ರಾಧೆ ಬಿಡಿಸಿದ
ಒಲವ ರಂಗೋಲಿಗೆ
ಬಣ್ಣವಾದೆ ಕೃಷ್ಣಾ
ನೀನೆ ನುಡಿಸಿದ
ಕೊಳಲ ಗಾನಕೆ
ರಾಗವಾದೆ ಕೃಷ್ಣಾ
ಗೋಕುಲದ ಆಕಳು
ನಿನ್ನ ಕೂಗುತಿರೆ
ಗೊಲ್ಲನಾದೆ ಕೃಷ್ಣಾ
ಮಾತೆಯರ ಮನೆಗೆದ್ದು
ಗೋಪಿಕೆಯರ ಮನ ಕದ್ದು
ಬೆಣ್ಣೆಗಳ್ಳನಾದೆ ಕೃಷ್ಣಾ
ನಿರ್ಮಲ ಭಕುತಿಯನು
ಜಗಕೆ ಸಾರಲು
ಕನಕಗೊಲಿದೆ ಕೃಷ್ಣಾ
ಗೆಳೆತನದ ಸಿರಿತನಕೆ
ಅವಲಕ್ಕಿ ನೆಪವಾಗಿ
ಮಾನ್ಯನಾದೆ ಕೃಷ್ಣಾ-
ಬಾನಂಗಳದಲ್ಲಿ ಬೆಳ್ಳಿ ಚುಕ್ಕಿಗಳನ್ನಿಟ್ಟು
ನೇಸರನ ಹೊಂಗಿರಣಗಳನೆಳೆದು ಕೂಡಿಸಿ
ಹುಣ್ಣಿಮೆ ಚಂದಿರನ ಬೆಳದಿಂಗಳ ತುಂಬಿಸಿ
ನಡುವೆ ರವಿತೇಜನನು ದೀಪವಾಗಿರಿಸಿ
ಸಿಡಿಲ ಪಟಾಕಿ ಸಿಡಿಸಿ ಮಿಂಚಿನಾರತಿ ಬೆಳಗಿ
ಏನಂದ ನೋಡಿರೋ.. ಭೂಮಾತೆಯ ಬೆಳಕ ಹಬ್ಬ
ತಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳು
( ಪ್ರಕೃತಿಯಲ್ಲಿ ಪ್ರತಿ ದಿನವೂ ದೀಪಾವಳಿ ಸಡಗರ )
MIG
-
ಅಕ್ಕಸೊದ ಜಾಲ್ ಡ್ ಬೊಲ್ಲಿ ಚುಕ್ಕಿಲೆನ್ ಪಾಡ್ದ್
ನೆಸರ ಕಿರನೊದ ಗೆರೆಕುಲೆನ್ ಒಯ್ತ್ ಕೂಡಾದ್
ಪುಣ್ಣಮೆ ಚಂದ್ರನ ಬೊಲ್ಪುನುಲಯಿ ದಿಂಜಾದ್
ನಡುಟು ಸೂರ್ಯ ದೇವೆರೆನ್ ದೀಪೊ ಆದ್ ದೀದ್
ತೆಡಿಲ ಪಟಾಕಿ ಪುಡತ್ ಮೆಂಚ್'ದಾರತಿ ಬೆಳಗ್'ದ್
ವಾ ಪೊರ್ಲು ತೂಲೆಯೇ ಬೂಮ್ಯಪ್ಪೆನ ತುಡರ ಪರ್ಬೊ
ತುಳುವಪ್ಪೆ ಬಂಧುಲೆಗ್ ತುಡರ ಪರ್ಬೊದ ಎಡ್ಡೆಪ್ಪುಲು
-
2020 ನೇ ವರ್ಷ
ಬಾಯಿ, ಮೂಗು ಮುಚ್ಚಿಸಿತು
ಕೆಲವರ ಮುಖವನ್ನೂ
ಮುಚ್ಚಿಸಿ ಬಿಟ್ಟಿತು
ನಿಜ,
ಅಂತೆಯೇ ಬದುಕಿನ
ನೈಜ ಮುಖವನ್ನು
ಅನಾವರಣಗೊಳಿಸಿತು.
