ಕ್ರೋಧಿ ಸಂವತ್ಸರ ಹಿಮ್ಮೆಟ್ಟಿ ಕಳೆದು
ಮರಳಿ ಬಂದಿದೆ ನಂಬಿಕೆಯ ಯುಗಾದಿ
ಹೊಸತನದ ವಿಶ್ವಾಸವ ಮನಕೆ ಬೆಸೆದು
ವಿಶ್ವಾವಸು ನಾಮ ತಂದಿದೆ ಶುಭ ಸರದಿ
ಬಾಳಯಾನದ ಭರವಸೆಯ ಸಾಲುಗಳು
ಭಾವದೊಲುಮೆಯಲಿ ನಿತ್ಯ ಸವಿ ವಸಂತ
ಎಂದೂ ಬತ್ತದಿರಲಿ ಹೃನ್ಮನದ ಭಾವಗಳು
ಮೊಳಗಿದೆ ಹರುಷದ ಹೊನಲು ಅನಂತ
ಪ್ರಕೃತಿಯು ಮೈ ಕೊಡವಿ ನಲಿಯಲು
ಜೀವ ಸಂಕುಲಕ್ಕೆ ಚೈತನ್ಯವ ತಂದಿದೆ
ಚೈತ್ರಗಾನ ನವಶಕ್ತಿ ಯುಕ್ತಿ ಸೂಸಲು
ಸಂಪ್ರೀತಿ ಸಾಮರಸ್ಯ ಬಾಳು ನೀಡಿದೆ
ಯುಗಾದಿ ಹಬ್ಬದ ಶುಭಾಶಯಗಳು-
ಹುಟ್ಟಿದಾಗ ಹೆತ್ತವರಿಂದ
ನಿನಗೆ ಅಂದದ ಹೆಸರು
ಬಾಳತೇರಿನ ಪಯಣದಿಂದ
ನೀಡು ಅವರಿಗೆ ನೆಮ್ಮದಿ ಉಸಿರು-
ಜೀವದ ಪ್ರಾಣ ಉಳಿದಂತೆ
ಜೀವರಾಶಿ ಸಂರಕ್ಷಣೆಯಂತೆ
ಅನ್ನಧಾತನಿಗೆ ಉಸಿರಿನಂತೆ
ಅಂತರ್ಜಲ ಕಾಪಾಡಿದಂತೆ
ನಿಸರ್ಗವು ನಿತ್ಯವೂ ನಕ್ಕಂತೆ
-
ಸತ್ಯವಿದ್ದರೆ ವಿಜಯದ ಬೆಳಕು
ಸುಳ್ಳು ತರುವುದು ಬಾಳಿಗೆ ಕೆಡಕು
ನ್ಯಾಯ ನೀತಿ ಪರಿಪಾಲಿಸಬೇಕು
ಸನ್ಮಾರ್ಗದತ್ತ ಜೀವನ ಸಾಗಬೇಕು-
ಆಡಂಬರಕ್ಕಾಗಿ ಸಮಾಜಸೇವೆ
ಮಾಡುವ ಅಗತ್ಯವಿಲ್ಲ
ಹೆತ್ತವರ ಸೇವೆ ಮಾಡಿ
ಬಾಳು ಸಾರ್ಥಕಗೊಳಿಸಬಹುದಲ್ಲ
-
ನಡೆ ನುಡಿಯಲ್ಲಿರಲಿ ನೈಜತೆ
ಬಾಹ್ಯ ಸೌಂದರ್ಯ ಗೌಣ್ಯತೆ
ಆಂತರಿಕ ಸದ್ಗುಣ ಸೌಮ್ಯತೆ
ಇರಲು ಬಾಳು ನಿತ್ಯ ರಮ್ಯತೆ
-
ಹೆತ್ತವರ ನೋವಿನ ಯಾತನೆ
ಬಿಡದು ಎಂದೂ ನಿನಗೆ ಸುಮ್ಮನೆ
ಯೋಚಿಸು ಅವರ ಬಗ್ಗೆ ಚಿಂತನೆ
ಜೊತೆಯಾಗಿರು ನಗುತ ಸಂವೇದನೆ-
ಹಿಂದೂ ಸಾಮ್ರಾಜ್ಯದ ವೀರಾಧಿಪತಿ
ಮರಾಠ ಭವ್ಯ ಮಣ್ಣಿನ ಅಧಿಪತಿ
ಸೋಲಿಗೆ ಹೆದರದ ಶೂರಾಧಿಪತಿ
ಪುಣ್ಯಪುರುಷ ಶಿವಾಜಿ ಛತ್ರಪತಿ-
ದುಃಖಿತರಿಗೆ ಸಹಾಯಹಸ್ತ ಮಾಡು
ಸ್ವಾರ್ಥತೆಯ ದುರ್ಗುಣ ಬಿಟ್ಟು ಬಿಡು
ಬಾಳಲಿ ಕಷ್ಟ ಸುಖ ಸಹಜ ನೋಡು
ಹೃದಯವಂತಿಕೆಗೆ ಬಾರದು ಎಂದೂ ಕೇಡು-
ನಿನ್ನೊಲವ ಭವ್ಯ ತೋಟಕೆ
ಇರದಿರಲಿ ಯಾವ ಬೇಲಿ
ನನ್ನೊಲವ ಪ್ರೀತಿ ಸೌಧಕೆ
ಹಾಕಲು ಅಸಾಧ್ಯವು ಕೀಲಿ !!-