You showed how dedication, hard work, and humility can turn an ordinary life into an extraordinary example. Your journey from Rameswaram to Rashtrapati Bhavan proves that no dream is too big when we believe in ourselves.
-
ಮಹಾತ್ಮ ಗಾಂಧೀಜಿ
"ಸತ್ಯಮೇವ ಜಯತೆ" ಎಂದು ಹೇಳಿ,
ಭಯವಿಲ್ಲದೆ ಹೋರಾಟ ಮಾಡಿದರು
ಸ್ವಾತಂತ್ರ್ಯದ ದಾರಿಯಲಿ,
ಮಕ್ಕಳಿಗೆ ದಾರಿ ತೋರಿದರು//
ಚಕ್ರ ತಿರುಗಿಸಿದ ಕೈಯಲಿ,
ಸ್ವಾವಲಂಬನೆ ಕಲಿಸಿದರು
"ಸ್ವದೇಶಿ" ಎಂಬ ಮಂತ್ರದಿಂದ,
ಪ್ರತಿಯೊಬ್ಬರ ಮನ ಬೆಳಗಿದರು//
ಸರಳತೆ ಅವರಿಗೆ ಶರಣ,
ದೇಶಭಕ್ತಿ ಅವರ ಆಭರಣ..
ಗಾಂಧೀಜಿ ಪಾಠವನು ನೆನೆದು,
ಒಳ್ಳೆಯ ದಾರಿಯನು ಹಿಡಿದು
ನಾವು ನಡೆಯೋಣ //-
ಮಧ್ವಾಚಾರ್ಯ ಜಯಂತಿ
ಉಡುಪಿಯ ನೆಲೆಯಲಿ ಜನಿಸಿದ ಜ್ಞಾನಿ,
ಭಕ್ತಿ–ಭಾವದ ದೀಪ ಬೆಳಗಿದ ಧ್ಯಾನಿ..
ದ್ವೈತ ತತ್ವದ ಸಾರ ಬೋಧಿಸಿದವರು,
ಮಧ್ವಗುರು ನಮ್ಮ ಹೃದಯದವರು//
ಹರಿಭಕ್ತಿಯ ಮಾರ್ಗ ತೋರಿದವರು,
ವಿಷ್ಣುವಿನ ಕೀರ್ತನೆ ಹರಡಿದವರು.
ಸರಳ ಭಾಷೆಯ ಪಾಠ ಬೋಧಿಸುತ
ಜನಮನದಲ್ಲಿ ಜ್ಯೋತಿ ಬೆಳಗಿಸಿದವರು//
ಅವರ ಜಯಂತಿ ಹಬ್ಬವು ನಮಗೆ
ಭಕ್ತಿಗಾನದಿಂದ ತುಂಬುವುದು ಮನವು
ಮಧ್ವಗುರು ಹೆಸರು ಶಾಶ್ವತ ಹೊಳಪು,
ಭವಿಷ್ಯದಲ್ಲಿನ ಅಮೂಲ್ಯ ಕಿರಣವು//-
ಲಾಲ್ ಬಹಾದ್ದೂರ್ ಶಾಸ್ತ್ರಿ
ದೇಶವನು ಮುನ್ನಡೆಸಿದ ಪ್ರಭಾವಿ ನಾಯಕರು
ಸತ್ಯ–ಧೈರ್ಯ ಅವರ ದಾರಿಗೆ ಬೆಳಕು...
"ಜೈ ಜವಾನ್ – ಜೈ ಕಿಸಾನ್" ಎಂದು ಘೋಷಿಸುತ
ಸೈನಿಕರ -ರೈತರ ಬೆನ್ನು ತಟ್ಟಿದರು..
ಉನ್ನತ ಚಿಂತನೆ ಪ್ರಾಮಾಣಿಕತೆಯ ಮೂರ್ತಿ
ದೇಶವನು ಗರ್ವದಿಂದ ಬೆಳಗಿಸಿದ ಕೀರ್ತಿ..
ಭರತ ಭೂಮಿಯ ಮಿನುಗು ನಕ್ಷತ್ರ,
ಶಾಸ್ತ್ರಿಜಿ ಹೆಸರು ಎಂದಿಗೂ ಶಾಶ್ವತ..
