ಸಾವಿರದ ಆತ್ಮಕ್ಕೆ ಸಾಂತ್ವಾನ ನಂಬಿಕೆ,
ಬದುಕಿನ ಪಾಲಿಗೆ ಪಾಲನೆಯ ಪರಿಪಕ್ವ..!!-
ಕೇಳೆ,
ನಾನೂ ಕೂಡ
ನಿನ್ನಂತೆಯೇ ಅನಂತ ಪ್ರೇಮಕ್ಕಾಗಿ
ಅನವರತ ಅಣಿಯಾದ ಅವನಿಯ ಅವತರಣಿಕೆ..!-
ಕನಸಿನ ಗಿಡಕ್ಕೊಂಡು
ನೆನಪಿನ ಹೂವೊಂದು
ಬೇಕಿದೆ;
ಬಿರಿದ ಬಯಕೆಯ ಕೊನೆಯ
ಅರಿತು ಬಾಡಲು..!!-
ಲೇಖನಿಯ ಮಹತ್ವ
*****************
(ಹಾಯ್ಕು)
೧. ಸೋತು ಗೆಲ್ಲುವ
ಮಂದಿಗೇನೆ ಲೇಖನಿ;
ನಿಜವಲ್ಲವೇ..?
********************
೨. ಖಡ್ಗಕ್ಕಿಂತಲೂ
ಲೇಖನಿ ಹರಿತವೇ
ಆಗಿನಿಂದಲೂ..!!
*********************
೩. ದೇಶಸೇವೆಗೆ
ಸ್ಫೂರ್ತಿ ನೀಡಿದ್ದು ಇವೇ
ಲೇಖನಿಗಳು.!!
*********************
೪. ನಲ್ಲೆಯ ಮನ
ಗೆಲ್ಲುವ ಬರಹಗಳ
ಸಾರಥಿಯಿದು..!!
***********************
✍️ Govindaraju B V
ಮೊ. 9845574191-
ದಿವ್ಯ ದಿಗಂತದ ಭವ್ಯ ಬಂಧುರದ
ಬಯಕೆಗೆ ಹೆಸರೇಕೆ?
ಸರಳೆ,ಸೌಮ್ಯವತಿ, ಚತುರೆ, ಚಂದ್ರಮುಖಿ
ನಕ್ಕರೆ ಅದು ಸಾಕೆ..!!
ನಗುವನೆ ಕರಗಿಸಿ ನಗವನ್ನಾಗಿಸೊ
ಹೊಂದಿಕೆ ಹೊಣೆಯಾಕೆ?
ಕರುಳ ಈ ಗೆಳತಿ ಕಣ್ಣರಳಿಸೆ ಕ್ಷಣ
ಸೊಗವಾದರೆ ಅದು ಸಾಕೆ..!!
ಕೆಡುಕ ಕಟ್ಟೆಯಲಿ ಕಷ್ಟವ ಪಳಗಿಸೊ
ಜಾದುವಾದರೂ ಏಕೆ?
ನಿತ್ಯ ಚಿರಂತನ ತಂಗಿಯ ಮೊಗದಲಿ
ನಗುವಿದ್ದರೆ ಸಾಕೆ..!!
ಬದುಕ ಬಾಗಿಲಿಗೆ ನೆಮ್ಮದಿ ತೋರಣ
ತಾಕಿಸೊ ಹಠವೇಕೆ?
ಹುಟ್ಟು ನಗು ಒಡತಿ ನಿಂತರೆ ಸಾಕು
ಸಗ್ಗದ ಪರಿಚಯ ಬೇಕೆ..?-