ನಿನ್ನದು ನನ್ನ ಮೇಲಿರುವುದು ಪ್ರೀತಿಯೋ ದ್ವೇಷವೋ ನನಗೆ ತಿಳಿಯದಾಗಿದೆ
ನಿನ್ನಿಂದಾಗಿ ಮುರಿದ ಮನಸ್ಸು ನನ್ನದಾಗಿದೆ
ನೀ ನನಗೆ ಬೇಕೆಂದರು ನೀ ನನ್ನ ಕಣ್ಣ ಮುಂದೆ ಬರದೆ ಸತಾಯಿಸಿದೆ
ಆದರು ನಾ ನಿನ್ನನ್ನೇ ತುಂಬಾ ಪ್ರೀತಿಸಿದೆ
ಸಾಕಾಗಿದೆ ನನಗೆ ನಿನ್ನ ನೆನೆದು ದಿನ ನಾ ಕಣ್ಣೀರಿಡುವುದು
ಒಮ್ಮೆ ಬಂದು ನೀ ಬಿಗಿದಪ್ಪಿ ಈ ಮನವ ಸಂತೈಸಿಬಿಡು
ಮಳೆಗು ಮನಸಾಗಿ ಬಂದಿದೆ ನನ್ನ ಬಳಿಗೆ
ನೀ ನನ್ನ ತೊರೆದು ದೂರಾದರೂ
ನಿನ್ನ ನೆನಪಲ್ಲೇ ನಾ ಉಳಿದೆ ನೀ ನನ್ನ ಮನದೊಳಗೆ...!-
ನಿನ್ನ ಕೈಹಿಡಿದು ಸಾಗರದ ತೀರದಲ್ಲಿ ನಾ ನಡೆವಾಸೆ,
ಸಿಗುವಳೆ ಕೈಹಿಡಿದು ನಡೆಯಲು ಅವಳು...
ನನ್ನವಳ ನೋಡುತ್ತ ಹೀಗೆ ಕುಳಿತಿರುವಾಸೆ,
ಬಹುದೂರವೆ ಇರುವಳು ನನ್ನವಳು...
ಒಮ್ಮೆ ಕೇಳು ಗೆಳತಿ ಹೇಳುವೆ ನಾನು,
ನೀ ಸಿಕ್ಕರು ಸಿಗದಿದ್ದರು ನೀನೆಂದು ನನ್ನವಳು...
ನನ್ನೆಲ್ಲಾ ಭಾವನೆಗೆ ರೂವಾರಿಯಾದವಳು...
ನನ್ನೆಲ್ಲಾ ಪ್ರೀತಿಗೆ ವಾರಸುದಾರಳು...
ನನ್ನೆಲ್ಲಾ ಕನಸುಗಳಿಗೆ ಬಣ್ಣ ತುಂಬಿದವಳು...
ನನ್ನೆಲ್ಲಾ ಕವನಗಳಿಗೆ ಪದವಾಗಿ ಉಳಿದವಳು...
ನಾನೆಂದು ನಿನ್ನವನು,ಆದರೆ
ನೀನೆಂದು ನನಗೆ ಸಿಗದವಳು....!!-
ಮೌನ ಮಾತಾದಾಗ
ಮನಸ್ಸು ರೋದಿಸಿದಾಗ
ಕಣ್ಣೀರು ಬತ್ತಿ ಹೋದಾಗ
ಭಾವನೆಗಳು ಸತ್ತು ಹೋದಾಗ
ಕೊನೆಯಲ್ಲಿ ಉಳಿಯುವುದು ಮಾತ್ರ
ಕಹಿಯಾದ ನೆನಪುಗಳ ಹೊರತು ಬೇರೇನು ಅಲ್ಲ..!!-
ಸೋರುವ ಮನೆಯಲ್ಲಿದ್ದರೂ ಪರವಾಗಿಲ್ಲ ಆದರೆ ಎಲ್ಲರನ್ನು ಸೇರುವ ಒಳ್ಳೆಯ ಮನಸ್ಸಿರಬೇಕು..!!
-
ಕನಸೊಂದು ಕಾಡುತ್ತಿದೆ ನಿನ್ನ ನೆನಪುಗಳ ಸಾಲಿನಲಿ
ಮನಸ್ಸಿoದು ಚಡಪಡಿಸುತ್ತಿದೆ ನಿನ್ನ ಪ್ರೀತಿಯ ಒಲವಿನಲಿ ಹೂ ಒoದು ಹರಳಿದೆ ದುಂಬಿಯ ಬಳಿ ಸುಳಿಯುತಲಿ ನಿನ್ನ ಹೂ ನಗೆಯೊಂದು ಹೇಳುತ್ತಿದೆ ನೀನೆಂದರೆ ನನಗೆ ಇಷ್ಟ ಹಂತ ಮೌನದಲಿ...!!-
ಪ್ರತಿ ದಿನ ನಾ ಕಾಯುವ ದಾರಿಯಲ್ಲಿ ನಾನು
ಕಾಣದಿರಲು ನನ್ನ ನೆನಪಿಸಿಕೊ ಎನ್ನುತ್ತಿದ್ದ ಅವಳು
ಇoದು ಕೊನೆಯ ಬಾರಿ ಕಂಡಾಗ
ಹೇಳಿದ್ದು ನನ್ನ ಮರೆತು ಬಿಡು ಎoದು..!-
ಮಲಗಿದ್ದರೆ ಕನಸಿನಲ್ಲಿ ಕಾಡುತ್ತೀಯಾ
ಎದ್ದರೆ ನೆನಪುಗಳಲ್ಲಿ ಕಾಡುತ್ತೀಯಾ
ಕರೆಯದೆ ಬರುತ್ತೀಯಾ
ದೂರವಿರಬೇಕೆಂದಷ್ಟು ಹತ್ತಿರವಾಗುತ್ತೀಯಾ ಹೇಳಿಕೊಳ್ಳಲಾಗದಷ್ಟು ನೋವುಗಳನ್ನ ಕೊಟ್ಟು ಹೋಗುತ್ತೀಯಾ
ನಿನ್ನ ಬಾ ಎಂದು ಕರೆದವರು ಯಾರು ?
ಕರೆಯದೆ ಬಂದು ನೋವುಗಳನ್ನು ಕೊಟ್ಟು ಹೋಗು ಎಂದವರ್ಯಾರು ?
- Lakshmi-