ಶುಭಸಂಜೆ...
ಕನಸುಗಳೆಲ್ಲವೂ ನಾಂದಿಯ ಹಾಡುತಿದೆ
ಒಲವಿನ ಬೆಸುಗೆ ಪಡೆಯಲು.
ಋತುಗಳು ಬದಲಾವಣೆಯ ಬಯಸುತಿದೆ
ಮೌನದ ಪಯಣ ಸೇರಲು.
ಬಾನಲಿ ಮೋಡಗಳು ಕರಗಿ ನೀರಾಗಿದೆ
ಪ್ರಕೃತಿಯ ಸೊಬಗ ಹೆಚ್ಚಿಸಲು.
ಜೀವನದ ಬಯಕೆಗಳು ಬದಲಾಗಬೇಕಿದೆ
ಹೊಸ ದಿಗಂತದೆಡೆಗೆ.....
🍂🍂🍂🍂🍂🍂🍂🍂🍂🍂🍂🍂🍂🍂🍂🍂🍂-
Wish me jan5th🙆♂️
ಸೌಂದರ್ಯಕ್ಕಿಂತ ಗುಣ ಮುಖ್ಯ 🙏🙏
ಕರಾವಳಿಯ ಕುಂದ... read more
ಶುಭಸಂಜೆ...
ಎಲ್ಲೊ ಕಳೆದುಕೊಂಡ ಮುಗುಳುನಗೆಯನ್ನು
ಕನ್ನಡಿಯ ಮುಂದೆ ನಿಂತು ಹುಡುಕುತಿರುವೆ...😊-
ಶುಭಸಂಜೆ...
ನಿನ್ನ ಪ್ರೀತಿಗೆ ನಾ ಶರಣಾಗಿ ಬಂದು ನಿಂತಂತ್ತಿದೆ
ಕನಸುಗಳ ಹಿಡಿದಿಟ್ಟು ನಾ ನಿನಗಾಗಿ ಕಾದು ಕುಳಿತಿರುವೆ
ಒಮ್ಮೆಯಾದರು ಬಂದು ನಿನ್ನ ಪರಿಚಯವ
ತಿಳಿಸೆನಗೆ ಓ ಮೌನವೇ... ❤️-
ಶುಭಸಂಜೆ...
ಜೀವನದಲ್ಲಿ ಅತಿಯಾದ ಆತ್ಮವಿಶ್ವಾಸ ಇದ್ದಾಗ
ಸಣ್ಣ ಸಣ್ಣ ಗೆಲುವುಗಳು ನಿನ್ನ ಕಣ್ಣಿಗೆ ಕಾಣುವುದಿಲ್ಲ....-
ಶುಭಸಂಜೆ...
ನಮ್ಮ ಬದುಕು ನಾವು ಕಂಡಂತಿದ್ದರೆ ಚಂದ
ಬೇರೆಯವರ ಮೇಲೆ ಅವಲಂಬಿತರಾಗಿದ್ದರೆ ನರಕ...-
ಶುಭಸಂಜೆ...
ನಾ ನಗುವಾಗ ಜೊತೆಗಿದ್ದವರು
ಅಳುವಾಗ ಇನ್ನೊಬ್ಬರ ಜೊತೆಸೇರಿ ನನ್ನ ನೋಡಿ ನಗುವರಯ್ಯ..👣-
ಶುಭಸಂಜೆ...
ಒಬ್ಬರ ಮುಖವನ್ನ ನೋಡಿ ಅವರ ವ್ಯಕ್ತಿತ್ವವನ್ನ
ಅಳತೆ ಮಾಡುವ ಜನ ಇನ್ನೊಬ್ಬರ ಮನಸನ್ನ
ಯಾಕೆ ಅರ್ಥಮಾಡಿಕೊಳ್ಳುವುದಿಲ್ಲ....-
ಶುಭಸಂಜೆ...
ನಮ್ಮ ಜೀವನ ಹೇಗಿರಬೇಕೆಂದರೆ...
ಸಿಹಿಕನಸುಗಳನ್ನ ಉಪ್ಪಿನಕಾಯಿಯಂತೆ
ಬರಣಿಯಲಿಟ್ಟು ವರ್ಷವಿಡೀ ತಿನ್ನಬೇಕು.
ಅದೇ ಕಹಿನೆನಪುಗಳನ್ನ ಚಟ್ನಿಯಂತೆ
ಒಂದೇ ದಿನಕ್ಕೆ ತಿಂದು ಮುಗಿಸಬೇಕು.
ಹ್ಯಾಪಿ ಹೋಳಿ...-
ಶುಭರಾತ್ರಿ...
ಬಾಳದೋಣಿಯಲ್ಲಿ ನಮ್ಮಿಬ್ಬರ ಪಯಣ
ಕನಸುಗಳ ಜೊತೆಯಲ್ಲಿ ನಲಿಯುತಾ ಬಾಳೋಣ
ಕಷ್ಟಗಳಲ್ಲವೂ ನಷ್ಟಗಳಾಗಿ ಸುಖಗಳೆಲ್ಲವು ಮಿತಿಮೀರಿ
ನಿನ್ನ ಒಮ್ಮೆ ಬಾಚಿ ತಬ್ಬಿಕೊಳ್ಳುವಾಸೆ ಮನದಲಿ ಗೆಳತಿ...-