"ಒಂದು ತೊಟ್ಟು ನೀರು ಕಾಲಿಗೆ ಸೋಕದೆ ಸಮುದ್ರ ದಾಟಬಹುದು ಆದರೆ ಒಂದು ತೊಟ್ಟು ಕಣ್ಣೀರು ಹಾಕದೆ ಜೀವನದ ಸಾಗರ ದಾಟೋದು ಕಷ್ಟ. ಹಾಕೂ ಕಣ್ಣೀರಿನ ಪ್ರತಿಹನಿಯು ಬಹಳಷ್ಟು ಅನುಭವ ತುಂಬಿಕೊಂಡು ಇರುತ್ತದೆ."
-ದ.ರಾ.ಬೇಂದ್ರೆ-
ಹುಸಿನಗುತಾ ಬಂದೆವ
ನಸುನಗುತ ಬಾಳೋಣ
ತುಸು ನಗುತಾ ತೆರಳೋಣ
ಬಡನೂರು ವರುಷಾನ
ಹರುಷಾದಿ ಕಳೆಯೋಣ
ಯಾಕಾರೆ ಕೇರಳೋಣ.....!!!!!-
ಮನವು ಬೆಂದರೂ
ನೊಂದ ಮನಸ್ಸುಗಳಿಗೆ
ಸಮರಸದ ಪಾಠ ಮಾಡಿ
ನಗುವುದನು ಕಲಿಸಿದ ಮೇಷ್ಟ್ರು..
ಹಮ್ಮುಬಿಮ್ಮು ತೊರೆದು
ಜನಮಾನಸದಲಿ ಬೆರೆತು
ಕನ್ನಡದ ಕಸ್ತೂರಿಯನು
ದಿಗಂತದೆತ್ತರಕೆ ಹಾರಿಸಿದ
ಅಭಿಜಾತ ಕಲಾ ಕುಸುಮ
ನಾಕು ತಂತಿಯ ಮೀಟುತ
ಸಹೃದಯರ ಹೃದಯವ ಮೀಟುತ
ಸಾಹಿತ್ಯ ಲೋಕದಿ ಮೂಡಿ ಬಂದು
ಝೇಂಕರಿಸಿದ ದುಂಬಿಗೆ ಶುಭಕೊರುವೆ ನಾ..-
ಬಂಗಾರ ನೀರ ಕಡಲಾಚೆಗೊಮ್ಮೆ
ಹೋಗಿ ಬಂದ ಸೂರ...
ಎಲ್ಲಾ ದಿಕ್ಕುಗಳನು ಒಮ್ಮೆ
ಸುತ್ತಿ ಬಂದ ವೀರ...
ಇದು ನಮ್ಮ ಊರು
ಅದು ನಮ್ಮ ಊರು
ನಿಮ್ಮೂರು ಯಾವ್ದೋ ಬೀರಾ...
ಇರೋದೊಂದೇ ಜೀವ
ಸುಮ್ ಸುಮ್ಕೆ ನೋವ
ತಗೋಬೇಡ್ವೋ, ಕುಡಿಯೋ ನೀರಾ...
ಇರಲಿ ಪ್ರೀತಿ ನಮ್ಮನೆಗೆ ಶಾಂತಿ
ಬರುತಾಳೆ ನೋಡು ನೀನು...
ಬಂದ್ಮೇಲೆ ರುಚಿ ರುಚಿಯಾಗಿ
ಮಾಡಿ ಬಡಿಸುತಾಳೆ ಮೀನು...— % &-
*ವರಕವಿ*
ಧೃತಿಗೆಡಬೇಕಿಲ್ಲ ಬದುಕಿನಲ್ಲಿ
ಸಣ್ಣ ಪುಟ್ಟ ಕಷ್ಟಗಳು
ಬಂದ್ರೆ.
ಸ್ಫೂರ್ತಿಯಾಗಿದ್ದಾರೆ ನಮಗೆ,
ಬದುಕಿನ ಬವಣೆಯಲ್ಲಿ ಮಿಂದೆದ್ದ
ಬೇಂದ್ರೆ.
-
ನಾಕೂ ತಂತಿಗಳನ್ನು ಮೀಟಿ
ಯುಗ ಯುಗಾದಿಗಳಲಿ
ಕುರುಡು ಕಾಂಚಾಣವನ್ನ ಕುಣಿಸಿದ ಅಜ್ಜ.