ಮುಖವಾಡಗಳನ್ನು
ಬಯಲು ಮಾಡಿತು
ಯಾರು ನಮ್ಮವರೆಂಬುದರ
ಅರಿವು ನೀಡಿತು..
ಶುಭ ವಿದಾಯದೊಂದಿಗೆ
ಹೊಸ ವರುಷಕೆ ಸುಸ್ವಾಗತ
ಮಂಜುಳ ಐ.ಜಿ
-
ಮೇರಿ ಮಾತೆಯ ಒಡಲಿಂದ
ಧರೆಗಿಳಿಯಿತು
ಜಗದ ತಮವ ಕಳೆವ
ಸುಪ್ರಭೆಯ ತೇಜ
ಕರುಣಾ ಮೂರ್ತಿಯವತರಿಸಿದ
ಪುಣ್ಯ ನೆಲ ಪಾವನವಾಯಿತು
ಶಾಂತಿ ಕರುಣೆಯ ಅಮೃತ ಹೃದಯ
ದಿವ್ಯ ಜ್ಞಾನದ ಬೆಳಕನು
ಜಗದೆಲ್ಲೆಡೆ ಪಸರಿಸಿತು
💥Merry Christmas 💥
-
ಕಣ್ಣೇ, ಸುರಿಸದಿರು ಹನಿಯಾ
ಬರಲಿಲ್ಲವೆಂದು ಇನಿಯಾ
ಕಾಲು ದಾರಿ ಕಂಗಾಲಾಗಿದೆ
ಕಾದ ಸಮಯವು ವ್ಯರ್ಥವಾಗಿದೆ
ನೊಂದ ಹೃದಯವು ನಗುವ ಮರೆತಿದೆ
ಹಗಲು ಕಾಡಿದ ಕನಸು ಕರಗಿದೆ
ಮೂಕ ವೇದನೆ ರಚ್ಚೆ ಹಿಡಿದಿದೆ
ಕೊಟ್ಟ ಮಾತದು ಮುರಿದು ಹೋಗಿದೆ
ಕಣ್ಣೇ, ರೆಪ್ಪೆಯನ್ನೊಮ್ಮೆ ಮುಚ್ಚಿ ಬಿಡುವೆ
ಮರೆವಿನ ಕಾಡಿಗೆಯನ್ನೊಮ್ಮೆ ಹಚ್ಚಿ ಬಿಡುವೆ
-
ನಿನ್ನೊಲವು ನೆಪವಷ್ಟೆ
ನಾನೇ ನೀನಾಗಿಹೆ ರಾಧೆ
ಅದಕಾಗೆ ನಮ್ಮೊಳಗೆ
ಬಂಧನದ ಬದುಕಿಲ್ಲ
ನೀನೇ ನಾನಾಗಿರುವೆ ರಾಧೆ
ದೇಹಗಳು ಎರಡಿರಲು
ಆತ್ಮವೊಂದಾಗಿರಲು
ನಿನ್ನಲಿದೆ ನನ್ನದೇ ಛಾಯೆ
ಕಾಣುತಿಹ ಬದುಕೆಲ್ಲಾ ಮಾಯೆ-
ಸಾಲು ದೀಪಗಳ
ದಿವ್ಯ ಪ್ರಭೆಯಲಿ
ಜಗಕೆ ಕವಿದಿಹ
ಕೊರೋನಾಂಧಕಾರ
ಮರೆಯಾಗಿ
ಆರೋಗ್ಯದ ಕಿರಣ
ಎಲ್ಲೆಡೆ ಪಸರಿಸಲಿ
ಬೆಳಕಿನ ಹಬ್ಬದ
ಶುಭಾಶಯಗಳು-
ಸಾಹಿತ್ಯ ಬಾನಂಗಳದಿ
ಬೆಳಗುತಿಹ ರವಿ
ಮರೆಯಾಯಿತೇ...
ಕಗ್ಗತ್ತಲೆಯ ಪರದೆಯ
ಮೀರಿ ಮಿನುಗುತಿಹವು
ಅಕ್ಷರ ಚುಕ್ಕಿಗಳು
ದೇದೀಪ್ಯಮಾನದಲಿ
ಅಂದಿಗೂ....
ಇಂದಿಗೂ...
ಎಂದೆಂದಿಗೂ...-