🙏 ಓಂ ನಮಃ ಶಿವಾಯ 🙏
||ಓಂ ಭವ್ಯವಾದ ಆತ್ಮ ಭಾವವೇ ||
|| ಓಂ ರಮ್ಯವಾದ ಜೀವರಾಗವೇ ||
|| ಓಂ ನವ್ಯವಾದ ನಿತ್ಯ ತಾಳಗಳೇ ||
|| ಅಖಿಲಾಂಡ ಕೋಟಿ ಜಗತ್ತಿನಾ ನವ ಜೀವ ರಾಶಿಗಳ ಮೂಲ ಸ್ವರೂಪವೇ ನಿಮಗೆ ನಮೋ ನಮಃ ||-
Me one & only Me
No one can copy me
But they can follow me
That means to Shobha M-
ಮನವ ಹಾರಲು ಬಿಡು ಪದಗಳ ಲೋಕದಲ್ಲಿ ;
ಗರಿ ಬಿಚ್ಚಿ ಕುಣಿಯಲಿ, ಭಾವನೆಗಳ ಲೋಕದಲ್ಲಿ
ಮೌನವೆಂಬ ಮಸಣದ ಬೀಗ ಬಡಿದು.
ಏಳು ಸುತ್ತಿನ ಕೋಟೆಯ ಬಾಗಿಲು
ತೆರೆಯಲಿದೆ ಸಖಿ.. ನಿನಗಾಗಿ ನಗುವೆಂಬ
ಮುತ್ತಿನ ಹಾರ ನಲಿಯಲಿ ನಿನ್ನಯ
ಕೊರಳಿನಲೀ...!!-
ಹುಟ್ಟು ಹಬ್ಬದ ಶುಭಾಶಯಗಳು ನನ್ನ
ಮುದ್ದಿನ ಗಿಣಿ
ಮಾತಿನ ಮಣಿ
ಕನ್ನಡದ ಕಣ್ಮಣಿ
ಮಾಮನ ಹೃದಯ ಕದ್ದ ಅರಗಿಣಿ
ನಮ್ಮನೆ ಮಹಾ ರಾಣಿ
ಇಬ್ಬರು ಮುದ್ದು ಮುದ್ದು ಪೋರರ ಹಡೆದ ಗೃಹಿಣಿ
ಗೆ ಜನುಮ ದಿನದ ಹಾರ್ದಿಕ ಶುಭಾಷಯಗಳು
ನೂರು ಕಾಲ ಸುಖವಾಗಿರಲೆಂದು ಹಾರೈಸುವ
ನಿನ್ನ ತುಂಟ ತರಲೆ ಹಸನ್ಮುಖಿ ಸುಬ್ಬಿ..!-
*..ಹೈಕು..*
ಮನದಿ ಹೊತ್ತ
ಚಿಂತೆ ಮೋಟೆ ಕಟ್ಟುತ
ಎಸೆಯಬೇಕು..!
ಗಲ್ಲದ ಮೇಲೆ
ಬೆಲ್ಲದ ನಗು ಸೋಸಿ
ನಲಿವ ಜೇನಾ ಗಣಿ...!
ನೀನಾದೆ ಮೌನಿ,
ಕರಿಮಣಿ ಕುಣಿಕೆ
ನಿನಗೆ ಧ್ಯಾನಿ...!
ಸಾಕಿನ್ನು ಮೌನ
ನಲಿವ ಕೆಂಗುಲಾಬಿ
ನಿನ್ನ ಮುಡಿಗೆ...!-
*..ಹೈಕು..*
ನಿನ್ನಯ ಪ್ರೇಮ
ಹಚ್ಚ ಹಸಿರು, ಸೋನೆ
ಸುರಿಸಿದಂತೆ..!
ಪ್ರೀತಿಯ ಪೈರು
ಚಿಗುರೊಡೆದ
ಜೇನ ಸವಿಯಂತೆ..!
ಮೀಲನವಿಂದು
ಮಿಂಚು ಸಿಡುಲಗಳ
ಮುತ್ತು ಮಳೆಯಂತೆ..!-
ಹಾರಲು ಬಿಡಿ ತನ್ನ ಇಚ್ಛೆಯಂತೆ
ಪ್ರೀತಿ ಪ್ರೇಮದ ದಂತ ಕಥೆಯಂತೆ
ಇತಿಹಾಸದ ಪುಟ ತೆರೆದಂತೆ
ಭವಿಷ್ಯದ ಮುನ್ನುಡಿ ಬರೆದಂತೆ
ಎಲ್ಲರ ಮನದ ಕದ ತಟ್ಟಿದಂತೆ
ಜಾತಿ ಮತ, ಬೇಧ ಭಾವ ಮೀರಿದಂತೆ
ಭಾರತಾಂಬೆಯ ಮಡಿಲಿನಲಿ ನಲಿವ ಮಕ್ಕಳಂತೆ
ಸೌಹಾರ್ದ ರಾಷ್ಟ್ರದ ಏಕತೆ ಮೇರೆದಂತೆ!-
ಅವನಿಗೆ ನಾ ಸ್ಪೂರ್ತಿಯಾಗಿರುವೆ
ನನ್ನ ಕನಸಿನ ಸರಮಾಲೇಯ ಸರದಾರನ
ಜೊತ ಜೊತೆಗೇ ಹೆಜ್ಜೆಗಳ ಗುರುತು ಹಾಕಿರುವೆ.. 👣-