುವೇ ಗೆಲುವಿನ ಸ್ವರ್ಗ
ಮಾತೆಯ ತ್ಯಾಗವ ವರ್ಣಿಸಲು ಶ್ರೀಗೆ ಪದಗಳ ಕೊರತೆಯಾಗಿದೆಯಲ್ಲ
ದಾತೆಯ ಕಷ್ಟದಲಿ ಕೈ ಜೋಡಿಸಿದರೆ ಸಿಗುವುದಲ್ಲವೇ ನಗುವಿನ ಸ್ವರ್ಗ
✍🏻 ಪದ್ಮಶ್ರೀ-