QUOTES ON #ನೆಚ್ಚಿನ

#ನೆಚ್ಚಿನ quotes

Trending | Latest
31 JAN 2020 AT 22:37

ಕಣ್ಣಲ್ಲಿ ಉಗಮವಾಗಿ
ಮುಸ್ಸಂಜೆಯ ಸೋನೆ ಸುರಿದು
ಮುಂಜಾನೆ ವೇಳೆಗೆ
ಮನಸಲ್ಲಿ ಸಂಗಮವಾಗಿ
ಕೂಡಿಟ್ಟ ಕನಸುಗಳಲ್ಲೆ
ನೆನಪಾಗಿ ಉಳಿದು
ನಾ ನಿನಗೆ ನೆಚ್ಚಿನ ಗೆಳೆತಿಯಾಗುವೆ.!

-


1 SEP 2020 AT 11:21

"ಅಳಿದರೂ ಉಳಿದ ಪಾತ್ರಗಳು,ಜನ ಮಾನಸದಲ್ಲಿ."
(ಕ್ಯಾಪ್ಷನ್ಲಿ ಬರೆದಿರುವುದು ಓದಿ 👇👇)

-


26 NOV 2019 AT 10:36

** 1800 ಬರಹಗಳ ಸನಿಹದಲ್ಲಿರುವ ನನ್ನ ನೆಚ್ಚಿನ ಬರಹಗಾರ್ತಿ ಸುಕೃತಿ ಅವರಿಗೆ ಅಭಿನಂದನೆಗಳು**

ಮನದ ವ್ಯಖ್ಯಾನವ ಪ್ರಕಟಿಸಲು
ಮಾತುಗಳೆ ಬೇಕಿಲ್ಲ ಲೇಖನಿಯ ಬೆಳಕೆ ಸಾಕಲ್ವಾ

ಮುಂಜಾನೆ ರವಿಯಂತೆ ಮೂಡಿ
ಹೊಂಗಿರಣವಾಗಿ ಬೆಳಗಿ
ತನ್ನ ಸಾಹಿತ್ಯ ಕ್ಷಮತೆಯಿಂದ ಬೆಳೆದು
ಪ್ರಕಾಶಮಾನವಾಗಿ ಕಂಗೋಳಿಸುತಿರುವ ತಾರೆ
ಸುಕೃತಿ
ನಿಮ್ಮ ಬರಹಗಳು ಬೆಳಗಲಿ ಅನುದಿನ
ನಿಮ್ಮ ಬದುಕು ಕಂಗೋಳಿಸಲಿ ಅನುಕ್ಷಣ
ನಿಮ್ಮ ಕನಸುಗಳ ನೆರವೇರಲಿ....
ಅಭಿನಂದನೆಗಳು !!!!!

-


29 OCT 2021 AT 22:32

ಲೋಹಿತನಿಂದ ಪುನೀತನಾದೆ
ಅಭಿಮಾನಿಗಳ ಪ್ರೀತಿಯ ಅಪ್ಪುವಾದೆ
ಬಾನದಾರಿಯಲ್ಲಿ ಸೂರ್ಯನಂತೆ ಬಂದೆ
ಕಾಣದಂತೆ ಬೇಗ ಮಾಯವಾದೆ

ನಮ್ಮೆಲ್ಲರ ನೆಚ್ಚಿನ ಪುನೀತ
ನೆನಪಿನಂಗಳದಲ್ಲಿ ಸದಾ ಶಾಶ್ವತ
ಎಲ್ಲರ ಹೃದಯ ಗೆದ್ದ ಧೀಮಂತ
ಚಿರವಾಗಿರುವೆ ಮನದಲ್ಲಿ ಜೀವಂತ

ನಟನೆ ಗಾಯಕನಾಗಿ ಬೆಟ್ಟದ ಹೂವಾದೆ
ಯುವರತ್ನ ಪವರ್ ಸ್ಟಾರ್ ನಿನಾದೆ
ಕನ್ನಡನಾಡಿನ ಮಿನುಗು ತಾರೆಯಾದೆ
ಭಗವಂತನಿಗೆ ಇಷ್ಟವಾಗಿ ದೂರವಾದೆ
- Sarva Arasa Shetty







-



ದಿನ ರಾತ್ರಿ ಬೀಳುವುದು ಕನಸು....
ಅದರಲ್ಲಿ ನಿನ್ನನ್ನೇ ಇರಿಸು....
ಒಮ್ಮೊಮ್ಮೆ ಬರಬಹುದು ಮುನಿಸು...
ಆದರೂ ನೀ ನನ್ನನ್ನು ಕ್ಷಮಿಸು....