ನಮ್ ಬೇಂದ್ರೆ ಅಜ್ಜನ
ಹುಟ್ಟು ಹಬ್ಬ— % &-
ಬೇಂದ್ರೆ ಅವರ ಭರಿಸಲಾಗದ ಬರಹಗಳನ್ನು ಓದಿ ಅರ್ಥ
ಮಾಡಿಕೊಳ್ಳೋಕೆ ಪ್ರಯತ್ನಿಸ್ತಿನಿ.
ಸಾಹಿತ್ಯದ ಗಂಧ ಗಾಳಿಯೂ ಅರಿಯದ ನನಗೆ ಅವರ ತಂತಿಯ ನಾಕು ಬರಹಗಳೇ ನನಗೆ ಸಾಹಿತ್ಯದ ಮೇಲೆ ಒಲವಾಗಲು ಕಾರಣವಾದವು.
ನನ್ನ ಸ್ಪೂರ್ತಿ ಪ್ರೇರಣೆಯಾದ ಧಾರವಾಡದ ಕುವರ ಇವಾ..
ನಾ ಹ್ಯಾಂಗ ವರ್ಣಾ ಮಾಡ್ಲಿ ಇವ್ನಾ?
ಪದಪುಂಜ?🤔
ವ್ಯಾಳೆ ಸಿಕ್ಕಾಗ ಆಠ ಅಲ್ಲ ಜೀವ್ನ ಬರ್ಥಿ ಇವ್ರ ಕೃತಿ ಓದ್ದೃ ಇವ್ನ ಅರ್ಥ ಮಾಡಿಕೊಳ್ಳಕ ಆಗ್ದಾಂಗ ಇರ ಬರಹಗಳು. ಏರಡ ತಾಸ್ನಾಗ ಆರು ವಿಭಿನ್ನ ಭಾವ್ನೆ ಇರ ಪದ್ಯ ಬರ್ದಾ ಮಹಾ ಪುಣ್ಯಾತ್ಮ ನಮ್ಮ್ ಬೇಂದ್ರೆಜ್ಜ.-
* "ಗಂಧ" *
ಯಾರಿರಿಸಿರುವರು ಮುಗಿಲ
ಮೇಲಿಂದಿಲ್ಲಿಗೇ ತಂದು
ಎಲೆಗಳಮೇಲೆ
ಅಮೃತದ ಬಿಂದು
ಕಂಡವು ಈಗ
ಹೂಗಳ ಮೇಲೆ
ಅಮೃತದ ಬಿಂದು
ತಂಗಾಳಿಯಾ ಕೈಯೊಳಗಿರಿಸಿ
ಎಸಳೀನಾ ಚವರಿ
ಹಾರಿಸಿಬಿಟ್ಟರು ತಬಿದ ದಂಡು
ಮೈಯೆಲ್ಲಾ ಸವರಿ
ಗಂಧಾ..-
ಇಂದು "ಜ್ಞಾನಪೀಠ ಪ್ರಶಸ್ತಿ ವಿಜೇತರಾದ ದರಾಬೇಂದ್ರೆಯವರ ಜಯಂತಿ"
ಧಾರವಾಡದ ಬೇಂದ್ರೆ ಅಜ್ಜ ಇಂದಿಗೂ ಅಮರ
ನಾನು ಅವರ ಕವನಗಳನ್ನು ಓದುವ ಭ್ರಮರ!!
ತನ್ನ ಭಾಷೆಯ ಸೊಗಡ ಹೆಚ್ಚಿಸಿದ ಅಜ್ಜಯ್ಯ
ದೇಶದುದ್ದಕ್ಕೂ ಕ್ರಾಂತಿ ಎಬ್ಬಿಸಿದ ತಾತಯ್ಯ!!
ಮಹಾತ್ಮ ಗಾಂಧಿ ಮಡಿದಾಗ ಅಳುತ ಹಾಡು ಕಟ್ಟಿದ
ತನ್ನ ಮಗುವೇ ಸತ್ತಾಗ ಮನದ ನೋವ ಹೊರಹಾಕಿದ!!
ಪದ ಕಟ್ಟುತಲೇ ನೋವು - ನಲಿವಿಗೂ ಔಷದ ನೀಡಿದರು
ನೋಡಿಲ್ಲಿ, ಇಂದಿನ ಯುವಪೀಳಿಗೆ ನಿನ್ನ ಜಯಂತಿಯ ಹಬ್ಬ ಮಾಡುವರು!!
ಬೇಂದ್ರೆ ಅಜ್ಜ ನಿನಗಿದೋ ಕೋಟಿ ನಮನ!!-