ಅಪ್ಪ ಎಂದರೆ ಬರೀ ಶಬ್ದವಲ್ಲ, ಭದ್ರತೆ
ಜೀವನದುದ್ದಕ್ಕೂ ನೀಡಿದ ಅಭಯ
ಮೊದಲ ಹೆಜ್ಜೆಗೆ ಜೊತೆಯಾದ ಕಾಲುಗಳು
ಕಣ್ಣುಗಳು ಹೇಳಿದ ಸಾವಿರ ಕಿವಿಮಾತು
ದಂಡನೆಗಿಂತ ತನ್ನ ಕೃತ್ಯಗಳಲ್ಲಿಯೇ
ಬದುಕಿನ ಪಾಠವನ್ನು ವಿವರಿಸಿದ
ಮಹಾಗುರು
ಸವಾಲುಗಳಿಗೆ ಗುರಾಣಿಯಂತೆ ನಿಂತು
ಕುಟುಂಬವೆಂಬ ದೋಣಿಯ ದೃಢವಾಗಿ ಸಾಗಿಸಿ
ಕಷ್ಟಗಳನ್ನು ಸುಲಲಿತವಾಗಿ ಕರಗಿಸಿದ ಪ್ರೀತಿಯ ಜ್ವಾಲೆ
ಅದೆಷ್ಟೋ ಅರ್ಥಗಳು ಕಣ್ರೆಪ್ಪೆಯ ಸನ್ನೆಯಲ್ಲಿ
ನೋಟದಲ್ಲೇ ಸಾವಿರ ಪದಗಳ ಸಾರ ತಿಳಿಸಿದ
ಮಹಾಕವಿ
ಬೆವರ ಹನಿಯಲ್ಲೂ ಭವಿಷ್ಯದ ನೋಟ
ಅನುಕರಣೆಗೆ ಯೋಗ್ಯ ನಡೆನುಡಿ
ನೇರ ಮಾತು ಪ್ರೇರಣೆಯ ಬದುಕು
ಸದಾ ಹಿತವನ್ನೇ ಬಯಸುವ ಕಾಯ
ಕನಸುಗಳಿಗೆ ಸುಂದರ ಬಣ್ಣ ತುಂಬಿದ
ಮೇರು ವ್ಯಕ್ತಿತ್ವ
ಬಾಪ, ನನ್ನ ಆಲೋಚನೆಗಳಿಗೆ
ದಿಕ್ಸೂಚಿಯಾಗಿ ನಿಂತ ಜೀವಮಾನದ ರತ್ನ-
ಬರೆದರೆ ಪದಗಳ ಮಾಲೆ
ಮಿನುಗುವ ನಕ್ಷತ್ರ ತಾರೆ!
ನಗಿಸುವ ಖುಷಿಯ ಶಾಲೆ
ಶೋಭಿಸುವ ಮಾನಸ ನೀರೆ!
ಪ್ರೀತಿಯ ಬರಹ ಲ... read more
ನಕಾರಾತ್ಮಕ ಆಲೋಚನೆಗಳೇ
ನಮ್ಮನ್ನು ಸುತ್ತುವರಿಯುವುದು
ವಾಸ್ತವವ ಅರಿತು ಭಯವನ್ನು ತೊರೆದು
ಬದುಕಲು ಕಲಿತಾಗ ಮಾತ್ರ
ಹಗುರವಾದ ಅನುಭವವ ಪಡೆಯಬಹುದು.-
ತ್ಯಾಗ, ಪ್ರೀತಿ ಹಾಗೂ ಕರುಣೆಯ
ಸಂದೇಶವ ಸಾರುವ ಈ ಪವಿತ್ರ ದಿನವು
ನಮ್ಮ ಜೀವನದಲ್ಲಿ ಹೊಸ ಭರವಸೆ ಮತ್ತು
ನಾಡಿನೆಲ್ಲಡೆ ಸೌಹಾರ್ದತೆಯ ತರಲಿ.
ನಮ್ಮೆಲ್ಲಾ ಪ್ರಾರ್ಥನೆಗಳು
ಪರಮದಯಾಮಯನಲ್ಲಿ ಸ್ವೀಕೃತವಾಗಲಿ.
ಆಮೀನ್🤲-
ಮಾಙೆ,ಚಕ್ಕೆರೆ ಸೀಝನ್ ತೊಡಂಙಿರ್
ತೇನೀಪೆ ಔಡೌಡೆ ಚುತ್ತಿಯೋಂಟಿಕ್ಕ್‌ರ್
ನಙಮೆ ದೂರ ನಿಕ್ಕೊನು ಚೊಮ್ಮೆಜಾಗ್ರತೆಲ್
ತೇನೀಪೆ ನಙೊಗು ಕಡ್ಕಿರೆದ್ರೆ ಕಾಂಟ್ ಮುನ್ನೊಲು-
ನಾನು ಸತ್ಯವೆಂದು ಹೇಳಿದಾಗ
ಇಲ್ಲ ಇಲ್ಲ ಅದು ಸುಳ್ಳು ಎಂದು
ನನ್ನನ್ನೇ ಯಾಮಾರಿಸಲೊರಟ್ಟಿದ್ದರು.
