Sridhara Kadloor   (ಶ್ರೀಧರ ಕಾಡ್ಲೂರು)
404 Followers · 217 Following

ಮೂಲತಃ ದಾವಣಗೆರೆ‌,
ಬೆಂಗಳೂರು ವಾಸ..
ಹನಿಗವನ ಚುಟುಕು ನನ್ನ
ಹವ್ಯಾಸ..
ಖಾಸಗಿ ಕಂಪನಿಯಲ್ಲಿ
ಕೆಲಸ..
Joined 1 December 2019


ಮೂಲತಃ ದಾವಣಗೆರೆ‌,
ಬೆಂಗಳೂರು ವಾಸ..
ಹನಿಗವನ ಚುಟುಕು ನನ್ನ
ಹವ್ಯಾಸ..
ಖಾಸಗಿ ಕಂಪನಿಯಲ್ಲಿ
ಕೆಲಸ..
Joined 1 December 2019
2 HOURS AGO

ಗಂಡಸರು ಗೆದ್ದು ಬಂದಿದ್ದಾರೆ
ಬ್ರಹ್ಮಾಸ್ತ್ರ, ಪಾಶು
ಪತಾಸ್ತ್ರ
ಗೆಲ್ಲಲಿಕ್ಕೆ ಇನ್ನೂವರೆಗೂ
ಆಗದಿರುವುದು ಹೆಣ್ಣಿನ
ಕಣ್ಣಸ್ತ್ರ

-


13 MAY AT 9:41

ರುಚಿ
ತಾತ್ಕಾಲಿಕ
ಹಿಡಿಸಲಿಲ್ಲವೆ ಮಡದಿಯ ಅಡುಗೆ ?
ಇರಿ ತೆಪ್ಪಗೆ
ಇಲ್ಲವೆ ಕೇಳಿ ಉಪ್ಪಿನಕಾಯಿ
ಮೆತ್ತಗೆ

-


5 MAY AT 10:06

ಹರಿದ ಬಟ್ಟೆ
ಹೊಲಿದಂತೆ
ದಾರ ಸೂಜಿ
ಹರಿದ ಸಂಸಾರ
ಹೊಲಿಯುವುದು
ಸಣ್ಣ ರಾಜಿ

-


5 MAY AT 8:16

*ದಾಂಪತ್ಯ*

ಗಂಡ ಹೆಂಡತಿ ಅಂದ್ರೆ
ಸೂಜಿ ದಾರದಂತೆ
ಆಕೆ ಸೂಜಿ
ಇವ ದಾರ

-


3 MAY AT 15:15

ಎಸ್ ಎಸ್ ಎಲ್ ಸಿ ಪರೀಕ್ಷೆಲಿ
ಇವನದ್ದೇ ಕಡಿಮೆ
ಅಂಕ
ಮಿನಿಸ್ಟ್ರಾಗವ್ನೆ ಈಗ
ನಮ್ ಕ್ಲಾಸ್ಮೇಟ್
ವೆಂಕ

-


29 APR AT 11:32

ಪ್ರತಿ ವರ್ಷ ಹೆಚ್ಚುತ್ತಿದೆ
ಇವನ ಆದಾಯ
ತಿಳಿಯಬೇಕೆ ಏನಿದರ
ಮೂಲ ?
ಇವನು ಬಾಸಿನ
ಚೇಲಾ

-


26 APR AT 0:36

ವಿಸ್ಮಯ

ಕೈಗೆ ಸಿಗದ, ಕಣ್ಣಿಗೆ ಕಾಣದ ಹಾಗೆ
ಗಾಳಿಯನ್ನು ತುಂಬಿ ಹಾರುವಂತೆ
ಬಲೂನು‌
ಸಂಬಳವನ್ನು ಹಾರಿಸಿತ್ತಿದೆ
ಲೋನು

-


3 APR AT 23:37

ಗಂಗೆಯಲ್ಲಿಯೇ ವಿಲೀನವಾಗಬೇಕೆ
ನಿಮ್ಮ
ಅಸ್ಥಿ ?
ಮಾಡಿಡಿ
ಮೊಮ್ಮಕ್ಕಳೂ ಕೂತು ತಿನ್ನುವಂತೆ
ಆಸ್ತಿ

-


3 APR AT 23:33

ಉಳಿಸಬೇಕು ನಾವು
ಹೋದ ಮೇಲೂ ಒಂದಷ್ಟು
ಆಸ್ತಿ
ಇಲ್ಲವಾದಲ್ಲಿ ಯಾರೂ
ಮುಟ್ಟುವುದಿಲ್ಲ ನಮ್ಮ
ಅಸ್ಥಿ

-


14 MAR AT 9:35

ಇದು ಬಣ್ಣದ ಹಬ್ಬ
ಆಡಿ ಬಣ್ಣದಿಂದಷ್ಟೇ
ಹೋಳಿ
ಎಂದು ಎಲ್ಲರಲ್ಲಿ
ಮನವಿ ಇಟ್ಟಿದೆ
ಮೊಟ್ಟೆಯೊಳಗಿನ
ಕೋಳಿ

-


Fetching Sridhara Kadloor Quotes