If someone ignores you
Just leave them alone-
Because life never stop teaching you so always get ready to le... read more
ಮೌನಿ ನಾನು
ಮಾತಿಗಿಂತ ಮೌನವನೆ ಹೆಚ್ಚು ಪ್ರೀತಿಸಿದ್ದೆನು
ಬಾಯಿಯ ಮಾತಿಗಿಂತ ಬರಹದ
ಒಲುಮೆಗೆ ಮನ ಸೋತಿದ್ದೆನು
ಬದಲಾಗುತಿದೆ ಬದುಕು ಈಗೀಗ
ಮೌನವ ಸರಿಸಿ
ಮನದ ಮಾತಿಗೆ ಬಣ್ಣವ ಕೊಟ್ಟಿರುವೆ
ಅದ ಗೀಚುವ ಕುಂಚವ ನಿನ್ನ ಕೈಗಿಟ್ಟಿರುವೆ
ನಿನ್ನ ಕ್ರಿಯಾಶೀಲತೆಯ ಬಲದೇ
ನನ್ನ ಅಲಂಕಾರದ ಸೊಗಸು
ವರ್ಣಮಯವಾಗಿಸುವೆಯೋ ಬದುಕ
ಖಾಲಿ ಪುಟವೇ ಉಳಿಸುವೆಯೇ
ನಾನಂತು ಈಗೀಗ ನಿನ್ನದೆ ಸ್ವತ್ತು.-
ಬದಲಾದೆ ನಾನು
ಈ ಬದಲಾವಣೆಗೆ ಕಾರಣವೇನೋ ನೀನು
ಬಂಡೆಯಂತೇನಲ್ಲ ನಾನು
ಆದರೂ ಗಟ್ಟಿಯಾಗಿದ್ದೆ ಇನ್ನು
ಕರಗುತಿದೆ ಈ ಮನ
ಈ ಹೊಸತನಕೆ ಸಂಭ್ರಮಿಸುತಿದೆ ಈ ಕ್ಷಣ
ಹೊಸ ಪರಿಚಯವೇನಲ್ಲ ನೀ ಬದುಕಿಗೆ
ಹೊಸದಾಗಿ ಬಂದೇ ನನ್ನ ಭಾವನೆಗೆ
ಕೈ ಸೇರಿದೆ ಕಳೆದಿದ್ದ ಹೃದಯದ ಕೀಲಿ
ತೆರೆದು ಆಹ್ವಾನಿಸುವೇ ಖಾಲಿಯೇ ಇದೆ ಈ ಹೃದಯದ ಬೀದಿ
ಬಾಡಿಗೆಯ ಕೇಳೆನೂ ಬಂಧಿಯಾ ಮಾಡೆನೂ ಸ್ವಾತಂತ್ರ್ಯವ ಕೊಡುವೇ
ಬಂದು ಸೇರಿಕೊ ನೀ ಈ ಘಳಿಗೆಯೇ.-
ಕತ್ತಲೇನಿಲ್ಲ ಈ ಬದುಕಿನಲಿ
ಮುಸುಕಷ್ಟೆ ಕವಿಯುತಿದೆ
ಆಗೊಮ್ಮೆ ಈಗೊಮ್ಮೆ
ನಡೆವ ದಾರಿಯಲಿ
ಬೆಳಕಾಗಿ ಬಾ ಈ ಬದುಕಿನಲಿ
ಅಡೆತಡೆ ಇಲ್ಲದೆ ಮತಷ್ಟು
ಮಿನುಗಬೇಕಿದೆ ನಾ ನಾಳೆಗಳಲಿ.-
ಒಲವಿಗೂಂದು ನಿಲ್ದಾಣ
ನಾ ಕಾದು ಕುಳಿತಿದ್ದೆ ಅಲ್ಲಿ ಪ್ರತಿಕ್ಷಣ
ಆಗಮನವಾಯ್ತೋಂದು ಕಿರಣ
ಪ್ರಜ್ವಲಿಸಿತು ನನ್ನೊಳಗೊಂದು ಕ್ಷಣ
ರಿಂಗಣಿಸಿತು ಎದೆಯಂಗಣ
ನಾ ಒಪ್ಪಿ ಸ್ವೀಕರಿಸಿದೆ ಆಮಂತ್ರಣ.
-