ಅನಂತ್ಯ   (.)
81 Followers · 1 Following

read more
Joined 1 April 2020


read more
Joined 1 April 2020
9 SEP 2020 AT 17:57

ಈಗಷ್ಟೇ ದೇವರ ಕಂಡೆ
ಹೂಬಿರಿದ ಸದ್ದಲ್ಲಿ!!

-


8 SEP 2020 AT 21:33

ಹುಡುಗ,
ನಿನ್ನ ನಗುವನೆಲ್ಲ ಬಾಚಿ
ಆ ಮುಗಿಲ ಬಳಿ
ಅಡವಿಟ್ಟು ಬಂದಿದ್ದೆ.
ಅವನೀಗ ಅದರಿಂದ
ಕಾಮನಬಿಲ್ಲು
ಹೊಸೆದಿದ್ದಾನಂತೆ!!

-


8 SEP 2020 AT 14:09

ಇಲ್ಲಿರುವ ಬರಹಗಳೆಲ್ಲ
ಈಗಷ್ಟೇ ಬಿಡಿಸಿಟ್ಟ ಅರಳು
ಮಲ್ಲಿಗೆ, ಜಾಜಿ, ಸಂಪಿಗೆಯಂತೆ!!

ಓದಿದಷ್ಟು ಆಪ್ತವಾಗುತ್ತವೆ
ಮಾಗಿದಷ್ಟು ಘಮಿಸುವ
ಕೇದಗೆ, ಸೊರಗಿಯಂತೆ!!

ಒಮ್ಮೆ ಸೋಕಿದರೆ ಸಾಕು
ಇದರ ಘಮಲೇರುತ್ತದೆ
ಇಳಿಯದ ಅಮಲೇರುತ್ತದೆ!!

-


6 SEP 2020 AT 18:35

ಒಡೆದ ಮಾಡಿನ ಸೂರಿನಿಂದ
ಬೆಳಕಷ್ಟೇ ಸೋರಿದಂತೆ!
ಈ ಹೃದಯ ಒಡೆದಾಗ್ಲೂ
ಅದರಿಂದ ಪ್ರೀತಿಯಷ್ಟೇ ಸಿಗ್ಲಿ!!

-


6 SEP 2020 AT 11:49

ಗರಿಕೆ ಹುಲ್ಲ ಮೇಲೆ
ಮಂಜ ಹನಿಯೊಂದು ಹುಟ್ಟಿದೆ
ಇರುಳು-ನಸುಕಿನ ಪ್ರೇಮ ಫಲ!!

-


9 JUL 2020 AT 20:00

ದಿನವಿಡೀ ಜಿಟುಗುಡುವ ನಿನಗೇನು ಗೊತ್ತು??
ನಿನ್ನ ಸ್ಪರ್ಶ ತಾಕಿ ಒದ್ದೆಯಾಗಿದ್ದು ಬರೀ ನೆಲವಲ್ಲವೆಂದು!!

-


9 SEP 2020 AT 18:48

ಎಲ್ಲ ದಿಗ್ಗಜರ ಹುಟ್ಟುಹಬ್ಬಕ್ಕೆ ಚಿತ್ರಪಟ,
ನಡುರಾತ್ರೆ ಕವನ (ಕನ್ನಡ ಸಾಹಿತಿಯಾದಲ್ಲಿ) ಹಾಕಿ ಸಂಭ್ರಮಿಸುವ ಜೋಗಿ ಅವರು ನಾಡಿನ ಅಪ್ರತಿಮ ಸಾಹಿತಿಯಲ್ಲೊಬ್ಬರಾದ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುದಿನ ಮರೆಯಬಾರದಿತ್ತು✌🏼

-


5 SEP 2020 AT 20:51

ಆ ಕಡಲು ಹೆಜ್ಜೆ ಗುರುತು ಅಳಿಸುವುದಲ್ಲ
ತನ್ನೊಡಲೊಳಗೆ ಸೇರಿಸಿಕೊಳ್ಳುವುದೆಂಬ ಸತ್ಯ
ಅದರೊಂದಿಗೆ ಪ್ರೀತಿಗೆ ಬಿದ್ದವರಿಗಷ್ಟೇ ಗೊತ್ತಿರುವುದು!

-


5 SEP 2020 AT 18:49

ನಿನ್ನೂರಿಂದ ಹೊರಡುವ ದಾರಿ
ಹಸಿ ಮಣ್ಣಿನದ್ದಾಗಿರಲಿ!!
ನೀನೆದ್ದು ಹೊರಟಾಗ
ನನ್ನ ಪಾಲಿಗೆ
ಹೆಜ್ಜೆ ಗುರುತಾದರು ಉಳಿಯಲಿ!!

-


2 SEP 2020 AT 19:22

ಖುಷಿಯಾದವರೆಲ್ಲ ಮಳೆಗೆ
ಕುಣಿಯುತ್ತಾರಂತೆ
ಉಹುಂ!!
ನನ್ನ ಕೇಳಿ
ಎದೆಯಲ್ಲಿ ಮೋಡ ಕಟ್ಟಿದರೂ,
ಮಳೆಯಲ್ಲಿ ನೆನೆಯುತ್ತಾರೆ!!

-


Fetching ಅನಂತ್ಯ Quotes