We are in the path of dream
But
He is the DREAM-
"ಈ ನನ್ ಮಗಂಗೆ ಜೀವನ ಪೂರ್ತಿ ಮರಿ... read more
ನನ್ನಲ್ಲಿಯೂ
ಪ್ರತಿಭಾರಿ
ರಾತ್ರಿಯಾಗುತ್ತಿತ್ತು
ಆದರೇ ,,
ನಾ ಕಾದಿದ್ದು ಮಾತ್ರ
ನಿನ್ನಿಂದ ಹುಣ್ಣಿಮೆ-
ಯಾವ ಹರಿವ ತೊರೆಯ
ಹರಕೆಯೋ,
ಯಾವ ಕಡಲ ಒಡಲ
ಬಯಕೆಯೋ
ಈ ಪರಿ ಹನಿವ ಮಳೆ
ಇಲ್ಲದಿದ್ದರೆ ಇದಕ್ಕೆಲ್ಲಿಯ ಅವಸರ
ಇದಕ್ಕೆಲ್ಲಿಯ ಆವೇಗ....-
ರಾತ್ರಿಗಳೆನ್ನದಿರಿ ಅವಕ್ಕೆ,
ಹುಡುಗನ ಎದೆಗೆ
ಕನಸಿನ ಬಲೂನು ಕಟ್ಟಿ ಹಾರಿಸುತ್ತವೆ.
ವಿರಹದ ಊಟೆಗಳೋ
ಸ್ಪರ್ಶದ ಬಣ್ಣಗಳೋ
ನೆನಪಿನ ಹನಿಗಳೋ
ಎಲ್ಲವನ್ನೂ ಹರವಿ ಮಾರಿಕೊಳ್ಳುತ್ತವೆ
ರಾತ್ರಿಗಳಲ್ಲ ಅವು
ಅವನನ್ನೇ ಬರೆದುಕೊಟ್ಟ ಹರಾಜುಸಂತೆ....-
ಕವಲೊಡೆಯದ ತುಟಿಗಳಿಗೆ
ಮೌನ ಬಳಿದು ಕೂರುತ್ತಿದ್ದಾಗಲೂ,
ಕಣ್ಣುಗಳ ನಾಲಿಗೆ
ಎಲ್ಲವನ್ನೂ ಪಸಪಸನೆ
ಒದರಿ ಬಿಡುತ್ತಿದ್ದ ಕಾಲವೊಂದಿತ್ತು.
ಪ್ರೀತಿಸಿ ಬಿಟ್ಟುಬಿಟ್ಟಾಗ
ಋಣದಲ್ಲಿ ಬದುಕುವ
ಸಾಯೋವರೆಗೂ ತೀರಿಸದ ಸಾಲವೊಂದಾಯ್ತು.-
ಮಾತು, ಮೌನ
ಒಂದನ್ನೊಂದು ಸ್ಪರ್ಶಿಸಿದಾಗ,
ನಿನ್ನ ಕಣ್ಣುಗಳು ಹುಟ್ಟಿದವೆಂಬ
ದಂತಕಥೆ ಕೊನೆಗೂ
ನಿಜವಾಗಿಬಿಟ್ಟಿತು
ನೀ ಕಂಡಾಗಿನಿಂದ.....-
ಅತ್ಯಂತ ನಿರ್ದಯಿಕ ನಡುರಾತ್ರಿಗಳಿವು,
ನಗುತಲೆ ಮನದ ತುಮುಲಗಳ ಹೊಸಕಿದ ನಾಜೂಕು ಪಾತಕಿಗಳು.
ಭಾವ ಕವಿದ ಎದೆಯೊಳಗೆ
ಸಂಕಟದ ಮಳೆ.
ಹೀಗೆ ಒಬ್ಬಂಟಿಗನಾಗಿ ಬರೆದು
ಅದೇ ಹಾಳೆಯ ಮಡಚಿ
ದೋಣಿ ಮಾಡಿ ತೇಲಿ ಬಿಟ್ಟಂಗೆ.
-
ಒಂದು ರಾತ್ರಿ ನಿನ್ನ ನೆನಪುಗಳ
ಸುಡಲು ಕುಳಿತೆ.
ಸುಟ್ಟು ಕಿಡಿಗಳೆಲ್ಲ ಹಾರಿ
ಬಾನಿಗೆ ಮೆತ್ತಿದ ಚುಕ್ಕೆಗಳಾದವು.
ಯಾರು ಕೊಟ್ಟ ಶಾಪವೋ
ಅಜರಾಮರ ಜಯಿಸಿಬಿಟ್ಟವು.-