"ಕಂಡ ಕನಸಲ್ಲಿ ಅಜ್ಜ ಇರ್ಲಿಲ್ಲ"
-
.
.
. Let it be_😉
ಅವನು..
ಟೇಬಲ್ ಮೇಲೆ ಪುಸ್ತಕವನಿಟ್ಟು
ಓದಿನಲ್ಲಿ ಕಳೆದು ಹೋಗಿರಬೇಕು,
ನಾನು..
ಅವನ ಎದುರಿನ ಖುರ್ಚಿಯಲ್ಲಿ
ಅದೇ ಟೇಬಲ್ ಮೇಲಿರಿಸಿದ
ಕಾಫಿ ಕಪ್'ನಿಂದ
ಹೊರ ಎದ್ದು ಓಡುತ್ತಿರುವ ಹಬೆಯ
ಬಿಸಿಯನ್ನು
ಚಳಿಗೆ ಕಂಪಿಸುತ್ತಿರುವ ಅವನ
ಹಣೆ ಮತ್ತು ತುಟಿಗಳಿಗಷ್ಟೆ
ಊದಿ ಕಳುಹಿಸಬೇಕು.
ಕಳೆದು ಹೋದ ಅವನನ್ನು
ಹುಡುಕಿಕೊಟ್ಟ ಗುರುತಿಗೆ
ಕೆನ್ನೆಯಂಚಿನ ಮೇಲೆ ಕುರುಹೊಂದನು
ಅವನಿಂದ ಕೇಳದೆ
ಪಡೆಯಬೇಕು!-
ಅಪ್ಪ
ನೀನು ಸುಮ್ಮನೆ ಹೋಗಿದ್ದರೆ ಸಾಕಿತ್ತು.
ಆದರೆ
ನನ್ನೊಂದಿಗೆ ಆಡಬೇಕಿದ್ದ ಮಾತುಗಳನ್ನೆಲ್ಲ
ಬೈಗಿನ ಸೆರಗಿಗೆ ಅಂಟಿಸಿ ಹೋದೆ.
ನೋಡಲ್ಲಿ ಪಶ್ಚಿಮೆ ಅದೇನೊ ಹೇಳುವಂತೆ
ತನ್ನೀಲಿ ಬಣ್ಣವನ್ನು ಸಂಜೆಯಾಗುತ್ತಲೇ
ಕೆಂಪಗೆ ಘನೀಕರಿಸಿಕೊಂಡು ಬಿಡುತ್ತದೆ.
•
ಈ ಚಳಿಯ ನಡುವೊಮ್ಮೆ ಸಂಜೆಗೆ
ಸುರಿದು ಬಿಡು ಮಳೆಯಾಗಿ,
ಆವತ್ತು ಹಾಕದೆ ಉಳಿಸಿಕೊಂಡಿದ್ದ ಕಣ್ಣೀರು
ಹಾಕಬೇಕಿದೆ ನಾನು.-
ಅಸ್ಮಿತಕ್ಕಾ....
ಏನ್ ಗೊತ್ತಾ,
ನಂಗೆ ಏನನ್ನಾದರೂ ಓದ್ಬೇಕಲ್ಲ ಅನಿಸಿದ್ರೆ ನಿಮ್ಮ ಬರಹ ಹುಡುಕಿ ಬರ್ತೀನಿ; ಓದಿ ಖುಷಿಯಾಗ್ತೀನಿ.
ಕೆಲ್ವೊಮ್ಮೆಯಂತೂ
ಸಧ್ಯಕ್ಕೇನು ಓದಲೇ ಬಾರದು ಅದು ಕಾದಂಬರಿ ಪುಸ್ತಕವಾದರೂ ಸರಿ
ಮೊಬೈಲ್'ನಲ್ಲಾದರೂ ಸರಿ
ಸುಮ್ಮನೆ ಕಾಲೇಜು, ಪರೀಕ್ಷೆಯ ಕಡೆಗೆ ಗಮನ ಹರಿಸಬೇಕಷ್ಟೆ
ಅಂದುಕೊಂಡಿರುತ್ತೀನಿ
ಆಗಲೂ ನಿಮ್ಮ ಬರಹಗಳ ಬಿಕ್ಕಳಿಕೆ ಹತ್ತಿ ಬಿಡುತ್ತದೆ
ಮತ್ತೆ ಓದ ಬರುತ್ತೇನೆ, ಓದಿ ತಣಿತೀನಿ; ಹಗುರಾಗ್ತೀನಿ!-