-
36 ವರುಷದ ಬಿಸಿರಕ್ತದ ಚೈತನ್ಯ ಸ್ವರೂಪ ದುರ್ಘಟನೆಯಲ್ಲಿ ದುರ್ಮರಣ ಹೊಂದುವುದು ಎಂದರೆ ನಂಬಲು ಅಸಾಧ್ಯ. ನಮ್ಮಂತಹ ಸಾಮಾನ್ಯ ಜನರು ತಮ್ಮ 36 ವಯಸ್ಸಿನಲ್ಲಿ ಮದುವೆ ಮಗು ಉದ್ಯೋಗ ಸ್ವಂತ ಮನೆ ಕಾರು ಎಂದು ಆಸ್ತಿ ಮಾಡಿಕೊಂಡು ಬದುಕುತ್ತಿದ್ದರೇನೋ? ಆದರೆ ಜನಜಾಗೃತಿ ಮೂಡಿಸುವ ಸಿನೆಮಾಗಳ ಮೂಲಕ ನಟ ನಿರ್ದೇಶಕ, ಬಹುಭಾಷಾ ಪ್ರವೀಣರಾಗಿ ಆಟೋ ರಾಜ, ಐ. ಪಿ .ಎಸ್ ಸಾಂಗ್ಲಿಯಾನ ಆಗಿ ಇಂದಿಗೂ ಜನಮಾನಸದಲ್ಲಿ ನೆಲೆ ನಿಲ್ಲುವುದು ಅಷ್ಟು ಸುಲಭದ ಮಾತಲ್ಲ.
-
ನಟ ಶಂಕರ್ ನಾಗ್ ಇದ್ದಿದ್ದರೆ ಅವರಿಗೆ 71 ವಯಸ್ಸಿನ ಆಸುಪಾಸಿನಲ್ಲಿ ಇರುತ್ತಿದ್ದರು. ಆಗಲೇ ಮೆಟ್ರೋ, ಸ್ಲಮ್ ಜನರಿಗೆ ಮನೆ ವ್ಯವಸ್ಥೆ ಮಾಡಿಸುತ್ತಿದ್ದರು. ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದ್ದರು. ಇದ್ದದ್ದು ಇದ್ದ ಹಾಗೆ ತೆರೆಮೇಲೆ ತೋರಿಸಿ ಜನಜಾಗೃತಿ ಮೂಡಿಸುತ್ತಿದ್ದರು. ಶಂಕರ್ ನಾಗ್ ತಮ್ಮ 36 ನೇ ವಯಸ್ಸಿನಲ್ಲಿ ತೀರಿಹೋದರು. ಅವರು ತೀರಿಹೋಗಿ ಇಂದಿಗೆ 35 ವರುಷಗಳೇ ಕಳೆದವು. ಛೇ! ಎಂತಹ ದುರಂತ.
-
ಕನ್ನಡ ಚಲನಚಿತ್ರ ಕ್ಷೇತ್ರದ ನವೀಕರಣ
ಮೆಟ್ರೋ ಕನಸು ಸಾಕಾರ
ಅಂತರರಾಷ್ಟ್ರೀಯ ಮಟ್ಟದ ನಿರ್ದೇಶಕ
ಪ್ಯಾನ್ ಇಂಡಿಯಾ ಸಿನೆಮಾ ಆಗಲೇ ಪ್ರದರ್ಶನ ಕಾಣುತ್ತಿತ್ತು.-
ವಿಧಿ ಲಿಖಿತ ಪೂರ್ವಯೋಜನೆಯಾದರೂ
ಜೀವನದಲ್ಲಿ ಕರ್ಮಕ್ಕೂ ತನ್ನದೇ ಆದ ಮಹತ್ವವಿದೆ.
ವಿಧಿ ಲಿಖಿತ ಇದ್ದರೂ ನಾವು ಮಾಡೋ ಕರ್ಮ,
ಮನಸ್ಸಿನ ಬಲ, ಪ್ರಯತ್ನ ಇವುಗಳಿಂದ ಕೆಲವೊಮ್ಮೆ
ಆ ದಾರಿಯನ್ನು ಬದಲಿಸಬಹುದು ಎಂಬ ನಂಬಿಕೆ ಇದೆ.-
ನೆಮ್ಮದಿ ಎಂದರೆ
ನೆಮ್ಮದಿ ಎಂದರೆ ಸಮಸ್ಯೆಗಳಿಲ್ಲದ ಸ್ಥಿತಿ ಅಲ್ಲ. ಸಮಸ್ಯೆಗಳ ನಡುವೆಯೇ ಸಮತೋಲನ
ಹೊಂದಿದ ಸ್ಥಿತಿ.-
ಇಂಜಿನಿಯರ್ಸ್ ಹಾಡು–ಪಾಡು
ಇಂಜಿನಿಯರ್ ಬದುಕು ಹೀಗೆ ಸಾಗುತಿದೆ,
ಕನಸು–ಕಠಿಣತೆ ಒಟ್ಟಾಗಿ ಹಾಡುತಿದೆ.
ಹೊಸ ಆವಿಷ್ಕಾರ, ಹೊಸ ದಾರಿ ಹುಡುಕಿ,
ನಗರವಾಸಿಗಳಾಗಿ ದಶಕಗಳಷ್ಟು ಬದುಕಿ
ಸಮಾಜ ಕಟ್ಟುವಲ್ಲಿ ಹೃದಯವಂತರಾಗಿರಿ..
ಅನಿವಾಸಿಯಂತೆ ಎಂದಿಗೂ ಬಾಳದಿರಿ..
- ಸಿಂಧು🍁 ಭಾರ್ಗವ, ಬೆಂಗಳೂರು-