ಆದರೆ ಅದುವೇ ಸತ್ಯವಾಗಿತ್ತೆಂದು ಇಂದು ಸಾಕ್ಷಿ
ಸಮೇತ ಸಿಕ್ಕಿಬಿದ್ದಿರುವರು.
ನಾನೀಗ ನಗಬೇಕೋ.. ??
ಅಲ್ಲ ಅವರ ಪೆದ್ದುತನದ ಮಾತನ್ನು
ಹಾಗೆಯೇ ಮುಂದುವರಿಸಿಕೊಂಡು ಹೋಗಲೋ?
ಇರಲಿ, ಕಾಲವು ಉತ್ತರಿಸಲಿದೆ ಎಂಬ ನಾಣ್ಣುಡಿ ಮಾತ್ರ
ಸತ್ಯವಾಗಿ ಕಣ್ಣಮುಂದೆ ಇದೆ.-
ಹಾಸ್ಯ, ಚುರುಕುತನ ಮತ್ತು
ಸೂಕ್ಷ್ಮತೆಯ ಭಾವಕ್ಕೆ ಬೂಕರ್ ಗರಿ
ಮಹಿಳೆಯ ಜೀವನ ಮತ್ತು ಸವಾಲುಗಳಿಗೆ
ಧ್ವನಿಯಾದ ಸೃಜನಶೀಲತೆಗಿದು ಸಾಧನಾಕೇರಿ-
ಎದೆಯನ್ನು ತಟ್ಟಿದೆ
ಒಂದು ಮೌನ ಸ್ಪರ್ಶ,
ದುಷ್ಟರಿಗೆ
ಇನ್ಯಾವಾಗ ಮೂಡುವುದೊ
ಮನುಷ್ಯತ್ವದ ಅರಿವು?-
ಕ್ಷಮೆಯ ಮಳೆಯು ಸುರಿಯುವ ರಾತ್ರಿ
ಕರವನೆತ್ತಿ ಬೇಡಿದವನಿಗೆ ಉತ್ತರ ಸಿಗುವ ರಾತ್ರಿ
ಪ್ರಾರ್ಥನೆ ಮೂಲಕ ಕರುಣೆ ಪಡೆವ ರಾತ್ರಿ
ಶಾಂತತೆ ನೀಡುವ ಪುಣ್ಯ ತುಂಬಿದ ರಾತ್ರಿ
ಸಾವಿರ ತಿಂಗಳುಗಳಿಗಿಂತ ಶ್ರೇಷ್ಠತೆಯ ರಾತ್ರಿ
ನಕ್ಷತ್ರಗಳು ಖುಷಿಯಿಂದ ಮಿನುಗುವ ರಾತ್ರಿ
ತೌಬಾದ ಶಿಸ್ತಿಗೆ ಪ್ರತಿಧ್ವನಿ ಮೊಳಗುವ ರಾತ್ರಿ
ಪಾರಾಯಣಗೈದವರನ್ನು ಗುರುತಿಸುವ ರಾತ್ರಿ
ದಾನಕ್ಕೆ ಫಲವ ನೀಡುವ ಪುಣ್ಯದಾಯಕ ರಾತ್ರಿ
ದೇವಸ್ಮರಣೆಯಲ್ಲಿ ನಮ್ಮನ್ನರ್ಪಿಸುವ ಮಹತ್ವ ರಾತ್ರಿ
ದೇವದೂತರು ಭೂಮಿಗೆ ಆಗಮನದ ಪವಿತ್ರ ರಾತ್ರಿ
ಸತ್ಕಾರ್ಯ ಸದಾಚಾರಗಳಿಗೆ ಆಶೀರ್ವಾದದ ರಾತ್ರಿ
-
ಬಾಹ್ಯಾಕಾಶದಲ್ಲಿ ಹಾರಾಡಿದ ಹಕ್ಕಿ
ಧರೆಗಿಳಿದು ಬಂದಿತು ಖುಷಿಯಿಂದ ನಕ್ಕು
ಗಟ್ಟಿಗಿತ್ತಿಯ ಅಮೋಘ ಸಾಹಸವಿದು
ನಮಗೂ ನಿಮಗೂ ಪ್ರೇರಣೆಯ ಬೆಳಕು
-
ಅಲ್ಲಾಹನೇ, ನಮ್ಮಯ ಪರಿಸ್ಥಿತಿಗಳನ್ನು ನಿನ್ನ ಔದಾರ್ಯ ವೆಂದೇ ಅನುಭವಿಸುತ್ತಾ ಬಂದಿದ್ದೇವೆ. ಸತ್ಯವಂತರ ಸಾಲಿನಲ್ಲಿ ನಮ್ಮನ್ನು ಸೇರಿಸು. ಬಂದೆರಗುವ ದುಷ್ಟತೆಗಳ ಮೇಲೆ ನಿನ್ನಯ ರಕ್ಷೆಯನ್ನು ಬೇಡುತ್ತಿರುವೆನು.
-