-


31 JAN 2020 AT 22:39

ನೆಚ್ಚಿನಾ ಮೆಚ್ಚಿನಾ
ಅಚ್ಚು ಮೆಚ್ಚಿನಾ ನನ್ನೊಡತಿ ನೀ
ಬಿಡುವ ಮಾತಿಲ್ಲ ಕೊನೆವರೆಗೂ
ನಿನ್ನೊಲವ ಸವಿಯುತ ಸವೆಸುವ
ಸಿಹಿ ಅಮೃತದ ಬಾಳಿದು.. !!

-


26 JAN 2020 AT 19:56

ನೆಚ್ಚಿನ ಸಂಗಾತಿ

ಬದುಕಿಗೆ ಹತ್ತಿರವಾದವರು,
ಹತ್ತಿರವಾಗಿ ಮರೆಯಾದವರು,
ಮರೆಯಾಗಿ ನೆನಪಿನಲ್ಲುಳಿದವರು,
ನೆನೆದಾಗೆಲ್ಲಾ ಮತ್ತೆಮತ್ತೆ
ಕಣ್ಮುಂದೆ ಬಂದು ಹೋದವರು,
ಅವರೇ ನಿಮ್ಮ ಪ್ರೀತಿಯ ಸಂಗಾತಿ.

-


1 FEB 2020 AT 0:17

ಕಣ್ಣಿನ ರೆಪ್ಪೆಯಾಗಿ
ಮುಸ್ಸಂಜೆಯ ತಂಪು ಎರೆದು
ಬೆಳಗಿನ ವೇಳೆಗೆ
ಒಲವಲ್ಲಿ ಭದ್ರವಾಗಿ
ಬಚ್ಚಿಟ್ಟ ನೆನಪುಗಳಲ್ಲೆ
ಕನಸಾಗಿ ಉಳಿದು
ನಾ ನಿನಗೆ ಜೀವದ ಗೆಳೆಯನಾಗುವೆ

-


28 JUN 2020 AT 15:17

ಮುತ್ತು ಉದುರಿದಂತೆ ಮಾತು
ಅಕ್ಕರೆಯೊಳು ಮಾತೃ ವಾತ್ಸಲ್ಯವ ಬೆರೆತು!
ಸೌಮ್ಯ ನುಡಿಯಲ್ಲಿ ಅಕ್ಷರವ ಪುಟಾಣಿ
ಮಸ್ತಕದೊಳಗೆ ತುಂಬುವ
ಸೃಜನಶೀಲ ಶಿಕ್ಷಕಿ!!

ನಿಷ್ಕಲ್ಮಶ ಮನಸ್ಸಿನ ಅನುಪಮ ನಗುವಿನ ದೀಪ
ಪರಹಿತದಲ್ಲಿ ಸಂತೃಪ್ತ ಕಾಣುವ ವ್ಯಕ್ತಿತ್ವದಲ್ಲಿ ಅಪರೂಪ!
ಸಂಸ್ಕಾರಿ ನಡೆಯಲ್ಲಿ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ
ಕ್ರಿಯಾಶೀಲ ಶಿಕ್ಷಕಿ!!

ಸಿರಿ ಕನ್ನಡ ಪದ್ಯಗಳಿಗೆ ಇಂಪು ನೀಡುವ ಸೂತ್ರಧಾರಿಣಿ
ಸತ್ಕರ್ಮದತ್ತ ಮಾರ್ಗದರ್ಶನವೀಯುವ
ತಾಳ್ಮೆಯ ಸ್ವರೂಪಿಣಿ!
ನಂಬಿಕೆ, ಧೈರ್ಯವನ್ನು ಆಟ-ಪಾಠದಲ್ಲೇ ಬೋಧಿಸುವ
ವಿನಯಶೀಲ ಶಿಕ್ಷಕಿ!!

ಕಾಯಕದಲ್ಲಿ ಪದಗಳಿಗೆ ನಿಲುಕದ ನಕ್ಷತ್ರದ ಹುರುಪು
ಹಲವು ಬದುಕಿಗೆ ಪ್ರೇರಣೆಯಾದ ಪರಿಶ್ರಮದ ಛಾಪು!!
ಆತ್ಮೀಯತೆಯ ಭಾವದಲ್ಲಿ ಜ್ಞಾನಾಮೃತವ ಹಂಚುವ
ಗುಣಶೀಲ ಶಿಕ್ಷಕಿ!!

-


1 FEB 2020 AT 8:33

ನಿನ್ನ ನೆಚ್ಚಿನ
ಗೆಳತಿಯಾಗಿ ಪಡೆಯಲು
ಅದೆಷ್ಟು ಜನುಮದ
ಪುಣ್ಯ ಮಾಡಿರಬೇಕೋ ಗೆಳತೀ
ಕಾವ್ಯ ಶಾರದೆಯೆ
ಧರೆಗಿಳಿದಂತಿದೆ
ನಿನ್ನ ದಾಸಿ ನಾನು
ನನ್ನ ಕನಸು
ನನಸಾಗುವುದೇನು

-